Holi 2025: ಹೋಳಿ ಹಬ್ಬದ ಪ್ರಯುಕ್ತ ಮೈಸೂರಿಗೆ ವಿಶೇಷ ರೈಲು ಸಂಚಾರ..ವಿವರ

ಹುಬ್ಬಳ್ಳಿ, ಮಾರ್ಚ್‌ 11: ಹೋಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ಜನದಟ್ಟಣೆಯನ್ನು ಸರಿದೂಗಿಸಲು ನೈಋತ್ಯ ರೈಲ್ವೆಯು ಮೈಸೂರು-ದಾನಾಪುರ ಮತ್ತು ವಾಸ್ಕೋ ಡ ಗಾಮಾ-ಪಾಟ್ನಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲಿದೆ. ಪ್ರಯಾಣಿಕರು ಗಮನಿಸಲೇಬೇಕಾದ ಮುಖ್ಯವಾದ ವಿವರಗಳು ಈ ಕೆಳಗಿನಂತಿವೆ:

1. ಮೈಸೂರು-ದಾನಾಪುರ ನಡುವೆ ಒಂದು ಟ್ರಿಪ್ ವಿಶೇಷ ರೈಲು (06211/06212) ಸಂಚಾರ

ರೈಲು ಸಂಖ್ಯೆ 06211 ಮೈಸೂರು-ದಾನಾಪುರ ವಿಶೇಷ ಎಕ್ಸ್ಪ್ರೆಸ್ ರೈಲು ಮಾರ್ಚ್ 11 ರಂದು ಬೆಳಿಗ್ಗೆ 10:05ಕ್ಕೆ ಮೈಸೂರಿನಿಂದ ಹೊರಟು, ಮಾರ್ಚ್ 13 ರಂದು ಸಂಜೆ 5:00 ಗಂಟೆಗೆ ದಾನಾಪುರ ತಲುಪಲಿದೆ.

Holi 2025 Mysuru to Danapur Special Train Services For Holi Festival

ಇದೇ ರೈಲು (06212), ಮಾರ್ಚ್ 16 ರಂದು ಬೆಳಗಿನ ಜಾವ 01:05 ಕ್ಕೆ ದಾನಾಪುರದಿಂದ ಹೊರಟು, ಮಾರ್ಚ್ 18 ರಂದು ಬೆಳಿಗ್ಗೆ 03:40 ಕ್ಕೆ ಮೈಸೂರಿಗೆ ಆಗಮಿಸಲಿದೆ.

ಮಾರ್ಗದಲ್ಲಿ, ಈ ರೈಲು ಮಂಡ್ಯ, ಕೆಎಸ್ಆರ್ ಬೆಂಗಳೂರು, ಯಶವಂತಪುರ, ತುಮಕೂರು, ಅರಸೀಕೆರೆ, ದಾವಣಗೆರೆ, ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ, ಪುಣೆ, ಮನ್ಮಾಡ್, ಭೂಸಾವಲ್, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಪ್ರಯಾಗ್ ರಾಜ್ ಛಿಯೋಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸರ್ ಮತ್ತು ಅರಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ವಿಶೇಷ ರೈಲು 1 ಎಸಿ ಟು ಟೈರ್ ಕಮ್ ಎಸಿ ತ್ರೀ ಟೈರ್, 3 ಎಸಿ ತ್ರಿ ಟೈರ್, 13 ಸ್ಲೀಪರ್ ಕ್ಲಾಸ್, 2 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ ಒಟ್ಟು 21 ಬೋಗಿಗಳನ್ನು ಹೊಂದಿರುತ್ತದೆ.

2. ವಾಸ್ಕೋ ಡ ಗಾಮಾ-ಪಾಟ್ನಾ ನಡುವೆ ಒಂದು ಟ್ರಿಪ್ ವಿಶೇಷ ರೈಲು (07311/07312) ಸಂಚಾರ

ರೈಲು ಸಂಖ್ಯೆ 07311 ವಾಸ್ಕೋ ಡ ಗಾಮಾ-ಪಾಟ್ನಾ ವಿಶೇಷ ಎಕ್ಸ್ಪ್ರೆಸ್ ರೈಲು ಮಾರ್ಚ್ 11 ರಂದು ಸಂಜೆ 4:00 ಗಂಟೆಗೆ ವಾಸ್ಕೋ ಡ ಗಾಮಾದಿಂದ ಹೊರಟು, ಮಾರ್ಚ್ 13 ರಂದು ಬೆಳಿಗ್ಗೆ 10:30 ಕ್ಕೆ ಪಾಟ್ನಾ ತಲುಪಲಿದೆ.

ಇದೇ ರೈಲು (07312), ಮಾರ್ಚ್ 15 ರಂದು ಸಂಜೆ 5:40ಕ್ಕೆ ಪಾಟ್ನಾದಿಂದ ಹೊರಟು, ಮಾರ್ಚ್ 17 ರಂದು ಬೆಳಿಗ್ಗೆ 10:30 ಕ್ಕೆ ವಾಸ್ಕೋ ಡ ಗಾಮಾಗೆ ಆಗಮಿಸಲಿದೆ.

ಈ ರೈಲು ಎರಡೂ ಮಾರ್ಗಗಳಲ್ಲಿ ಮಡಗಾಂವ್, ಥಿವಿಮ್, ಸಾವಂತವಾಡಿ ರೋಡ್, ರತ್ನಗಿರಿ, ಚಿಪ್ಲುನ್, ರೋಹಾ, ಪನ್ವೇಲ್, ಕಲ್ಯಾಣ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ಜಬಲ್ಪುರ, ಕಟ್ನಿ, ಸತ್ನಾ, ಪ್ರಯಾಗರಾಜ್ ಚೀಯೊಕಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ ಮತ್ತು ದಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ವಿಶೇಷ ರೈಲು 1 ಎಸಿ ಟು ಟೈರ್, 5 ಎಸಿ ತ್ರಿ ಟೈರ್, 12 ಸ್ಲೀಪರ್ ಕ್ಲಾಸ್, 1 ಬ್ರೇಕ್, ಲಗೇಜ್ ಕಮ್ ಜನರೇಟರ್ ಕಾರ್ ಮತ್ತು 1 ಎಸ್ಎಲ್ಆರ್/ಡಿ ಬೋಗಿಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಹೊಂದಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್‌ ಅಥವಾ 139ಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಆಗಮನ/ನಿರ್ಗಮನದ ಸಮಯವನ್ನು ಪರಿಶೀಲಿಸಬಹುದು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+