ಹುಬ್ಬಳ್ಳಿ; ವೈಮಾನಿಕ ತರಬೇತಿ ಕೇಂದ್ರಕ್ಕೆ ಸೇರಲು ಅರ್ಹತೆಗಳು

ಹುಬ್ಬಳ್ಳಿ, ಏಪ್ರಿಲ್ 13; ಉತ್ತರ ಕರ್ನಾಟಕ ಭಾಗದ ಜನರಿಗೆ ಸಹಾಯಕವಾಗುವಂತೆ ವೈಮಾನಿಕ ತರಬೇತಿ ಶಾಲೆ ಹುಬ್ಬಳ್ಳಿಯಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಮುಂಬೈ ಮೂಲದ ಕಂಪನಿ ಟೆಂಡರ್ ಸಲ್ಲಿಕೆ ಮಾಡಿದೆ. ಟೆಂಡರ್ ಅಂತಿಮಗೊಳಿಸುವ ಕಾರ್ಯ ಶೀಘ್ರವೇ ನಡೆಯಲಿದೆ.

ಮುಂಬೈ ಮೂಲಕ ಇಕ್ವಿ ಏರ್‌ ಟೆಂಡರ್ ಸಲ್ಲಿಕೆ ಮಾಡಿದ್ದು, 15 ರಿಂದ 20 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಟೆಂಡರ್ ಸಲ್ಲಿಕೆ ಮಾಡಿರುವ ಕುರಿತು ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿಗಳು ಸಹ ಖಚಿತಪಡಿಸಿದ್ದಾರೆ.

ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಎರಡು ವೈಮಾನಿಕ ತರಬೇತಿ ಶಾಲೆಗಳು ಆರಂಭವಾಗಲಿದೆ. ಮೊದಲ ಹಂತದಲ್ಲಿ ಬೆಳಗಾವಿಯಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಕ್ಕೆ ಅನುಮೋದನೆ ಸಿಕ್ಕಿದ್ದು, ಜೂನ್ ತಿಂಗಳಿನಿಂದ ಇದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

Ekvi Air Aviation Bagged Tender To Set Up Flying Institute Hubballi

ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶ್ ಕುಮಾರ್ ಮೌರ್ಯ ಈ ಕುರಿತು ಮಾತನಾಡಿದ್ದು, "ರೆಡ್ ಬ್ರಿಡ್ ಏವಿಯೇಷನ್ ಎಂಬ ದೆಹಲಿ ಮೂಲದ ಸಂಸ್ಥೆಗೆ ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಟೆಂಡರ್ ನೀಡಲಾಗಿದೆ" ಎಂದು ಹೇಳಿದ್ದಾರೆ.

ಟ್ಯಾಕ್ಸಿ ವೇ ಸೇರಿದಂತೆ ಇತರ ಕಾರ್ಯಗಳು ನಡೆಯುತ್ತಿವೆ. ಈ ಕಾಮಗಾರಿ ಜೂನ್‌ನಲ್ಲಿ ಪೂರ್ಣಗೊಳ್ಳುವ ನೀರಿಕ್ಷೆ ಇದೆ. ಯಾವ ಕೋರ್ಸ್‌ಗಳಿಗೆ ಎಷ್ಟು ಶುಲ್ಕವಿರಲಿದೆ ಎಂದು ಬಳಿಕ ಮಾಹಿತಿ ನೀಡಲಾಗುತ್ತದೆ. ಈಗ ಹುಬ್ಬಳ್ಳಿಯಲ್ಲಿನ ವೈಮಾನಿಕ ತರಬೇತಿ ಶಾಲೆಗೂ ಸಹ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತ ತಲುಪಿದೆ.

ಬೆಳಗಾವಿ, ಹುಬ್ಬಳ್ಳಿ ವೈಮಾನಿಕ ತರಬೇತಿ ಶಾಲೆಗೆ 5 ಸಾವಿರ ಚದರ ಮೀಟರ್ ಜಾಗವನ್ನು 25 ವರ್ಷಗಳ ಅವಧಿಗೆ ಬಾಡಿಗೆಗೆ ನೀಡಲಾಗುತ್ತದೆ. ವಿಮಾನ ನಿಲ್ದಾಣದ ಆವರಣದಲ್ಲಿಯೇ ಕಚೇರಿ, ಶಾಲೆ ಮತ್ತು ಇತರ ಕಾರ್ಯಗಳಿಗೆ ಈ ಜಾಗವನ್ನು ಬಳಕೆ ಮಾಡಿಕೊಳ್ಳಬಹುದು.

ಈಗಾಗಲೇ ಎರಡು ವಿಮಾನ ನಿಲ್ದಾಣಗಳಲ್ಲಿ ವೈಮಾನಿಕ ತರಬೇತಿ ಶಾಲೆ ಆರಂಭಿಸಲು ಅಗತ್ಯ ಇರುವಷ್ಟು ಜಾಗ ಲಭ್ಯವಿದೆ. ಬೆಳಗಾವಿಯಲ್ಲಿ ಮೊದಲ ಬ್ಯಾಚ್‌ನಲ್ಲಿ 50 ವಿದ್ಯಾರ್ಥಿಗಳು ದಾಖಲಾಗುವ ನಿರೀಕ್ಷೆ ಇದೆ. ಹುಬ್ಬಳ್ಳಿಯಲ್ಲಿ 30 ವಿದ್ಯಾರ್ಥಿಗಳು ದಾಖಲಾಗಲಿದ್ದಾರೆ.

ಈ ವೈಮಾನಿಕ ತರಬೇತಿ ಶಾಲೆಗಳು ಯವಕ/ ಯುವತಿಯರಿಗೆ ಕಮರ್ಷಿಯಲ್ ಪೈಲೆಟ್ ಲೈಸೆನ್ಸ್, ಖಾಸಗಿ ಪೈಲೆಟ್ ಲೈಸೆನ್ಸ್, ವಿಮಾನ ನಿರ್ವಹಣೆ ಇಂಜಿನಿಯರಿಂಗ್, ಕಾಕ್ ಪಿಟ್ ಕ್ಯಾಬಿನ್ ಸಿಬ್ಬಂದಿ ತರಬೇತಿ ನೀಡಲಾಗುತ್ತದೆ.

ವೈಮಾನಿಕ ತರಬೇತಿ ಶಾಲೆಯಲ್ಲಿ ಕ್ಯಾಬಿನ್ ಸಿಬ್ಬಂದಿ ತರಬೇತಿಗೆ 10+ ಮತ್ತು ಇತರ ಕೋರ್ಸ್‌ಗಳಿಗೆ ಸೇರಲು 12+ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ.

ಕೋವಿಡ್ ಪರಿಸ್ಥಿತಿ ಬಳಿಕ ವಿಮಾನಯಾನ ಕ್ಷೇತ್ರಕ್ಕೆ ಹೆಚ್ಚು ಬೇಡಿಕೆ ಉಂಟಾಗಿದೆ. ಇಂತಹ ಸಮಯದಲ್ಲಿಯೇ ಉತ್ತರ ಕರ್ನಾಟಕದಲ್ಲಿ ಎರಡು ಹೊಸ ವೈಮಾನಿಕ ತರಬೇತಿ ಶಾಲೆಗಳು ಆರಂಭವಾಗಲಿವೆ.

ಎಷ್ಟು ಪೈಲೆಟ್‌ಗಳ ಅಗತ್ಯವಿದೆ?: ಭಾರತಕ್ಕೆ ಪ್ರಸ್ತುತ 25,000 ಪೈಲೆಟ್‌ಗಳ ಅಗತ್ಯವಿದೆ. ಆದರೆ 22 ವಾಣಿಜ್ಯ ಸಂಚಾರ ನಡೆಸುವ ಪೈಲೆಟ್‌ಗಳು ಲಭ್ಯವಿದ್ದಾರೆ. ದೇಶದಲ್ಲಿ ಹಲವು ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತಿದ್ದು, ಪೈಲೆಟ್‌ಗಳಿಗೆ ಬೇಡಿಕೆ ಹೆಚ್ಚಲಿದೆ.

ಸದ್ಯ ವೈಮಾನಿಕ ತರಬೇತಿ ಪಡೆಯಲು ಇರುವ ಶುಲ್ಕಗಳು ಸಹ ಹೆಚ್ಚಿವೆ. ಪೈಲೆಟ್‌ಗಳ ವೇತನ ಸಹ ಹೆಚ್ಚಿದೆ. ಹುಬ್ಬಳ್ಳಿಯಲ್ಲಿ ಆರಂಭವಾಗಲಿರುವ ಶಾಲೆ 6 ತಿಂಗಳ ತರಬೇತಿಗೆ 30 ರಿಂದ 35 ಲಕ್ಷ ರೂ. ಶುಲ್ಕ ವಿಧಿಸುವ ಸಾಧ್ಯತೆ ಇದೆ. ವಿವಿಧ ಕೋರ್ಸ್‌ಗಳಿಗೆ ವಿವಿಧ ಶುಲ್ಕಗಳು ಇರಲಿವೆ.

ಸಾಮಾನ್ಯ ಪೈಲೆಟ್ ವೇತನ ತಿಂಗಳಿಗೆ ಮೂರು ಲಕ್ಷದಷ್ಟು ಇರುತ್ತದೆ. ಕ್ಯಾಪ್ಟನ್ ಆದರೆ 7 ಲಕ್ಷದ ತನಕ ವೇತನ ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+