MUDA Scam Case: ಸೈಟ್ ವಾಪಾಸ್ ಕೊಟ್ಟರೆ ಪ್ರಕರಣ ಜಟೀಲ: ಬಸವರಾಜ ಬೊಮ್ಮಾಯಿ ಸಲಹೆ ಕೊಟ್ರಾ!

ಹುಬ್ಬಳ್ಳಿ, ಅಕ್ಟೋಬರ್ 01: ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ರಾಜಕೀಯ ಬದುಕಿನಲ್ಲಿ ಬಿರುಗಾಳಿ ಏಳಲು ಕಾರಣವಾದ ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಆರಂಭವಾಗಿದೆ. ಇದೀಗ 14 ನಿವೇಶನಗಳನ್ನು ಮರಳಿ ನೀಡಲು ನಿರ್ಧರಿಸಲಾಗಿದೆ. ಇದರಿಂದ ಸೈಟ್ ವಾಪಾಸ್ ಕೊಟ್ಟು ಮತ್ತಷ್ಟು ಜಟೀಲ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಮತ್ತು ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

ಈ ಕುರಿತು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮೈಸೂರು ನಗರಾಭಿವೃದ್ಧಿ (ಮುಡಾ) ಇಲಾಖೆಯಿಂದ ಪಡೆದ 14 ಸೈಟು ಮೊದಲೇ ವಿಧಾನಸೌಧದಲ್ಲಿಯೇ ವಾಪಾಸ್ ಕೊಟ್ಟು ಹೈಕೋರ್ಟ್ ನೇತೃತ್ವದಲ್ಲಿ ತನಿಖೆ ಮಾಡಿಸಿದ್ದರೆ ಸಿಎಂ ಸಿದ್ದರಾಮಯ್ಯನವರ ಪ್ರಾಮಾಣಿಕತೆ ಪ್ರಶ್ನೆ ಬರುತ್ತಿರಲಿಲ್ಲ ಎಂದು ಅವರು ಹೇಳಿದರು.

Basavaraj Bommai Responds to CM Siddaramaiah Wife Decided to Return 14 Plots of MUDA

ಈಗ ಪ್ರಕರಣ ದಾಖಲಾಗಿ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟು ಹೈಕೋರ್ಟ್ ನಲ್ಲಿ ಎಫ್ ಐಆರ್ ಆಗಿ ಸಾಕಷ್ಟು ವಾದ ವಿವಾದಗಳು ಬಂದ ಮೇಲೆ ಇನ್ನಷ್ಟು ಪ್ರಶ್ನೆಗಳು ಉದ್ಭವಿಸಿವೆ. ಅವುಗಳು ಮತ್ತಷ್ಟು ಜಠಿಲವಾಗಿವೆ. ಏನೇ ಆಗಲಿ ತನಿಖೆ ಮಾಡಲೇಬೇಕಾಗುತ್ತದೆ ಎಂದು, ಸೈಟ್ ವಾಪಾಸ್ ನೀಡಿದ್ದರಿಂದ ತನಿಖೆ ವಿನಾಯಿತಿ ಇಲ್ಲ ಎಂದು ಅವರು ಪರೋಕ್ಷವಾಗಿ ಗುಡುಗಿದರು.

ತಪ್ಪೇ ಆಗಿಲ್ಲ ಎಂಬಂತೆ ಕಾಂಗ್ರೆಸ್ಸಿಗರ ಸಮರ್ಥನೆ

ಇಷ್ಟು ದಿನಗಳ ಕಾಲ ಕಾಂಗ್ರೆಸ್ ನಾಯಕರು ಯಾವುದೇ ತಪ್ಪು ಆಗಿಯೇ ಇಲ್ಲ ಏನು ಆಗಿಯೇ ಇಲ್ಲ ಎಂದು ಸಮರ್ಥನೆ ಮಾಡಿಕೊಂಡು ಬಂದರು. ಆದರೆ ಈಗ ವಾಪಾಸ್ ಕೊಡುವುದರಿಂದ ಅಕ್ರಮ ಆಗಿದೆ ಅಂತಾ ಒಪ್ಪಿಕೊಂಡು ಆದಂತೆ ಆಗುತ್ತದೆ‌ ಎಂದರು. ಸೈಟ್ ವಾಪಾಸ್ ಕೊಟ್ಟಾಗ ಇದೇ ವಾದ ಮಾಡಿದ್ದರು. ಈಗ ಮುಡಾಗೆ ನಿವೇಶನ ವಾಪಸ್ ಕೊಟ್ಟರೆ ಇನ್ನಷ್ಟು ಜಟಿಲವಾಗಬಹುದು ಎಂದು ತಿಳಿಸಿದರು.

ಮನಿ ಲಾಡಿರಿಂಗ್ ಇಸಿಆರ್ ದೂರು ದಾಖಲಾದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಎಫ್ ಐ ಆರ್ ಅದ ಮೇಲೆ ತನಿಖೆ ಆಗಲೇಬೇಕಾಗಿತ್ತು. ಯುದ್ದಕ್ಕೆ ಮುಂಚೆಯೇ ಶಸ್ತ್ರಾಸ್ತ್ರ ತ್ಯಾಗ ಮಾಡಿದರಾ? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ನಿವೇಶನ ಹಂಚಿಕೆಯಲ್ಲಿ ಏನೇನು ಆಗಿದೆ ಎಂಬ ಮಾಹಿತಿ ಇದೆ. ಆದರೆ ವಾಪಾಸ್ ಕೊಟ್ಟಿದ್ದರಿಂದ ಮತ್ತುಷ್ಟ ತನಿಖೆ ವೇಗವಾಗಿ ಸಾಗಲಿದೆ ಎಂದರು.

ಕಾನೂನು ಹೋರಾಟ ಎಂದಿದ್ದ ಸಿಎಂ ಸಿದ್ದರಾಮಯ್ಯ

ಕಳದ ಕೆಲವು ತಿಂಗಳು ಗಳಿಂದ ಮುಡಾ ಹಗರಣ ಸದ್ದು ಮಾಡುತ್ತಿದೆ. ರಾಜ್ಯಪಾಲರ ಆದೇಶ ಪ್ರಶ್ನಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಅರ್ಜಿ ವಜಾಗೊಂಡ ಬೆನ್ನಲ್ಲೆ ಮೈಸೂರು ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ಕುರಿತು ಕಾನೂನು ಹೋರಾಟ ಮಾಡುವುದಾಗಿ ಕಾಂಗ್ರೆಸ್ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಹೇಳಿದ್ದರು.

ಅಷ್ಟರಲ್ಲಾಗಲೇ ಪತಿಯ ಮರಿಯಾದೆಗಾಗಿ, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ತಮ್ಮ ಹೆಸರಿನಲ್ಲಿದ್ದ ಸೈಟುಗಳನ್ನು ಮರಳಿ ಸರ್ಕಾರಕ್ಕೆ ನೀಡಲು ನಿರ್ಧರಿಸಿದ್ದಾರೆ. ಇದು ರಾಜಕೀಯವಾಗಿ ಬೇರೆ ಬೇರೆ ಆಯಾಮಗಳಲ್ಲಿ ಚರ್ಚೆ ಆಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+