ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಹುಬ್ಬಳ್ಳಿಯಲ್ಲೊಂದು ಚಿನ್ನಾರಿ ಬಾಲಕನ ವಾನರ ಸೈನ್ಯ

By ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಹುಬ್ಬಳ್ಳಿ , ಡಿಸೆಂಬರ್ 26 : ದ್ವಾಪರ ಯುಗದಲ್ಲಿ ಶ್ರೀ ರಾಮನ ಬಂಟ ಹನುಮಂತ ಹೇಗೋ ಹಾಗೆ , ಇಲ್ಲೊಬ್ಬ ಬಾಲಕನಿದ್ದಾನೆ ಅವನಿಗೂ ಕೂಡಾ ಹನುಮಂತನ ಹಾಗೆ ಬಂಟರಿದ್ದಾರೆ. ಕೇವಲ ಒಬ್ಬ ಇಬ್ಬರು ಅಲ್ಲಾ ,ಇವನ ಬಳಿ ಸುಮಾರು 10 ರಿಂದ 15 ರ ಮಹಾನ್ ವಾನರ ಸೈನ್ಯವೇ ಇದೆ . ಅಷ್ಟಕ್ಕೂ ಈ ಕಲಿಯುಗದ ಆ ವಾನರ ಸೈನ್ಯ ಹೇಗಿದೆ ಗೊತ್ತಾ ಈ ಸ್ಟೋರಿ ಓದಿ.

  ಅಂದ ವಾನರ ಸೈನ್ಯದೊಂದಿಗೆ ಆಟವನ್ನು ಆಡುವ ಪುಟಾಣಿ ಹೆಸರು ಸಮರ್ಥ ಬಂಗಾರಿ. ಈತನೇ ಈ ವಾನರ ಸೈನ್ಯದ ದಳಪತಿ. ಅಂದಹಾಗೇ ಕಳೆದ ಮೂರ್ನಾಲ್ಕು ತಿಂಗಳಿಂದ ಮಂಗಗಳ ಗ್ಯಾಂಗ್ ಕಟ್ಟಿಕೊಂಡಿದ್ದಾನೆ ಈತ. ಮುಂಜಾನೆ ಅವುಗಳೇ ಬಂದು ಎಬ್ಬಿಸುತ್ತವೆ. ಈತ ಇನ್ನೂ ಮಲಗಿದ್ದರೆ ಮನೆ ಒಳಗೆ ಬಂದು ಹಾಸಿಗೆಯಿಂದ ಎಬ್ಬಿಸಿ ಕರೆದುಕೊಂಡು ಹೋಗುತ್ತವೆ.

  A boy and many monkeys, they are Friends!

  ಸಮರ್ಥ ಅವುಗಳಿಗೆ ಆಹಾರ ನೀಡಿ ಅವುಗಳೊಂದಿಗೆ ಆಟ ಆಡುತ್ತಾನೆ. ಅವು ಮುಂಜಾನೆ ಕೆಲಹೊತ್ತು ಸಮರ್ಥನೊಂದಿಗೆ ಕಾಲ ಕಳೆದು ಆಹಾರ ಅರಸಿಕೊಂಡು ಹೋಗುತ್ತವೆ. ಮತ್ತೆ ಸಂಜೆ ತನ್ನ ಗೆಳೆಯನನ್ನು ನೋಡಲು ಮಂಗಗಳು ಬರುತ್ತವೆ. ಮನೆಯವರು ಸಹ ಮೊದ- ಮೊದಲು ಭಯ ಪಡುತ್ತಿದ್ದರು. ಆದರೆ ಈಗ ಅಭ್ಯಾಸವಾದ ನಂತರ ಆಡಲು ಬಿಡುತ್ತಿದ್ದಾರೆ.

  ಇನ್ನೂ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮದ ಮೊಮ್ಮಗ ಈ ಸಮರ್ಥ. ಹೌದು ಕಳೆದ ಮೂರು ವರ್ಷಗಳ ಹಿಂದೆ ಅಲ್ಲಾಪುರ ಗ್ರಾಮದ ನಂದಾ ಎನ್ನುವ ಯುವತಿಯನ್ನು ಗದಗ ಜಿಲ್ಲೆಯ ನಿಲಗುಂದ ಗ್ರಾಮದ ಸುನೀಲ ಬಂಗಾರಿ ಜೊತೆ ಮದುವೆ ಮಾಡಿಕೊಂಡ್ತಾರೆ.

  ಕಳೆದ ಎರಡು ವರ್ಷ ನಾಲ್ಕು ತಿಂಗಳ ಹಿಂದೆ, ಶನಿವಾರ ಈ ಸಮರ್ಥ ಜನನವಾಗುತ್ತೇ. ಆದರೆ ಸಮರ್ಥನ ತಾಯಿ ನಂದಾ ಎರಡನೇಯ ಹೆರಿಗೆಗೆ ಅಲ್ಲಾಪುರ ಗ್ರಾಮಕ್ಕೆ ಬರ್ತಾಳೆ. ಆಗ ಸಮರ್ಥ ಮನೆ ಮುಂದೆ ರೊಟ್ಟಿ ತಿನ್ನುವಾಗ ಮಂಗಗಳು ಬರುತ್ತದೆ. ಆಗ ಆ ಮಂಗಗಳನ್ನು ನೋಡಿ ಹೆದರುತ್ತಾನೆ. ಮರುದಿನವೇ ಮಂಗಗಳಿಗೆ ರೊಟ್ಟಿಯನ್ನು ಕೊಟ್ಟು ಸ್ನೇಹಿತನಾಗಿಬಿಡುತ್ತಾನೆ. ಅಂದಿನಿಂದ ಆರಂಭವಾದ ಮಂಗಗಳ ಸ್ನೇಹ ಇನ್ನೂ ಹಾಗೇ ಮುಂದುವರೆದಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  A two years old boy, Samartha has many friends to play with him. But here a twist, he nevwr plays with friends like him but with monkeys around 10-15. Its story of boy belongs to Allapur village in Kundagol taluk of Dharwad district.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more