ಅಜ್ಜನಾದ ಖುಷಿಯಲ್ಲಿ ಕೌರವ ಬಿ.ಸಿ. ಪಾಟೀಲ್!
ಹಾವೇರಿ, ಜುಲೈ 1: ರಾಜ್ಯ ಕೃಷಿ ಸಚಿವ ಹಾಗೂ ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ್ ಅಜ್ಜನಾದ ಖುಷಿಯಲ್ಲಿದ್ದಾರೆ.
ಹೌದು. ಸಚಿವ ಬಿ.ಸಿ. ಪಾಟೀಲ್ ಮಗಳು ಸೃಷ್ಟಿ ಪಾಟೀಲ್ ಹಾಗೂ ಸುಜಯ್ ಬೇಲೂರು ದಂಪತಿಗಳಿಗೆ ಹೆಣ್ಣು ಜನನವಾಗಿದ್ದು, ಈ ಬಗ್ಗೆ ಸ್ವತಃ ಸೃಷ್ಟಿ ಪಾಟೀಲ್ ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
"ತಾಯಿಯಾಗುವ ಸೌಭಾಗ್ಯ ತಂದುಕೊಟ್ಟ ನನ್ನ ಮಗಳು. ನಿಮ್ಮೆಲ್ಲರ ಪ್ರೀತಿ ಹಾಗೂ ವಿಶ್ವಾಸದಿಂದ ನನ್ನ ಮಗಳು ಆರೋಗ್ಯವಾಗಿದ್ದಾಳೆ,'' ಎಂದು ತಿಳಿಸಿದ್ದಾರೆ.

ಇದೇ ವೇಳೆ ಕೃಷಿ ಸಚಿವ ಕೌರವ ಬಿ.ಸಿ. ಪಾಟೀಲ್‌ರು ತಾತನಾಗುತ್ತಿರುವ ಖುಷಿಯಲ್ಲಿದ್ದು, ಮೊಮ್ಮಗಳ ಆಗಮನದಿಂದ ಮನೆಯಲ್ಲಿ ಸಂಭ್ರಮ ಮನೆಮಾಡಿದೆ.
Recommended Video
ಹವಾಮಾನ ಇಲಾಖೆಯಿಂದ ಎಚ್ಚರಿಕೆಯ ಸೂಚನೆ! | Oneindia Kannada
ಇತ್ತೀಚಿಗೆ ಹಿರೇಕೆರೂರಿನ ಬಿ.ಸಿ. ಪಾಟೀಲರ ಮನೆಯಲ್ಲಿ ಸೃಷ್ಟಿ ಪಾಟೀಲ್ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನೆರವೇರಿಸಿಕೊಂಡಿದ್ದರು.












Click it and Unblock the Notifications