ರಸ್ತೆ ಅಪಘಾತದಲ್ಲಿ ಮರ್ಮಾಂಗಕ್ಕೆ ಕಾಯಂ ಊನ: ಯುವಕನಿಗೆ 17.66 ಲಕ್ಷ ಪರಿಹಾರ!

ಹಾವೇರಿ, ಜನವರಿ 25: ಹನ್ನೊಂದು ವರ್ಷದ ಹಿಂದೆ ರಸ್ತೆ ಅಪಘಾತದಲ್ಲಿ ಮರ್ಮಾಂಗಕ್ಕೆ ಪೆಟ್ಟು ಬಿದ್ದು ಅದು ಕಾಯಂ ಊನಗೊಂಡು ಮದುವೆಯಾಗಿ ಲೈಂಗಿಕ ಜೀವನ ನಡೆಸಲಾಗದ ಸ್ಥಿತಿ ತಲುಪಿದ್ದ ಹಾವೇರಿಯ ಯುವಕನಿಗೆ ಹೈಕೋರ್ಟ್ 17.66 ಲಕ್ಷ ರೂ. ಪರಿಹಾರವನ್ನು ನಿಗದಿಪಡಿಸಿದೆ.

ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಕೇವಲ 50 ಸಾವಿರ ರೂ. ಪರಿಹಾರ ನಿಗದಿಪಡಿಸಿದ್ದನ್ನು ಪ್ರಶ್ನಿಸಿ ಬಸವರಾಜು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾ. ಎ.ಆರ್. ಹೆಗಡೆ ನೇತೃತ್ವದ ವಿಭಾಗೀಯಪೀಠ ಈ ಆದೇಶ ನೀಡಿದೆ.

ನ್ಯಾಯಾಲಯ ಪರಿಹಾರದ ಮೊತ್ತವನ್ನು 10 ಲಕ್ಷಕ್ಕೆ ಹೆಚ್ಚಿಸಿದೆ, ಆದರೆ ಅದಕ್ಕೆ ಬಡ್ಡಿ ಎಲ್ಲಾ ಸೇರಿ ಒಟ್ಟು 17.68 ಲಕ್ಷ ರೂ.ಗಳನ್ನು ನೀಡಲು ವಿಮಾ ಕಂಪನಿಗೆ ಆದೇಶಿಸಿದೆ.

ಯುವಕ ಕೇಳಿದ್ದಕ್ಕಿಂತ ಹೆಚ್ಚಿನ ಪರಿಹಾರವನ್ನು ನಿಗದಿಪಡಿಸಿರುವ ವಿಭಾಗೀಯಪೀಠ, 14 ವರ್ಷದ ಯುವಕನಾಗಿದ್ದಾಗಲೇ ಅಪಘಾತಕ್ಕೀಡಾಗಿ ತನ್ನ ಮರ್ಮಾಂಗ ಕಾಯಂ ಊನಕ್ಕೆ ಒಳಗಾಗಿರುವ ಯುವಕನ ನೆರವಿಗೆ ಧಾವಿಸಿದೆ.

Karnataka HC enhances compensation to Rs 17.68 lakh to an Haveri accident victim

"ಯುವಕನಿಗೆ ಆಗಿರುವ ಊನ ಯಾವ ರೀತಿಯಲ್ಲೂ ಸರಿಪಡಿಸಲಾಗದು, ಅದರಿಂದ ಆತ ಮದುವೆಯಾಗಿ ಲೈಂಗಿಕ ಆನಂದವನ್ನು ಅನುಭವಿಸದ ಸ್ಥಿತಿ ತಲುಪಿದ್ದಾನೆ. ಒಂದು ವೇಳೆ ಆತ ಮದುವೆಯಾದರೂ ಆತ ತೃಪ್ತ ಲೈಂಗಿಕ ಸುಖ ಅನುಭವಿಸಲಾರನು ಮತ್ತು ತನ್ನದೇ ಮಕ್ಕಳನ್ನು ಪಡೆಯಲು ಸಾಧ್ಯವಿಲ್ಲ''ಎಂದು ನ್ಯಾಯಾಲಯ ಹೇಳಿದೆ.

"ವೈಕಲ್ಯದಿಂದಾಗಿ ಅರ್ಜಿದಾರರು ಮದುವೆಯಾಗುವ ಸಂಭವನೀಯತೆ ಇಲ್ಲ, ಆತ ವೈವಾಹಿಕ ಸುಖದಿಂದಿಂದ ವಂಚಿತನಾಗುತ್ತಿದ್ದಾನೆ. ಆತನಿಗೆ ಆಗುವ ನಷ್ಟವನ್ನು ಆರ್ಥಿಕ ರೂಪದಲ್ಲಿ ಸರಿಪಡಿಸಲು ಸಾಧ್ಯವೇ ಇಲ್ಲ. ಆದರೂ ಸಹ ಆತ ತನ್ನ ಮುಂದಿನ ಜೀವನದುದ್ದಕ್ಕೂ ಅನುಭವಿಸಲಿರುವ ಮಾನಸಿಕ ಯಾತನೆಗೆ ಬೆಲೆ ಕಟ್ಟಲಾಗದು. ಆತ ಜೀವನವಿಡಿ ಒಂಟಿಯಾಗಿ ಕಾಲ ಕಳೆಯಬೇಕಾಗಿದೆ. ಹಾಗಾಗಿ ಪರಿಹಾರದ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತಿದೆ'' ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2011ರಲ್ಲಿ ಹಾವೇರಿ ಜಿಲ್ಲೆ ರಾಣೆಬೆನ್ನೂರಿನಲ್ಲಿ ನಡೆದ ಅಪಘಾತದಲ್ಲಿ ಬಸವರಾಜು ಗಂಭೀರವಾಗಿ ಗಾಯಗೊಂಡಿದ್ದರು, ಆತ ಮರ್ಮಾಂಗಕ್ಕೂ ತೀವ್ರ ಪೆಟ್ಟಾಗಿತ್ತು.

ಆತ ರಸ್ತೆ ಬದಿ ನಡೆದು ಹೋಗುತ್ತಿದ್ದಾಗ ಹಿಂದಿನಿಂದ ಬಂದ ಲಾರಿ ಢಿಕ್ಕಿ ಹೊಡೆದಿತ್ತು. ಆಗ ವೈದ್ಯರು ನೀಡಿದ ಪ್ರಮಾಣಪತ್ರದಂತೆ, ಬಸವರಾಜು ಗಂಭೀರ ಗಾಯಗೊಂಡಿದ್ದರು, ಆತನ ಮರ್ಮಾಂಗ ಕಾಯಂ ವೈಕಲ್ಯಕ್ಕೆ ಒಳಗಾಗಿರುವುದರಿಂದ ಲೈಂಗಿಕ ಜೀವನ ನಡೆಸಲಾಗದು ಎಂದು ಹೇಳಿದ್ದರು.

ಆದರೆ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ ಅರ್ಜಿದಾರರು 11.75 ಲಕ್ಷ ಪರಿಹಾರ ಕೇಳಿದ್ದರೂ ಸಹ ಕೇವಲ 50ಸಾವಿರ ರೂ. ಪರಿಹಾರ ನಿಗದಿಪಡಿಸಿ, ಬಡ್ಡಿ ಉಳಿದ ಮೊತ್ತ ಸೇರಿಸಿ 3.73 ಲಕ್ಷ ಪರಿಹಾರಕ್ಕೆ ಆದೇಶ ನೀಡಿತ್ತು. ಅದನ್ನು ಪ್ರಶ್ನಿಸಿ ಆತ ಮೇಲ್ಮನವಿ ಸಲ್ಲಿಸಿದ್ದನು. ನ್ಯಾಯಾಲಯ ಪರಿಹಾರದ ಮೊತ್ತವನ್ನು ಹೆಚ್ಚಿಸಿ ಯುವಕನಿಗೆ ನೆರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+