Haveri Lok Sabha Election Result: ಬಸವರಾಜ್ ಬೊಮ್ಮಾಯಿಗೆ ಜಯ
ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿರುವ ಕ್ಷೇತ್ರಗಳಲ್ಲಿ ಹಾವೇರಿ ಕ್ಷೇತ್ರವೂ ಒಂದು ಈ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಬಸವಾರಜ್ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿ ಯಾಗಿ ಭರ್ಜರಿ ಜಯ ಸಾಧಿಸಿದ್ದಾರೆ.
ಹಾವೇರಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ರಾಜಕೀಯ ರಂಗದಲ್ಲಿ ಆಕ್ಟಿವ್ ಆಗಿ, ರಾಜ್ಯದ ಮುಖ್ಯಮಂತ್ರಿ ಆಗಿರುವು ಬೊಮ್ಮಾಯಿ ಅವರಿಗೆ ಇದು ಪ್ರತಿಷ್ಠೆ ಆಗಿತ್ತು. ಈ ಚುನಾವಣೆಯಲ್ಲಿ ಗೆಲುವು ದಾಖಲಿಸುವ ಮೂಲಕ ಬೊಮ್ಮಾಯಿ, ದೆಹಲಿ ಫ್ಲೈಟ್ ಹತ್ತಿದ್ದಾರೆ. ಇನ್ನು ರಾಜ್ಯದ ನಾಯಕರು ತಮ್ಮ ಮೇಲೆ ಇಟ್ಟ ನಂಬಿಕೆಗೆ ಪೂರಕವಾಗಿ ಗೆಲುವಿನ ಉಡುಗೊರೆ ನೀಡುವ ಪ್ಲ್ಯಾನ್ ಆನಂದಸ್ವಾಮಿ ಗಡ್ಡದೇವರಮಠ ಅವರ ಆಸೆ ಕಮರಿದೆ.

ಈ ಕ್ಷೇತ್ರ ರಚನೆ ಆದಾಗಿನಿಂದಲೂ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಾ ಬಂದಿದೆ. ಮೊದಲು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು ಈ ಕ್ಷೇತ್ರ 2008 ನಂತರ ಹಾವೇರಿ ಲೋಕಸಭಾ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಶಿವಕುಮಾರ್ ಉದಾಸಿ ಸತತ ಮೂರು ಬಾರಿ ಗೆಲುವು ದಾಖಲಿಸಿದ್ದಾರೆ.-
- ಬಿಜೆಪಿ ಅಭ್ಯರ್ಥಿ ಬೊಮ್ಮಾಯಿ 5153 ಮತಗಳ ಮುನ್ನಡೆ
- ಬಸವಾರಜ್ ಬೊಮ್ಮಾಯಿಗೆ 3602 ಮತಗಳಿಂದ ಮುನ್ನಡೆ
- ಬಸವರಾಜ್ ಬೊಮ್ಮಾಯಿಗೆ ಹಿನ್ನಡೆ
- ಅಂಚೆ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ್ ಬೊಮ್ಮಾಯಿ ಮುನ್ನಡೆ
- ಅಂಚೆ ಮತದಾನ ಏಣಿಕೆ ಆರಂಭ












Click it and Unblock the Notifications