ಹಾವೇರಿ ಬಳಿ ಡಬಲ್ ಮರ್ಡರ್: ಆಸ್ತಿಗಾಗಿ ದಂಪತಿ ಹತ್ಯೆ ಶಂಕೆ
ಹಾವೇರಿ, ಜೂನ್ 23: ಹಾಡುಹಗಲೇ ದಂಪತಿಗಳನ್ನು ಹತ್ಯೆ ಮಾಡಿರುವ ಘಟನೆ ಹಾವೇರಿಯ ಹತ್ತಿಮತ್ತೂರಿನಲ್ಲಿ ಶನಿವಾರ ನಡೆದಿದೆ.
ಮಾರ್ತಾಂಡಪ್ಪ ಸುಣಗಾರ್, ಸುಧಾ ಸುಣಗಾರ್ ಮೃತರು, ಹಾಡುಹಗಲೇ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕಂದಲಿಯಿಂದ ಭೀಕರವಾಗಿ ತಿವಿದು ಕೊಲೆ ಮಾಡಿದ್ದಾರೆ, ಕಾರಿನಲ್ಲಿ ಬಂದಿದ್ದ ಮೂವರು ಹಂತಕರಿಂದ ಈ ಕೃತ್ಯ ನಡೆದಿದೆ. ಹತ್ಯೆ ಮಾಡಿ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗಲು ಯತ್ನಿಸಿದ್ದಾರೆ.

ಓಡುವ ಭರದಲ್ಲಿ ವಿದ್ಯುತ್ ಕಂಬಕ್ಕೆ ಕಾರು ಗುದ್ದಿದೆ, ಈ ವೇಳೆ ಓರ್ವ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾನೆ, ಉಳಿದ ಇಬ್ಬರು ಹಂತಕರು ಪರಾರಿಯಾಗಿದ್ದಾರೆ, ಗ್ರಾಮಸ್ಥರು ಓರ್ವ ಹಂತಕನನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ. ಆಸ್ತಿ ಕಲಹದಿಂದ ಸಂಬಂಧಿಗಳೇ ಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸವಣೂರು ಪೊಲೀಸರು ಹಂತಕನನ್ನು ವಶಕ್ಕೆ ಪಡೆದಿದ್ದು ಉಳಿದ ಹಂತಕರಿಗಾಗಿ ಶೋಧ ನಡೆಸುತ್ತಿದ್ದಾರೆ.












Click it and Unblock the Notifications