ಬುದ್ಧಿ ಕೌಶಲ್ಯ ಪ್ರದರ್ಶಿಸಿ ಜನರ ಚಪ್ಪಾಳೆ ಗಿಟ್ಟಿಸಿದ ಪೊಲೀಸ್ ನಾಯಿಗಳು

ಹಾಸನ, ಫೆಬ್ರವರಿ 18 : ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವತಿಯಿಂದ ಶ್ವಾನಗಳ ಪ್ರದರ್ಶನ ನಡೆಯಿತು. ಸುಮಾರು 18 ತಳಿಯ 140 ಶ್ವಾನಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಶ್ವಾನ ಪ್ರದರ್ಶನದ ಆರಂಭದಲ್ಲಿ ಪೊಲೀಸ್ ಶ್ವಾನ ಪಡೆಯ ನಾಯಿಗಳಿಂದ ಪ್ರದರ್ಶನ ನಡೆಯಿತು. ಅವುಗಳಿಗೆ ತರಬೇತಿ ನೀಡುವ ಬಗ್ಗೆ, ವಾಸನೆಯಿಂದ ಕಳ್ಳರನ್ನು ಪತ್ತೆ ಹಚ್ಚುವುದು, ಬಾಂಬ್ ಪತ್ತೆ ಪ್ರಾತ್ಯಕ್ಷಿಕೆ ನಡೆಯಿತು. ಚಾಣಕ್ಯ ನಡವಳಿಕೆ ಪೊಲೀಸ್ ವಿಶೇಷ ಪಡೆಯ ಶ್ವಾನಗಳು ಜನರ ಚಪ್ಪಾಳೆ ಗಿಟ್ಟಿಸಿದವು.

ವೇದಿಕೆಯಲ್ಲಿ ಹಾಗೂ ಆವರಣದಲ್ಲಿ ಆಕರ್ಷಕ ಹೆಜ್ಜೆ ಹಾಕಿದ ಶ್ವಾನಗಳು ಚಪ್ಪಾಳೆ ಗಿಟ್ಟಿಸಿದವು, ಪಪ್ಪಿ, ಪಗ್, ಪಮೋರಿನ್, ಪಿಟಬುಲ್, ಬಾಕ್ಸರ್, ಮುಧೋಳ್ ಹೌಂಡ್, ಡಾಬರ್‍ಮನ್, ಲಬ್ರಾಡರ್, ರೆಟ್ರಿವರ್ ಸೇರಿದಂತೆ ವಿವಿಧ ತಳಿಯ ಶ್ವಾನಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

Police dog show in Hassan attracts peoples

ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾದ್ಯಾಪಕರಾದ ಡಾ.ಬಿ.ಆರ್ ಬಾಲಕೃಷ್ಣನವರ್ ಶ್ವಾನಗಳ ಗುಣ ವೀಶೇಷತೆಗಳನ್ನು ತಿಳಿಸಿದರು ಮತ್ತು ನಾಯಿಗಳ ಸಾಕಾಣಿಕೆಯ ರೀತಿ ನೀತಿಗಳ ಬಗ್ಗೆ ಅವರು ವಿವರಿಸಿದರು.

ವಿಶೇಷವಾಗಿ ಸೈನ್ಯದಲ್ಲಿ ಅವಕಾಶ ಹೊಂದಿರುವ ಕರ್ನಾಟಕದ ಹೆಮ್ಮೆಯ ಮುಧೋಳ್‍ಹಾಂಡ್ ತಳಿಯ ಶ್ವಾನಗಳೂ ವೇದಿಕೆಯಲ್ಲಿ ಹೆಜ್ಜೆಯಿಟ್ಟು ಬಹುಮಾನ ಪಡೆದವು. ಸ್ಪರ್ಧೆಯಲ್ಲಿ ವಿಜೇತರಾದ ಶ್ವಾನಗಳ ಮಾಲೀಕರಿಗೆ ಲೋಕೋಪಯೋಗಿ ಹಾಗೂ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಚ್.ಡಿ ರೇವಣ್ಣ ಬಹುಮಾನಗಳನ್ನು ವಿತರಿಸಿದರು.

Police dog show in Hassan attracts peoples

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಅ.ಪ.ರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+