ಸಿಎಂ ಸ್ಥಾನಕ್ಕೆ ಅರ್ಹ ಎಂದ ಸಿದ್ದರಾಮಯ್ಯಗೆ ರೇವಣ್ಣ ಕೃತಜ್ಞತೆ

ಹಾಸನ, ಮೇ 16: 'ಎಚ್‌.ಡಿ.ರೇವಣ್ಣ ಅವರು ಸಹ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹ ವ್ಯಕ್ತಿ' ಎಂದಿದ್ದ ಸಿದ್ದರಾಮಯ್ಯ ಅವರಿಗೆ ಎಚ್‌.ಡಿ.ರೇವಣ್ಣ ಕೃತಜ್ಞತೆ ಹೇಳಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ನಾನು ಸಿದ್ದರಾಮಯ್ಯ 25 ವರ್ಷದ ಗೆಳೆಯರು, 96 ರಿಂದಲೂ ಒಟ್ಟಿಗೆ ಕೆಲಸ ಮಾಡಿದ್ದೇವೆ, ಅವರು ನನ್ನ ಕೆಲಸ ನೋಡಿ ಅಭಿಮಾನದಿಂದ ಆ ಮಾತು ಹೇಳಿದ್ದಾರೆ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಬೇರೆ ಪಕ್ಷದಲ್ಲಿದ್ದರೂ ಸಹ ನಮ್ಮ ಸ್ನೇಹ ಹಾಗೆಯೇ ಮುಂದುವರೆ, ನಾನು ಅವರ ಅಭಿಮಾನಿ ಕೂಡ ಎಂದು ರೇವಣ್ಣ ಹೇಳಿದ್ದಾರೆ.

HD Revanna thanked Siddaramaiah for believing him him for CM post

'ಸಿಎಂ ಬದಲಾವಣೆ ಮಾಡುವ ಯಾವುದೇ ಸನ್ನಿವೇಶ ಈಗ ಇಲ್ಲ, ನಮ್ಮ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕುಮಾರಸ್ವಾಮಿ ಅವರು ಏನು ಹೇಳಿದರೆ ಅದೇ ಅಂತಿಮ, ಕುಮಾರಸ್ವಾಮಿ ಅವರು ಐದು ವರ್ಷ ಸಿಎಂ ಆಗಿರುವುದು ಖಾಯಂ' ಎಂದು ಅವರು ಹೇಳಿದ್ದಾರೆ.

ಕುಮಾರಸ್ವಾಮಿ ಐದು ವರ್ಷ ಸಿಎಂ

ಕುಮಾರಸ್ವಾಮಿ ಐದು ವರ್ಷ ಸಿಎಂ

ಕುಮಾರಸ್ವಾಮಿ ಅಧಿಕಾರಕ್ಕೆ ಬಂದಾಗಿನಿಂದಲೂ ಸರ್ಕಾರ ಉರುಳಿಸಲು ಬಿಜೆಪಿ ಹಲವು ಪ್ರಯತ್ನಗಳನ್ನು ಮಾಡುತ್ತಿದೆ, ಆದರೆ ಸರ್ಕಾರ ಅವ್ಯಾವುವು ಸಫಲವಾಗುವುದಿಲ್ಲ, ಕುಮಾರಸ್ವಾಮಿ ಅವರು ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ರೇವಣ್ಣ ಹೇಳಿದರು.

ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ಇಲ್ಲ

ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯೆ ಇಲ್ಲ

ವಿಶ್ವನಾಥ್ ಹಾಗೂ ಖರ್ಗೆ ಅವರು ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ರೇವಣ್ಣ ಅವರು ನಿರಾಕರಿಸಿದರು. ಆದರೆ ಸಿಎಂ ಸ್ಥಾನಕ್ಕೆ ಅರ್ಹರೆಂದ ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸುವ ಮೂಲಕ ತಮಗೂ ಸಿಎಂ ಆಗುವ ಆಸೆಯಿದೆ ಎಂಬುದನ್ನು ರೇವಣ್ಣ ಸೂಚ್ಯವಾಗಿ ಒಪ್ಪಿಕೊಂಡಿದ್ದಾರೆ.

ಖರ್ಗೆ ಸಿಎಂ ಸ್ಥಾನಕ್ಕೆ ಅರ್ಹರೆಂದಿದ್ದ ಎಚ್‌ಡಿಕೆ

ಖರ್ಗೆ ಸಿಎಂ ಸ್ಥಾನಕ್ಕೆ ಅರ್ಹರೆಂದಿದ್ದ ಎಚ್‌ಡಿಕೆ

ಸಿದ್ದರಾಮಯ್ಯ ಅವರ ಬೆಂಬಲಿಗರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆಂದು ಹೇಳಿಕೆ ನೀಡಿದ್ದರಿಂದ, ಅವರಿಗೆ ಬ್ರೇಕ್ ಹಾಕಲೆಂದು ಕುಮಾರಸ್ವಾಮಿ ಅವರು ಮಲ್ಲಿಕಾರ್ಜುನ ಖರ್ಗೆ ಅವರೂ ಸಹ ಸಿಎಂ ಹುದ್ದೆಗೆ ಅರ್ಹ ಅಭ್ಯರ್ಥಿ, ಅವರು ಎಂದೋ ಸಿಎಂ ಆಗಬೇಕಿತ್ತು ಎಂದಿದ್ದರು. ಇದು ವಿವಾದ ಎಬ್ಬಿಸಿತ್ತು.

ಸಿದ್ದರಾಮಯ್ಯ ಟ್ವೀಟ್ ಗುದ್ದು

ಇದಕ್ಕೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಜೆಡಿಎಸ್‌ನಲ್ಲಿ ರೇವಣ್ಣ ಅವರೂ ಸಹ ಸಿಎಂ ಹುದ್ದೆಗೆ ಅರ್ಹ ಅಭ್ಯರ್ಥಿ ಎಂದು ಟ್ವೀಟ್ ಮಾಡಿದ್ದರು. ಸಿದ್ದರಾಮಯ್ಯ ಅವರ ಟ್ವೀಟ್, ಕುಮಾರಸ್ವಾಮಿ ಅವರನ್ನು ತಮ್ಮ ಹೇಳಿಕೆಯಿಂದ ಹಿಂದೆ ಸರಿಯುವಂತೆ ಮಾಡಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+