Hassan News: ಪಿಡಿಒ ಪರೀಕ್ಷಾರ್ಥಿಗಳ ತುಂಬು ತೋಳಿನ ಬಟ್ಟೆ ಕತ್ತರಿಸಿದ ಸಿಬ್ಬಂದಿ
PDO Examination 2024: ಇಂದು (ಡಿಸೆಂಬರ್ 8) ರಾಜ್ಯಾದ್ಯಂತ ಪಿಡಿಒ ನೇಮಕಾತಿ ಪರೀಕ್ಷೆ ನಡೆಯುತ್ತಿದೆ. ಇನ್ನು ಪಿಡಿಒ ನೇಮಕಾತಿ ಪರೀಕ್ಷೆ ಬರೆಯಲು ಬಂದಿದ್ದ ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಶಾಕ್ ಕೊಟ್ಟಿದ್ದಾರೆ. ಮಾಹಿತಿ ಇಲ್ಲಿ ನೀಡಲಾಗಿದೆ ಗಮನಿಸಿ.
ಪರೀಕ್ಷೆಗೆ ತುಂಬು ತೋಳಿನ ಬಟ್ಟೆ ಧರಿಸಿ ಬಂದಿದ್ದ ಅಭ್ಯರ್ಥಿಗಳ ಬಟ್ಟೆಯನ್ನು ಪರೀಕ್ಷಾ ಕೇಂದ್ರದ ಸಿಬ್ಬಂದಿ ಕತ್ತರಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಅರ್ಧ ತೋಳಿನವರೆಗೆ ಬಟ್ಟೆ ಕತ್ತರಿಸಿ ಸಿಬ್ಬಂದಿ ಇಳಗಡೆ ಬಿಟ್ಟಿದ್ದಾರೆ. ಹಾಸನದ ಎವಿಕೆ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಅಧಿಕಾರಿಗಳು ಮತ್ತು ಪರೀಕ್ಷಾರ್ಥಿಗಳ ನಡುವೆ ವಾಗ್ವಾದ ನಡೆದಿದೆ.

ವಸ್ತ್ರ ಸಂಹಿತೆ ನಿಯಮ ಪಾಲಿಸದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ವಸ್ತ್ರ ಸಂಹಿತೆ ಸೇರಿ ಅಭ್ಯರ್ಥಿಗಳು ಪಾಲಿಸಬೇಕಾದ ಸೂಚನೆಗಳನ್ನು ಮೊದಲೇ ತಿಳಿಸಲಾಗಿತ್ತು. ನಮ್ಮ ಕರ್ತವ್ಯ ನಾವು ಮಾಡಲೇಬೇಕಿದೆ. ಪರೀಕ್ಷಾ ಸೂಚನೆಯಲ್ಲಿ ಈ ಬಗ್ಗೆ ತಿಳಿಸಲಾಗಿದೆ ಎಂದು ಪರೀಕ್ಷಾ ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ.
ಪರೀಕ್ಷಾರ್ಥಿಗಳಿಗೆ ನಿಯಮಗಳು
* ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮುನ್ನ ಸ್ಮಾರ್ಟ್ ವಾಚ್, ವಿದ್ಯುತ್ ಉಪಕರಣಗಳು, ಕ್ಯಾಲ್ಯೂಕ್ಲೇಟರ್, ಮೊಬೈಲ್ ಫೋನ್ ತರುವುದನ್ನು ನಿಷೇಧಿಸಲಾಗಿದೆ.
* ಪರೀಕ್ಷಾರ್ಥಿಗಳು ತಮ್ಮ ಗುರುತಿನ ಚೀಟಿ, ಕುಡಿಯುವ ನೀರಿನ ಬಾಟಲ್‌ಗಳಲ್ಲದೆ, ಇತರೆ ವಸ್ತುಗಳು ತರುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
* ಮಹಿಳೆಯರು ಮಾಂಗಲ್ಯಸರ ಮತ್ತು ಕಾಲುಂಗುರು ಹೊರತುಪಡಿಸಿ, ಇತರೆ ಆಭರಣಗಳ ಧರಿಸುವುದನ್ನು ನಿಷೇಧಿಸಿದೆ.
* ಪುರುಷರು ಫುಲ್ ಶರ್ಟ್, ಫ್ಯಾನ್ಸಿ ಪ್ಯಾಂಟ್, ಶೂ-ಸಾಕ್ಸ್‌ಳನ್ನು ಧರಿಸಿ ಬರುವುದನ್ನು ನಿಷೇಧಿಸಲಾಗಿದೆ.
ಮೆಟ್ರೋ ಸೇವೆ: ಪಿಡಿಒ ನೇಮಕಾತಿ ಪರೀಕ್ಷಾರ್ಥಿಗಳಿಗೆ ಅನುಕೂಲ ಆಗುವಂತೆ ಬಿಎಂಆರ್‌ಸಿಎಲ್‌ನಿಂದ ಮೆಟ್ರೋ ಸೇವೆಯನ್ನು ಇಂದು ಬೆಳಗ್ಗೆ 5.30ರಿಂದ ಆರಂಭಿಸಲಾಗಿದೆ.
ಭಾನುವಾರ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಬೆಳಗ್ಗೆ ತಮ್ಮ ತಮ್ಮ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲ ಆಗುವಂತೆ ಬಿಎಂಆರ್‌ಸಿಎಲ್ ಬೆಳಗ್ಗೆ 5.30ರಿಂದಲೇ ಮೆಟ್ರೋ ರೈಲು ಸಂಚಾರ ಸೇವೆಯನ್ನು ಒದಗಿಸಿದೆ.
ಸಾಮಾನ್ಯ ದಿನಗಳಲ್ಲಿ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮೆಟ್ರೋ ಸೇವೆ ಆರಂಭ ಆಗಲದೆ. ಆದರೆ ಇಂದು ಪಿಡಿಒ ಪರೀಕ್ಷಾರ್ಥಿಗಳಿಗೆ ಅನುಕೂಲ ಆಗುವಂತೆ ಅವಧಿಗೂ ಮುನ್ನವೇ ಮೆಟ್ರೋ ಸೇವೆ ಆರಂಭಿಸಿದೆ.
ನಗರದ ಎಲ್ಲಾ ನಾಲ್ಕು ಟರ್ಮಿನಲ್ ನಿಲ್ದಾಣಗಳಾದ ಮಾದಾವರ, ರೇಷ್ಮೆ ಸಂಸ್ಥೆ, ಚಲ್ಲಘಟ್ಟ ಮತ್ತು ವೈಟ್ ಫೀಲ್ಡ್ ಮೆಟ್ರೋ ನಿಲ್ದಾಣಗಳಿಂದ ಬೆಳಗ್ಗೆ 5.30ಕ್ಕೆ ಮೆಟ್ರೋ ಸೇವೆ ಪ್ರಾರಂಭಿಸಿದೆ. ಅಲ್ಲದೆ, ನಾಡಪ್ರಭು ಕೆಂಪೇಗೌಡ ನಿಲ್ದಾಣವಾದ ಮೆಜೆಸ್ಟಿಕ್‌ನಿಂದ ಎಲ್ಲಾ 4 ಭಾಗಗಳಿಗೂ ಮೊದಲ ರೈಲು ಬೆಳಗ್ಗೆ 05:30 ಗಂಟೆಗೆ ಹೊರಟಿದೆ ಎಂದು ತಿಳಿದುಬಂದಿದೆ.












Click it and Unblock the Notifications