ಹಾಸನದ ಲಾಡ್ಜ್‌ನಲ್ಲಿ ಯುವತಿ ಅನುಮಾನಾಸ್ಪದ ಸಾವು
ಹಾಸನ, ಡಿಸೆಂಬರ್ 20: ಲಾಡ್ಜ್‌ನಲ್ಲಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಚಿರಂತಿ ಮೃತಪಟ್ಟ ಯುವತಿ, ಚಿರತಿ ಬೈಕ್ ಶೋರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದಳು, ಆಕೆ ಸ್ನೇಹಿತನೊಂದಿಗೆ ಲಾಡ್ಜ್‌ಗೆ ಬಂದಿದ್ದಳು ಎಂದು ತಿಳಿದುಬಂದಿದ್ದು, ಆಕೆಯ ಗೆಳೆಯ ಆಟೋ ಡ್ರೈವರ್ ಆದ ರಾಕೇಶ್ ಜೊತೆ ಬುಧವಾರ ರಾತ್ರಿ ಲಾಡ್ಜ್‌ವೊಂದಕ್ಕೆ ತೆರಳಿದ್ದಳು.
ಲಾಡ್ಜ್‌ನಲ್ಲಿ ಬಾತ್‌ರೂಂ ಒಳಗೆ ತೆರಳಿ ಗಂಟೆಯಾದರೂ ವಾಪಸ್ ಬಾರದಿದ್ದಾಗ ಅನುಮಾನ ಬಂದು ಬಾಗಿಲು ತೆಗೆಯಲು ಯತ್ನಿಸಿದಾಗ ಲಾಕ್ ಆಗಿತ್ತು ಬಳಿಕ ಲಾಡ್ಜ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿ, ಬಾಗಿಲು ಒಡೆದು ನೋಡಿದಾಗ ಆಕೆ ಮೃತಪಟ್ಟಿರುವುದು ತಿಳಿದಿದೆ.

ಹಾಸನ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ರಾಕೇಶ್‌ನನ್ನು ವಿಚಾರಣೆ ಒಳಪಡಿಸಿದ್ದಾರೆ. ಘಟನೆಗೆ ನಿಜವಾದ ಕಾರಣ ತಿಳಿದುಬಂದಿಲ್ಲ.












Click it and Unblock the Notifications