ಅರಸೀಕೆರೆ-ತುಮಕೂರು-ಮೈಸೂರು ಪುಷ್-ಪುಲ್ ರೈಲು ಸಂಚಾರದಲ್ಲಿ ಬದಲಾವಣೆ

ಹಾಸನ, ಅಕ್ಟೋಬರ್ 24 : ಅರಸೀಕೆರೆ-ತುಮಕೂರು-ಮೈಸೂರು ನಡುವೆ ಸಂಚಾರ ನಡೆಸುವ ಪುಷ್-ಪುಲ್ ಪ್ಯಾಸೆಂಜರ್ ರೈಲು ಸಂಚಾರದಲ್ಲಿ ಬದಲಾವಣೆಯಾಗಿದೆ. ನವೆಂಬರ್ 3ರ ತನಕ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ.

ಅರಸೀಕೆರೆ-ತುಮಕೂರು ನಡುವೆ ಜೋಡಿ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ಪುಷ್-ಪುಲ್ ಪ್ಯಾಸೆಂಜರ್ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ನೂತನ ವೇಳಾಪಟ್ಟಿಯಂತೆ ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರದಂದು ಪುಷ್-ಪುಲ್ ಪ್ಯಾಸೆಂಜರ್ ರೈಲು ತಿಪಟೂರು ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಹೊರಡಲಿದೆ.

Arasikere Tumakuru Mysuru push pull train schedule changed

ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು ಅರಸೀಕೆರೆ ರೈಲು ನಿಲ್ದಾಣದಿಂದ ಬೆಳಗ್ಗೆ 5 ಗಂಟೆಗೆ ಸಂಚಾರ ನಡೆಸುತ್ತದೆ. ನವೆಂಬರ್ 3ರ ಬಳಿಕ ಎಂದಿನಂತೆ ಪ್ರತಿದಿನ ಬೆಳಗ್ಗೆ 5 ಗಂಟೆಗೆ ಅರಸೀಕೆರೆಯಿಂದ ರೈಲು ಹೊರಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

347 ಕೋಟಿ ರೂ. ವೆಚ್ಚದಲ್ಲಿ ಸುಮಾರು 96 ಕಿ.ಮೀ. ಅರಸೀಕೆರೆ-ತುಮಕೂರು ನಡುವೆ ಜೋಡಿ ರೈಲ್ವೆ ಹಳಿ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಈ ಕಾಮಗಾರಿಯನ್ನು ನಡೆಸುತ್ತಿದೆ.

ಅರಸೀಕೆರೆ-ತುಮಕೂರು ನಡುವೆ ಹಲವು ರೈಲುಗಳು ಸಂಚಾರ ನಡೆಸುತ್ತವೆ. ಈ ಮಾರ್ಗದಲ್ಲಿ ಜೋಡಿ ರೈಲ್ವೆ ಹಳಿ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. 2016ರಲ್ಲಿ ಕಾಮಗಾರಿ ಆರಂಭವಾಗಿದ್ದು, ಈಗ ಅಂತಿಮ ಹಂತದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+