ಹಿಂಸಿಸುತ್ತಿದ್ದ ಗಂಡನ ರುಂಡ ಕಡಿದು ಪೊಲೀಸರಿಗೆ ಶರಣಾದ ಅಸ್ಸಾಂ ಮಹಿಳೆ

ಗಂಡನ ಮಾನಸಿಕ, ದೈಹಿಕ ಹಿಂಸೆಯಿಂದ ಬೇಸತ್ತ ಮಹಿಳೆ ಆತನನ್ನು ಕೊಂದು, ಅವನ ತಲೆಯನ್ನು ತೆಗೆದುಕೊಂಡು ಬಂದು, ಪೊಲೀಸ್ ಠಾಣೆಯಲ್ಲಿ ಶರಣಾದ ಘಟನೆ ಅಸ್ಸಾಂನ ಲಖಿಂಪುರ್ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಮಜ್ ಗಾಂವ್ ನ ನಲವತ್ತೆಂಟು ವರ್ಷದ ಗುಣೇಶ್ವರಿ ಬರ್ಕಟಕಿ ತನ್ನ ಗಂಡ ಮುದಿರಾಮ್ ನ ರುಂಡವನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ತಂದಿದ್ದಳು.

ಆತ ವರ್ಷಗಳಿಂದ ನನ್ನನ್ನು ಥಳಿಸುತ್ತಿದ್ದ. ಹಲವು ಬಾರಿ ಕೊಡಲಿಯಿಂದ ನನಗೆ ಗಾಯ ಮಾಡಿದ್ದ. ಬಹಳ ಹಿಂದೆಯೇ ಆತನನ್ನು ತೊರೆದು ಹೋಗಬೇಕು ಅಂತಿದ್ದೆ. ಮಕ್ಕಳಿದ್ದ ಕಾರಣಕ್ಕೆ ಸಾಧ್ಯವಾಗಿರಲಿಲ್ಲ. ಕೊನೆಗೆ ಅದು ಸಾಧ್ಯವಿಲ್ಲದ ಹಂತಕ್ಕೆ ಹೋಯಿತು. ನಾನು ಇದನ್ನು ಮಾಡಬೇಕಿತ್ತು ಅಥವಾ ಆತ ನನ್ನನ್ನು ಕೊಂದಿರುತ್ತಿದ್ದ ಎಂದು ಆಕೆ ಹೇಳಿರುವುದಾಗಿ ಸ್ಥಳೀಯ ಟೀವಿ ಚಾನಲ್ ವರದಿ ಮಾಡಿದೆ.

Fed up with husband harassment, woman murdered him and surrendered to police

ಆಕೆಗೆ ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣುಮಕ್ಕಳು ಸೇರಿ ಐವರು ಮಕ್ಕಳು. ಮಚ್ಚಿನಿಂದ ತನ್ನ ಗಂಡನನ್ನು ಕೊಂದ ನಂತರ ರುಂಡವನ್ನು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಇಟ್ಟುಕೊಂಡು, ಐದು ಕಿ.ಮೀ. ದೂರದಲ್ಲಿರುವ ಪೊಲೀಸ್ ಠಾಣೆಗೆ ತೆರಳಿದ್ದಾಳೆ. ಸ್ಥಳೀಯ ಕೋರ್ಟ್ ನಿಂದ ಗುಣೇಶ್ವರಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+