ಕೆಸರಿನಲ್ಲಿ ಸಿಲುಕಿದ್ದ ಆನೆ ಮರಿಯನ್ನು ರಕ್ಷಿಸಿದ ಜನರ ವಿಡಿಯೋ ವೈರಲ್

ಅಸ್ಸಾಂನ ನುಮಾಲಿಗಢ್ ನಲ್ಲಿ ಶುಕ್ರವಾರ ಆನೆ ಮರಿಯೊಂದನ್ನು ಸ್ಥಳೀಯರು, ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಅಂದ ಹಾಗೆ ಚರಂಡಿಯಲ್ಲಿ ಬಿದ್ದ ಆನೆ ಮರಿ, ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಈ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಅದರ ಪ್ರಕಾರ: ಒಂದೂವರೆ ವರ್ಷ ವಯಸ್ಸಿನ ಆನೆ ಮರಿಯನ್ನು ಅಧಿಕಾರಿಗಳು ರಕ್ಷಣೆ ಮಾಡಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಹಾಗಂತ ಯಾವುದೋ ಸಲಕರಣೆ ಬಳಸಿ ರಕ್ಷಿಸಿರಬಹುದು ಎಂದು ನೀವಂದುಕೊಂಡರೆ, ಊಹೆ ತಪ್ಪು. ಅನೆ ಸಿಕ್ಕಿಬಿದ್ದಿದ್ದ ಕೆಸರನ್ನು ಬರಿಗೈಯಲ್ಲಿ ದೂರ ಮಾಡಿದ್ದಾರೆ. ಹಲವಾರು ಮಂದಿ ಆನೆಯನ್ನು ಹೊರ ಕರೆತರಲು ಪ್ರಯತ್ನಿಸಲು ವಿಡಿಯೋದಲ್ಲಿ ಕಂಡುಬರುತ್ತದೆ. ಸಾಮಾನ್ಯವಾಗಿ ಆನೆ ಮರಿ ತೊಂಬತ್ತರಿಂದ ನೂರಿಪ್ಪತ್ತು ಕೇಜಿ ತೂಗುತ್ತದೆ.

Elephant calf rescued by people with bare hands in Assam

ಗಾಬರಿಯಾದ ಆನೆ ಮರಿ ಅಲ್ಲಿಂದ ಹೊರಬರಲು ಭಾರೀ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತದೆ. ಜನರ ಸಹಾಯದಿಂದ ಆಚೆಗೆ ಬರಲು ಪ್ರಯತ್ನಿಸುತ್ತಿರುವುದು ಗೊತ್ತಾಗುತ್ತದೆ. ಕೊನೆಗೂ ಎಲ್ಲರ ಪ್ರಯತ್ನದಿಂದಾಗಿ ಆನೆ ಮರಿಯ ರಕ್ಷಣೆ ಮಾಡಲು ಯಶಸ್ವಿ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+