ಅಸ್ಸಾಂ ಚುನಾವಣೆ: ನಮಗೆ ಎದುರಾಳಿ ಕಾಂಗ್ರೆಸ್ ಅಲ್ಲ, ಈ ಪಕ್ಷ ಎಂದ ಬಿಜೆಪಿ

ಗುವಾಹಟಿ, ಮಾರ್ಚ್ 12: ಅಸ್ಸಾಂ ವಿಧಾನಸಭೆ ಚುನಾವಣೆ ಸನ್ನಿಹಿತವಾಗುತ್ತಿದ್ದು, ಬಿಜೆಪಿ ತಮ್ಮ ಎದುರಾಳಿಗಳ ಬಗ್ಗೆ ಮಾತನಾಡಿದೆ.

ನಮಗೆ ಕಾಂಗ್ರೆಸ್ ಎದುರಾಳಿಯಲ್ಲಿ ಬದಲಾಗಿ, ಬದ್ರುದ್ದಿನ್ ಅಜ್ಮಲ್‌ ಅವರ 'ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರೆಟಿಕ್ ಫ್ರಂಟ್' ನಮಗೆ ಎದುರಾಳಿ ಪಕ್ಷವಾಗಿದೆ ಎಂದು ಬಿಜೆಪಿ ಹೇಳಿದೆ.

ಈ ಕುರಿತು ಅಸ್ಸಾಂ ಸಚಿವ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಎಐಯುಡಿಎಫ್ ನಡುವೆ ತೀವ್ರ ಹಣಾಹಣಿ ಇರಲಿದೆ. ಸ್ಥಳೀಯ ಪಕ್ಷಗಳು ಜನರನ್ನು ಬಹುಬೇಕ ತಲುಪುತ್ತಾರೆ.

BJP Says Not Congress, This Party Is The Main Opponent In Assam

ಏತನ್ಮಧ್ಯೆ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಪಾಂಡಾ ಮಾತನಾಡಿ, ಈಗ ಕಾಂಗ್ರೆಸ್ ಎಐಯುಡಿಎಫ್ ಜತೆ ಒಪ್ಪಂದ ಮಾಡಿಕೊಂಡಿದೆ ಮತ್ತು ಗುರುತಿನ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದಾರೆ.

ಕಾಂಗ್ರೆಸ್ ಪಕ್ಷವು ಅಸ್ಸಾಂ ಬಚಾವೋ( ಅಸ್ಸಾಂ ಉಳಿಸಿ) ಎಂದು ಗೋಷಣೆ ಕೂಗುವ ಬದಲು ಕಾಂಗ್ರೆಸ್ ಬಚಾವೋ(ಕಾಂಗ್ರೆಸ್ ಉಳಿಸಿ) ಎಂದು ಘೋಷಣೆ ಕೂಗಿದರೆ ಉತ್ತಮ ಎಂದರು.

ಅಸ್ಸಾಂನಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್‌ 27 ರಂದು ಮೊದಲ ಹಂತ, ಏಪ್ರಿಲ್ 1ರಂದು ಎರಡನೇ ಹಂತ ಹಾಗೂ ಏಪ್ರಿಲ್ 6ರಂದು ಮೂರನೇ ಹಂತದ ಚುನಾವಣೆ ನಡೆಯಲಿರುವುದಾಗಿ ಆಯೋಗ ತಿಳಿಸಿದೆ. ಮೇ 2ರಂದು ಫಲಿತಾಂಶ ಹೊರಬೀಳಲಿದೆ. 126 ಸೀಟುಗಳಿಗೆ ಚುನಾವಣೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+