ಅಸ್ಸಾಂ ನಲ್ಲಿ ಸಂಗ್ರಹಿಸಿದ್ದ ಎನ್‌ಆರ್‌ಸಿ ಮಾಹಿತಿ ಮಾಯ!

ಗುವಾಹಟಿ, ಫೆಬ್ರವರಿ 12: ದೇಶದಾದ್ಯಂತ ಎನ್‌ಆರ್‌ಸಿ-ಸಿಎಎ ಚರ್ಚೆಗಳು ಜಾರಿ ಇರುವಾಗಲೇ, ದೇಶದಲ್ಲಿ ಮೊದಲಿಗೆ ಎನ್‌ಆರ್‌ಸಿ ಜಾರಿಗೆ ಬಂದಿದ್ದ ಅಸ್ಸಾಂ ನಲ್ಲಿ ಎನ್‌ಆರ್‌ಸಿ ಅಡಿ ಸಂಗ್ರಹಿಸಿದ ನಾಗರೀಕರ ಮಾಹಿತಿ 'ಕ್ಲೌಡ್‌' ನಿಂದ ಮಾಯವಾಗಿವೆ!

ಹೌದು, ಎನ್‌ಆರ್‌ಸಿ ಅಡಿಯಲ್ಲಿ ನಾಗರೀಕರ ಮಾಹಿತಿ ಸಂಗ್ರಹಿಸಿದ್ದ ಅಸ್ಸಾಂ ಸರ್ಕಾರ, ನಾಗರೀಕ ಪಡೆಯುವವರ ಅಂತಿಮ ಪಟ್ಟಿಯನ್ನು ತಯಾರು ಮಾಡಿ ಸುಪ್ರೀಂಕೋರ್ಟ್ ಆದೇಶದಂತೆ ಆ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿತ್ತು, ಆದರೆ ಆ ಮಾಹಿತಿಯೇ ಕಾಣೆಯಾಗಿದೆ.

ಆಗಸ್ಟ್ 31 ರಂದು ಅಸ್ಸಾಂ ಸರ್ಕಾರವು ನಾಗರೀಕ ಪಡೆಯುವವರ, ಪಡೆಯದವರ ಎನ್‌ಆರ್‌ಸಿ ಅಂತಿಮ ಪಟ್ಟಿಯನ್ನು ತನ್ನ ಅಧಿಕೃತ ವೆಬ್‌ಸೈಟ್‌ ನಲ್ಲಿ ಪ್ರಕಟಿಸಿತ್ತು, ಆದರೆ ದಿಢೀರನೆ ಪಟ್ಟಿಯೇ ನಾಪತ್ತೆಯಾಗಿದೆ.

Assam NRC Information Gone Missing From Cloud

'ವಿಪ್ರೋ ದೊಂದಿಗಿನ ಒಪ್ಪಂದ ಮರುನವೀಕರಣ ಮಾಡದೇ ಇರುವ ಕಾರಣ ವಿಪ್ರೋ ಹೀಗೆ ಮಾಡಿದೆ' ಎಂದು ಎನ್‌ಆರ್‌ಸಿ ಅಧಿಕಾರಿಗಳು ಹೇಳಿದ್ದಾರೆ.

ಮಾಹಿತಿಯನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿಡುವ ಕ್ಲೌಡ್ ಸೇವೆಯನ್ನು ವಿಪ್ರೋ ಸಂಸ್ಥೆಗೆ ವಹಿಸಲಾಗಿತ್ತು. ಆದರೆ ಅವರೊಂದಿಗಿನ ಒಪ್ಪಂದ ಅಕ್ಟೋಬರ್ 2019 ಕ್ಕೆ ಅಂತ್ಯವಾಗಿತ್ತು. ಡಿಸೆಂಬರ್ 15 ರಿಂದ ವೆಬ್‌ಸೈಟ್‌ ನಲ್ಲಿ ಮಾಹಿತಿ ಕಾಣೆ ಆಗಿತ್ತು.

ಎನ್‌ಆರ್‌ಸಿ ಯ ರಾಜ್ಯ ಸಂಯೋಜಕ ಹಿತೇಶ್ ದೇವ್ ಶರ್ಮಾ ಮಾತನಾಡಿ, 'ಈ ಬಗ್ಗೆ ವಿಪ್ರೋ ಗೆ ಪತ್ರ ಬರೆದಿದ್ದು, ಕೆಲವೇ ದಿನಗಳಲ್ಲಿ ಜನರಿಗೆ ಎನ್‌ಆರ್‌ಸಿ ಮಾಹಿತಿ ಲಭ್ಯವಾಗಲಿದೆ' ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+