ವಿಡಿಯೋ: ಟ್ರಾಫಿಕ್ ಪೊಲೀಸನನ್ನೇ ಕಾರಿನ ಮೇಲೆ ಎಳೆದೊಯ್ದ ಭೂಪ!

ಗುರ್ಗಾಂವ್, ಡಿಸೆಂಬರ್ 20: ರಾಂಗ್ ಸೈಡ್ ನಲ್ಲಿ ಡ್ರೈವಿಂಗ್ ಮಾಡುತ್ತಿದ್ದ ವ್ಯಕ್ತಿಯನ್ನು ತಡೆಯಲು ಬಂದ ಟ್ರಾಫಿಕ್ ಪೊಲೀಸಪ್ಪನನ್ನೇ ಕಾರಿನ ಮೇಲೆ ಎಳೆದೊಯ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹರ್ಯಾಣದ ಗುರುಗ್ರಾಮ(ಗುರ್ಗಾಂವ್)ದ ಸಿಗ್ನೇಚರ್ ಟವರ್ ಚೌಕ್ ಎಂಬಲ್ಲಿ ವ್ಯಕ್ತಿಯೊಬ್ಬ ರಾಂಗ್ ಸೈಡ್ ನಲ್ಲಿ ಕಾರು ಓಡಿಸಿಕೊಂಡು ಬರುತ್ತಿದ್ದ. ಅಲ್ಲಿಯೇ ಇದ್ದ ಟ್ರಾಫೊಕ್ ಪೊಲೀಸ್ ಆತನನ್ನು ತಡೆಯಲು ಪ್ರಯತ್ನಿಸಿದರೆ, ಗಾಡಿಯನ್ನೇ ನಿಲ್ಲಿಸದ ಆತ ಟ್ರಾಫಿಕ್ ಪೊಲೀಸ್ ನನ್ನು ಕಾರಿನ ಮುಂಬದಿ ಭಾಗದ ಮೇಲೆ ಬಿದ್ದಂತೆಯೇ ಕೆಲವು ಮೀಟರ್ ದೂರ ಎಳೆದುಕೊಂಡು ಹೋಗಿದ್ದಾನೆ.

ವ್ಯಕ್ತಿಯನ್ನು ನಂತರ ಬಂಧಿಸಲಾಗಿದ್ದು, ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Viral video: Haryana man dragged traffic police on bonnet of his car

"ಬಹುಶಃ ಈ ವ್ಯಕ್ತಿ ಯಾರೋ ಪ್ರಭಾವಿಗಳ ಮಗನೇ ಇರಬೇಕು. ಅದಕ್ಕೇ ಈ ಪರಿ ದುರಹಂಕಾರ. ಇಂಥವರನ್ನು ಬಂಧಿಸಿ, ಶಿಕ್ಷೆ ನೀಡಬೇಕು" ಎಂದು ಟ್ವಿಟ್ಟರ್ ನಲ್ಲಿ ಹಲವರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+