• search
  • Live TV
ಗುರ್ ಗಾಂವ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನ.19ರಂದು ಪ್ರಧಾನಿ ಮೋದಿಯಿಂದ ಕೆಎಂಪಿ ಎಕ್ಸ್ ಪ್ರೆಸ್ ವೇ ಉದ್ಘಾಟನೆ

|

ಚಂದೀಗಢ, ನವೆಂಬರ್ 16: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 19ರಂದು ದೆಹಲಿ- ಗುರ್ ಗಾಂವ್ ಜಿಲ್ಲೆ ಸಂಪರ್ಕಿಸುವ ಕೆಎಂಪಿ ಎಕ್ಸ್ ಪ್ರೆಸ್ ವೇಯನ್ನು ಉದ್ಘಾಟಿಸಲಿದ್ದಾರೆ.

ಕುಂಡಲಿ-ಮಾನೇಸರ್-ಪಾಲ್ವಾಲ್ ಎಕ್ಸ್ ಪ್ರೆಸ್ ವೇ(ಕೆಎಂಪಿ)ಯನ್ನು ಉದ್ಘಾಟನೆಯಲ್ಲದೆ, ಸುಲ್ತಾನ್ ಪುರ್ ಗ್ರಾಮದ ಬಲ್ಲಾಬ್ ಗರ್ ಮೆಟ್ರೋಗೆ ಕೂಡಾ ಚಾಲನೆ ನೀಡಲಿದ್ದಾರೆ.

ದೇಶದ ಪ್ರಥಮ 14 ಪಥಗಳ ಹೆದ್ದಾರಿ ಮೊದಲ ಹಂತ ಲೋಕಾರ್ಪಣೆ

ಕೆಎಂಪಿ ಎಕ್ಸ್ ಪ್ರೆಸ್ ವೇ ಯೋಜನೆಗೆ 6,400 ಕೋಟಿ ರು ಖರ್ಚಾಗಿದ್ದು, 3,846 ಎಕರೆ ಭೂಮಿಯನ್ನು 2,788 ಕೋಟಿ ರು ವೆಚ್ಚದಲ್ಲಿ ಸರ್ಕಾರವು ಸ್ವಾದೀನಕ್ಕೆ ತೆಗೆದುಕೊಳ್ಳಲಾಗಿತ್ತು.

ಕುಂಡಲಿ ಹಾಗೂ ಮಾನೇಸರ್ ನಡುವಿನ ಅಂತರ 83 ಕಿ.ಮೀ ನಷ್ಟಿದೆ. ಈ ಮಾರ್ಗದಲ್ಲಿ 14 ಸೇತುವೆಗಳಿದ್ದು, 56 ಅಂಡರ್ ಪಾಸ್. 7 ಇಂಟರ್ ಸೆಕ್ಷನ್, 7 ಟೋಲ್ ಪ್ಲಾಜಾಗಳಿವೆ ಎಂದು ಹರ್ಯಾಣ ಸರ್ಕಾರದ ವಕ್ತಾರರು ಹೇಳಿದ್ದಾರೆ.

44 ದೇಶ ಸುತ್ತಿ ಬಂದಿರುವ ಪ್ರಧಾನಿ ಮೋದಿ, ಟ್ರಾವೆಲ್ ಚಾರ್ಟ್!

ಜುಲೈ 2018ರಿಂದಲೇ ಟೋಲ್ ಸಂಗ್ರಹ ಆರಂಭಗೊಂಡಿದೆ. ಲಘು ವಾಹನಗಳಿಗೆ 120 ಕಿ.ಮೀ ಪ್ರತಿ ಗಂಟೆ ವೇಗ ಹಾಗೂ ಭಾರಿ ವಾಹನಗಳಿಗೆ 100 ಕಿ.ಮೀ ಪ್ರತಿ ಗಂಟೆ ವೇಗ ನಿಗದಿಪಡಿಸಲಾಗಿದೆ.

ಹೆದ್ದಾರಿಗಳಲ್ಲಿ ಟೋಲ್ ಕಟ್ಟಲು ಬಂತು ಫಾಸ್ಟ್ ಟ್ಯಾಗ್ ವ್ಯವಸ್ಥೆ

ಈ ಎಕ್ಸ್ ಪ್ರೆಸ್ ವೇ ಚಾಲನೆ ಸಿಕ್ಕ ಬಳಿಕ ದೆಹಲಿಯ ಮಾಲಿನ್ಯ, ಟ್ರಾಫಿಕ್ ಜಾಮ್ ಸಮಸ್ಯೆ ತಗ್ಗಲಿದೆ. ಎಕ್ಸ್ ಪ್ರೆಸ್ ವೆ ಮಾರ್ಗದ ಪ್ರತಿ 20 ಕಿ.ಮೀನಲ್ಲಿ ಒಂದು ಕ್ರೇನ್, ಆಂಬುಲೆನ್ಸ್, ಪೊಲೀಸ್ ಪೆಟ್ರೋಲ್ ವಾಹನ ಗಸ್ತು ತಿರುಗಲಿದೆ.

ಹರ್ಯಾಣದಲ್ಲಿ 3.2 ಕಿ.ಮೀ ಉದ್ದದ ಎಸ್ಕಾರ್ಟ್ಸ್ ಮುಜೆಸಾರ್ ರಾಜ ನಗರ್ ಸಿಂಗ್ (ಬಲ್ಲಬ್ ಗರ್) ಸೆಕ್ಷನ್ (ವೈಲೆಟ್ ಲೈನ್ ಮೆಟ್ರೋ ಮಾರ್ಗ) ಗೂ ಮೋದಿ ಅವರು ಚಾಲನೆ ನೀಡಲಿದ್ದಾರೆ.

English summary
Prime Minister Narendra Modi will inaugurate the Kundli-Manesar-Palwal expressway, meant to divert heavy polluting vehicles from Delhi, in Haryana's Gurgaon district on November 19, officials said Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X