ಕುಡುಕ ತಂದೆಯಿಂದ 8 ವರ್ಷದ ಮಗಳ ಮೇಲೆ ನಿರಂತರ ಅತ್ಯಾಚಾರ

ಗುರುಗ್ರಾಮ, ಏಪ್ರಿಲ್ 30: ವ್ಯಕ್ತಿಯೊಬ್ಬ ತನ್ನ ಹೆಂಡತಿ ಸತ್ತ ಬಳಿಕ ತನ್ನದೇ ಮಗುವಿನ ಮೇಲೆ ನಿರಂತರ ಅತ್ಯಾಚಾರವೆಸಗುವ ಮೂಲಕ ಸಮಾಜದಲ್ಲಿ ತಂದೆ ಎನ್ನುವ ಹೆಸರಿಗೆ ಕಳಂಕ ತರುವ ಕೆಲಸ ಮಾಡಿದ್ದಾನೆ.

ಬಾಲಕಿ ನಡವಳಿಕೆಯಲ್ಲಿ ಬದಲಾವಣೆ ಕಂಡ ಅಕ್ಕಪಕ್ಕದ ಮನೆಯವರು ಆಕೆಯನ್ನು ಒಂದು ಕಡೆ ಕೂರಿಸಿ ನಿಧಾನವಾಗಿ ವಿಚಾರಿಸಿ ಕೇಳಿದಾಗ ವಿಚಾರ ಬಹಿರಂಗಗೊಂಡಿದೆ. ನಾಲ್ಕನೇ ತರಗತಿ ಓದುತ್ತಿದ್ದ ಮಗಳ ಮೇಲೆ ಆತ ನಿತ್ಯ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನುವ ಆರೋಪದ ಮೇಲೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಪಟೌಡಿ ಪ್ರದೇಶದಲ್ಲಿ ತನ್ನ ತಂದೆಯೊಂದಿಗೆ ವಾಸವಾಗಿದ್ದ ಬಾಲಕಿಯು ತನ್ನ ತಾಯಿ ಸತ್ತಂದಿನಿಂದಲೂ ತಂದೆಯಿಂದ ನಿರಂತರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಪ್ರತಿ ರಾತ್ರಿ ಕುಡಿದು ಬರುತ್ತಿದ್ದ ತಂದೆಯು ಹಲವಾರು ತಿಂಗಳಿಂದಲೂ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಲ್ಲದೆ ಎರಡು ಬಾರಿ ಅತ್ಯಾಚಾರ ಎಸಗಿದ್ದಾನೆ.

Gurgaon man raped 8-year-old daughter repeatedly after wife died, arrested

ಇದೀಗ ಬಾಲಕಿಯನ್ನು ರಕ್ಷಿಸಲಾಗಿದ್ದು, ಮಕ್ಕಳ ನಿಗಾ ಘಟಕಕ್ಕೆ ಕೌನ್ಸೆಲಿಂಗ್‌ಗಾಗಿ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+