'ಜಗ್ಗಾ ಜಾಸೂಸ್' ನಟಿ ಬಿದಿಶಾ ಸಾವಿನ ಪ್ರಕರಣ, ಪತಿ ನಿತೀಶ್ ಬಂಧನ

ಗುರುಗ್ರಾಮ, ಜುಲೈ 19: ಗುರುಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಸ್ಸಾಂ ಮೂಲದ ನಟಿ, ಗಾಯಕಿ ಬಿದಿಶಾ ಬೆಜ್ಬರುವಾ ಸಾವಿನ ಪ್ರಕರಣ ಸಂಬಂಧಿಸಿದಂತೆ ಆಕೆಯ ಪತಿ ನಿಶೀತ್‌ ನನ್ನು ಹರ್ಯಾಣದ ಪೊಲೀಸರು ಬುಧವಾರದಂದು ಬಂಧಿಸಿದ್ದಾರೆ.

ನಿಶೀತ್ ಹಾಗೂ ಬಿದಿಶಾ ಇಬ್ಬರು ಪರಸ್ಪರ ಪ್ರೇಮಿಸಿ ಮದುವೆಯಾಗಿದ್ದರು. ಆದರೆ, ಬಿದಿಶಾಳಿಗೆ ನಿತೀಶ್ ಕಿರುಕುಳ ನೀಡುತ್ತಿದ್ದ. ಹೀಗಾಗಿ ಆಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ನಿತೀಶ್ ವಿರುದ್ಧ ಬಿದಿಶಾಳ ತಂದೆ ದೂರು ನೀಡಿದ್ದರು. ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ವಿಚಾರಣೆಗಾಗಿ ನಿತೀಶ್ ನನ್ನು ಬಂಧಿಸಿದ್ದಾರೆ.

Assamese singer, actor, Bidisha Bezbaruah commits suicide in Gurgaon


ಗುವಾಹಟಿಯ ಉಜ್ಮಾನ್ ಬಜಾರ್ ಪ್ರದೇಶ ಮೂಲದ ಬಿದಿಶಾ, ಗುರುಗ್ರಾಮದ ಸುಶಾಂತ್ ಲೋಕ್ ನಲ್ಲಿರೋ ನಿವಾಸದಲ್ಲಿ ನೇಣುಬಿಗಿದುಕೊಂಡು ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇತ್ತೀಚೆಗೆ ತೆರೆಕಂಡ ರಣಬೀರ್‌ ಕಪೂರ್‌ ಅಭಿಯನದ 'ಜಗ್ಗಾ ಜಾಸೂಸ್' ಚಿತ್ರದಲ್ಲಿ ಬಿದಿಶಾ ನಟಿಸಿದ್ದರು. ಟಿವಿ ಶೋ ಹಾಗೂ ಹಾಡುಗಾರಿಕೆ ಮೂಲಕವೂ ಜನಪ್ರಿಯತೆ ಗಳಿಸಿದ್ದರು. Xanto Xisto Hristo Pusto Mohadusto ಎಂಬ ನಾಟಕದಲ್ಲಿನ ಅಭಿನಯದ ಮೂಲಕ ಗುರುತಿಸಿಕೊಂಡಿದ್ದರು. ಕಾಟನ್ ಕಾಲೇಜಿನಿಂದ ಇಂಗ್ಲೀಷ್ ಸಾಹಿತ್ಯ ವಿಷಯದಲ್ಲಿ ಪದವಿ ಪಡೆದಿದ್ದ ಬಿದಿಶಾ, ಗುಜರಾತ್ ಮೂಲದ ನಿಶೀತ್ ಝಾ ಎಂಬಾತನನ್ನು ವರ್ಷದ ಹಿಂದೆ ಮದುವೆಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+