ಮೋದಿ ಅಂದ್ರೆ ವಿಷದ ಹಾವಿದ್ದಂತೆ- ಪ್ರಧಾನಿ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

ಗದಗ, ಏಪ್ರಿಲ್‌ 27: ಮೋದಿ ಅಂದ್ರೆ ವಿಷದ ಹಾವಿದ್ದಂತೆ. ವಿಷ ಹೌದೋ, ಇಲ್ಲವೋ ಅಂತಾ ನೆಕ್ಕಿ ನೋಡಿದರೆ ನೀವು ಸತ್ತಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.

ಗದಗದಲ್ಲಿ ನಡೆದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಕರ್ನಾಟಕದಲ್ಲಿ ನಾವು ಯಾರಿಗೂ ಬಗ್ಗಲ್ಲ. ಗುಜರಾತಿನವರು ಹೇಗೆ ಇಲ್ಲಿನ ಮಣ್ಣಿನ ಮಕ್ಕಳ ಬಳಿ ನಮಗೆ ಓಟು ಕೊಡಿ ಅಂತಾ ಕೇಳುತ್ತಾರೆ. ನಾವು ಕರ್ನಾಟಕದ ಮಣ್ಣಿನ ಮಕ್ಕಳು ನಮಗೂ ಕನ್ನಡ ಅಭಿಮಾನ ಇದೆ. ಯಾವನು ಗುಜರಾತ್‌ನಿಂದ ಬರಲಿ, ಅಹ್ಮದಾಬಾದ್‌ನಿಂದ ಬರಲಿ ಯಾರಿಗೂ ಬಗ್ಗಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

Mallikarjun Kharge Lashes Out At PM Narendra Modi

ಒಬ್ಬ ದೇಶದ ಪ್ರಧಾನಿಯಾಗಿ ಹಳ್ಳಿ, ಹಳ್ಳಿ, ತಾಲೂಕು ಅಡ್ಡಾಡ್ಡುತ್ತೀದ್ದೀರಾ, ಮೋದಿ ಮುಖ ನೋಡಿ‌ ಮತ ಕೊಡಿ ಅಂತಾ ಬಿಜೆಪಿಯವರು ಕೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ, ಕಾರ್ಪೊರೇಷನ್ ಇಲೆಕ್ಷನ್‌ನಲ್ಲಿಯೂ ಸಹ ಮೋದಿ ನೋಡಿ ಮತ ಕೊಡಿ ಅಂತಾ ಹೇಳುತ್ತಾರೆ. ಹಾಗಾದರೆ ನಿಮ್ಮದು ಎಷ್ಟು ಮುಖ ಇದೆ. ಇಂತಹ ಆಸೆಬುರುಕರಿಗೆ ಕುರ್ಚಿಗಾಗಿ ವ್ಯಾಮೋಹ. ಯಾವುದಾದರೂ ಒಂದು ಖುರ್ಚಿ ಖಾಲಿ ಇದ್ದರೆ ಅವರೇ ಬಂದು ಕೂರುತ್ತಾರೆ ಎಂದರು.

ಕಪ್ಪು ಹಣ ತಂದು ಪ್ರತಿಯೊಬ್ಬರಿಗೂ 15 ಲಕ್ಷ ಕೊಡುತ್ತೇವೆ ಅಂದರು, ಈಗ ಕಪ್ಪು ಹಣ ಅದಾನಿ ಬಳಿ ಇಟ್ಟಿದ್ದಾರೇನು? ಯುವಕರಿಗೆ ನೌಕರಿ ಕೊಡುತ್ತೇವೆ ಎಂದರು. 9 ವರ್ಷದಿಂದ ನೀವು 18 ಕೋಟಿ ಜನರಿಗೆ ನೌಕರಿ ಕೊಡಬಹುದಿತ್ತು. ಬರೀ ಸುಳ್ಳು ಹೇಳಿರುವುದು ಜನರಿಗೆ ಗೊತ್ತಾಗಿದೆ. 30 ಲಕ್ಷ ಸರ್ಕಾರಿ ನೌಕರಿ ಖಾಲಿ ಇವೆ. ಅದನ್ನಾದರೂ ತುಂಬಿ. ಕರ್ನಾಟಕದಲ್ಲಿ ನೌಕರಿ ಖಾಲಿ ಇವೆ. ಇಲ್ಲಿ ಬೊಮ್ಮಾಯಿನೂ ತುಂಬ್ತಿಲ್ಲ, ಅಲ್ಲಿ‌ ಮೋದಿನೂ ತುಂಬ್ತಿಲ್ಲ ಎಂದು ಕಿಡಿಕಾರಿದರು.

ಮೋದಿ ದೊಡ್ಡ ಸುಳ್ಳುಗಾರ. ಕೆಲವರು ಮೋದಿ ಮೋದಿ ಅಂತಾರೆ. ಅವರು ಕರ್ನಾಟಕಕ್ಕೆ ಏನು ಮಾಡಿದ್ದಾರೆ ಎಂದು ಹೇಳಿ ಎಂದು ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ಇಂದಿರಾ ಗಾಂಧಿ ಮೊದಲ ಬಾರಿಗೆ ರಾಕೆಟ್ ಹಾರಿಸಿದರು. ಈಗ ಎಲ್ಲಿಯಾದರೂ ರಾಕೆಟ್ ಹಾರಿದರೆ 'ಏ ಮೇರಾ ಕಾಮ್ ಹೈ' ಅಂತಾ ಸುಳ್ಳು ಹೇಳೋ ಚಟ ಅವರದು ಎಂದು ಆರೋಪಿಸಿದರು.

ಅದಾನಿಗೆ ಎಲ್ಲಾ ರೀತಿಯ ಬೆಂಬಲ ನೀಡುತ್ತಾರೆ. 2014ರಲ್ಲಿ ಅವರ ಸಂಪತ್ತು 50 ಸಾವಿರ ಕೋಟಿ, 2020ರಲ್ಲಿ 2 ಲಕ್ಷ ಕೋಟಿ ಆಯ್ತು. 2023ರಲ್ಲಿ 12 ಲಕ್ಷ ಕೋಟಿ ಆಯ್ತು. ಇಷ್ಟೊಂದು ಹಣ ಮಾಡಬೇಕಾದರೆ ಎಷ್ಟು ಸರ್ಕಾರಿ ದುಡ್ಡು ಹೊಡೆದಿರಬೇಕು. ರಸ್ತೆ, ಏರ್‌ಪೋರ್ಟ್‌ಗಳನ್ನು ಅವನಿಗೆ ಕೊಟ್ಟು, ನಮಗೆ ಜಿಎಸ್‌ಟಿ ಹಾಕುತ್ತಾರೆ. ಮುಂದೆ ಗಾಳಿ ಮೇಲೂ ಟ್ಯಾಕ್ಷ್‌ ಹಾಕಬಹುದು. ನಮ್ಮ ಹಿಂದೆ ಅಮಿತ್ ಶಾ, ಮೋದಿ ಇದ್ದಾರೆ ಅಂತಾರೆ, ಯಾಕೆ ಇದ್ದಾರೆ 40% ಹೊಡೆಯೋಕೆ ಇದ್ದಾರೆಯೇ? ಎಂದು ಪ್ರಶ್ನಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+