ಪಬ್‌ಜಿ ಆಡುವುದು ಹೇಗೆ, ಇದಕ್ಕೆ ಉತ್ತರ ಪಿಯು ಉತ್ತರ ಪತ್ರಿಕೆಯಲ್ಲಿತ್ತು

ಗದಗ, ಮಾರ್ಚ್ 20: ಸಾಮಾನ್ಯವಾಗಿ ಪರೀಕ್ಷೆ ಎಂದಾಕ್ಷಣ ಮನಸ್ಸಿನಲ್ಲಿ ಆತಂಕ ಸಹಜ, ನಾನು ಓದಿರುವುದು ಸಾಲದೇನೋ, ಅಲ್ಲಿ ಎಂಥಾ ಪ್ರಶ್ನೆ ಕೊಟ್ಟು ಬಿಡ್ತಾರೋ ಎನ್ನುವ ಕುತೂಹಲ ಸಹಜವಾದದ್ದು.

ಹಾಗೆಯೇ ಉತ್ತರ ನೆನಪಿಲ್ಲ ಎಂದಾಕ್ಷಣ ವಿದ್ಯಾರ್ಥಿಗಳು ಶಿಕ್ಷಕರಿಗೆ ಬೆದರಿಕೆ ಹಾಕುವುದು, ಇನ್ನೇನೋ ಚಿತ್ರ ಬಿಡಿಸುವುದು, ಕವನ ಬರೆಯುವುದು ಕಾಮನ್ ಆದರೆ ವಿದ್ಯಾರ್ಥಿಯೊಬ್ಬ ಪಬ್‌ಜಿ ಆಡುವುದು ಹೇಗೆ ಎನ್ನುವುದನ್ನು ಅರ್ಥಶಾಸ್ತ್ರ ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾನೆ.

ಜಿಲ್ಲೆಯ ಶಿಶಿರ್ (ಹೆಸರು ಬದಲಿಸಿದೆ) ಎಂಬ ಪ್ರಥಮ ಪಿಯು ವಿದ್ಯಾರ್ಥಿ ತನ್ನ ಅರ್ಥಶಾಸ್ತ್ರದ ಉತ್ತರ ಪತ್ರಿಕೆಯಲ್ಲಿ ಕೇವಲ ಪಬ್‍ಜಿ ಕುರಿತಂತೆ ವಿವರಿಸಿದ್ದಾನೆ. ಫಲಿತಾಂಶ ಇದೀಗ ಅವನನ್ನು ಶಿಕ್ಷಕರು ಅನುತ್ತೀರ್ಣಗೊಳಿಸಿದ್ದಾರೆ. ವಿಪರ್ಯಾಸವೆಂದರೆ ಇದೇ ವಿದ್ಯಾರ್ಥಿ ಕಳೆದ ಸಾಲಿನ ಎಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶೇಷ ಅರ್ಹತೆ (ಡಿಸ್ಟಿಂಕ್ಷನ್) ನಲ್ಲಿ ಉತ್ತೀರ್ಣನಾಗಿದ್ದ. ಆದರೆ ಯಾವಾಗ ಮಾನ್ ಲೈನ್ ಮೊಬೈಲ್ ಗೇಮ್ ನ ಚಟಕ್ಕೆ ಬಲಿಯಾದನೋ ಅಂದಿನಿಂದ ವಿದ್ಯಾಭ್ಯಾಸದ ಆಸಕ್ತಿ ಅವನಲ್ಲಿದ್ದ ಆಸಕ್ತಿ ಕಡಿಮೆಯಾಗಿತ್ತು.

Karnataka boy writes how to play PUBG, fails PU exam

ಶಿಶಿರ್ ತಾನು ಆಟದಲ್ಲೇ ಮುಳುಗಿರುತ್ತಿದ್ದ ಅದನ್ನೂ ಆತ ಕೂಡ ಒಪ್ಪಿಕೊಂಡಿದ್ದಾನೆ. ಆಟದ ನೆಪದಲ್ಲಿ ಈ ವಾರ್ಷಿಕ ಪರೀಕ್ಷೆಗಳ ವೇಳಾಪಟ್ಟಿಯು ಸಹ ಮರೆತುಹೋಗಿದೆ. ವಿದ್ಯಾರ್ಥಿಯ ಪೋಷಕರು ಆತ ಸದಾಕಾಲ ಮೊಬೈಲ್ ನಲ್ಲಿ ನಿರತವಾಗಿದ್ದದ್ದನ್ನು ಕಂಡರೂ ಆತ ತನ್ನ ಸ್ನೇಹಿತ, ಸಸಪಾಠಿಯೊಡನೆ ಸಂಭಾಷಣೆ ನಡೆಸಿದ್ದನೆಂದು ನಂಬಿದ್ದರು.

ನಾನು ಉತ್ತಮವಾಗಿ ಓದುವ ವಿದ್ಯಾರ್ಥಿ, ಆದರೆ ಪಬ್‍ಜಿ ಆಕರ್ಷಕವಾದ ಆಟ, ನನ್ನನ್ನು ಸೆಳೆಯಿತು. ನಾನು ಅದರ ಚಟಕ್ಕೆ ಬಿದ್ದೆ. ಎಷ್ಟೆಂದರೆ ನಾನು ಕೆಲವೊಮ್ಮೆ ನನ್ನ ತರಗತಿಗೆ ಗೈರಾಗಿ ತೋಟದಲ್ಲಿ ಕುಳಿತು ಈ ಆಟವನ್ನು ಆಡುತ್ತಿದ್ದೆ ಶಿಶಿರ್ ಹೇಳಿದ್ದಾನೆ.

ಆತ ಪರೀಕ್ಷೆಗೆ ಹದಿನೈದು ದಿನಗಳಿರುವಾಗ ಪಬ್‍ಜಿ ಆಡುವುದನ್ನು ಬಿಡಲು ತೀರ್ಮಾನಿಸಿದ್ದನು. ಆದರೆ ಆತನಿಗೆ ಓದುವುದರಲ್ಲಿ ಆಸಕ್ತಿ , ಏಕಾಗ್ರತೆ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾನೆ, ಇದೀಗ ಆತನನ್ನು ವೈದ್ಯಕೀಯ ಸಮಾಲೋಚನೆಗೆ ಕಳುಹಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+