ಗದಗ: ಬಡ್ಡಿ ವ್ಯವಹಾರ, ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಹಣ ಎಣಿಸಿ ಪೊಲೀಸರು ಸುಸ್ತು

ಗದಗ, ಫೆಬ್ರವರಿ 13: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಹೆಚ್ಚಾದ ಹಿನ್ನಲೆಯಲ್ಲಿ ಪೊಲೀಸರು ಬಡ್ಡಿ ವ್ಯವಹಾರದ ಮೇಲೆ ಕಣ್ಣಿಟ್ಟಿದ್ದಾರೆ. ಗದಗ ಪೊಲೀಸರು ಬೆಟಗೇರಿಯಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ದಾಳಿ ಮಾಡಿದ್ದರು. ಮನೆಯಲ್ಲಿ ಸಿಕ್ಕ ಹಣ ಎಣಿಕೆ ಮಾಡಿ ಮಾಡಿ ಸಿಬ್ಬಂದಿಗಳು ಸುಸ್ತಾಗಿದ್ದಾರೆ. ಮನೆಯಲ್ಲಿ ಸಿಕ್ಕ ಒಟ್ಟು ಹಣ 4,90,98,625 ರೂ.ಗಳು.

ದೂರುಗಳು ಬಂದ ಹಿನ್ನಲೆಯಲ್ಲಿ ಬೆಟಗೇರಿಯಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ದಾಳಿಯ ಕುರಿತು ಗದಗ ಎಸ್ಪಿ ಬಿ. ಎಸ್. ನೇಮಗೌಡ ಮಾಹಿತಿ ನೀಡಿದ್ದಾರೆ. ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಸಿಕ್ಕ ಹಣ, ಆಭರಣ, ಆಸ್ತಿಪತ್ರಗಳ ಕುರಿತು ಮಾತನಾಡಿದ್ದಾರೆ.

Illegal Loan Interest Mafia Police Seized 4 Crore In Betageri

ದೂರು ಸ್ವೀಕರಿಸಿದ್ದ ಪೊಲೀಸರು: ಫೆಬ್ರವರಿ 10ರಂದು ಬೆಟಗೇರಿ ನಿವಾಸಿ ಅಶೋಕ ಎಂಬುವವರು ಬೆಟಗೇರಿ ಪೊಲೀಸ್ ಠಾಣಿಗೆ ಆಗಮಿಸಿ ದಿನಾಂಕ10/03/2016ರಂದು ಮುಂಜಾನೆ 10:45 ರಿಂದ ದಿನಾಂಕ 10/01/2025ರ ಸಾಯಂಕಾಲ 7ಗಂಟೆಯ ನಡುವೆ ಯಲ್ಲಪ್ಪ ತೇಜುಸಾ ಮಿಸ್ಕಿನ್ ಹಂತ ಹಂತವಾಗಿ 1 ಕೋಟಿ 93 ಲಕ್ಷ ಹಣವನ್ನು ಕೈಗಡ ಸಾಲವನ್ನು ಕೊಟ್ಟಿದ್ದಾರೆ ಎಂದು ಹೇಳಿದ್ದರು.

ಮರಳಿ ತನ್ನಿಂದ 1 ಕೋಟಿ 40 ಲಕ್ಷ ಹಣವನ್ನು ವಸೂಲಿ ಮಾಡಿಕೊಂಡಿದ್ದಾರೆ. ಅಲ್ಲದೆ ತನ್ನ ಕೋಟ್ಯಾಂತರ ರೂ. ಆಸ್ತಿಯನ್ನು ಯಲ್ಲಪ್ಪ ಮಿಸ್ಕಿನ್, ವಿಕಾಶ ಮಿಸ್ಕಿನ್, ಮಂಜು ಶ್ಯಾವಿ, ಈರಣ್ಣ ಬೂದಿಹಾಳ, ಮೋಹನ್ ಇವರೆಲ್ಲರೂ ಹೆದರಿಸಿ, ಬೆದರಿಸಿ, ಕಿರುಕಳ ಕೊಟ್ಟು ಆಸ್ತಿ ಮತ್ತು ಕಲ್ಯಾಣ ಮಂಟಪವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ದೂರಿದ್ದರು.

ಅಲ್ಲದೆ ಇನ್ನುಳಿದ ಆಸ್ತಿಗೆ ಸಹ ಸಂಚಗಾರ ಕಾಗದಗಳನ್ನು ಮಾಡಿಸಿಕೊಂಡು ತನ್ನಿಂದಾ ಮತ್ತು ತನ್ನ ಮನೆಯ ಜನರಿಂದ ಪಡೆದುಕೊಂಡ ಖಾಲಿ ಚೆಕ್‌ ಮತ್ತು ಬಾಂಡ್‌ಗಳ ಬಗ್ಗೆ ಹೆದರಿಸಿ, ಬೆದರಿಸಿ ಅವುಗಳನ್ನು ಸಹ ಉಪಯೋಗಿಸಿಕೊಂಡು ಇತರ ಆರೋಪಿಗಳ ಜೊತೆ ಸೇರಿ ವಸೂಲಿ ಮಾಡಿದ್ದಾರೆ. ಇತರ ಜನರಿಗೂ ಈ ಮಾದರಿ ಮೋಸ, ವಂಚನೆ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದರು.

ಈ ದೂರಿನ ಹಿನ್ನಲೆಯಲ್ಲಿ ಪೊಲೀಸರು ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ದಾಳಿ ಮಾಡಿದ್ದರು. ಆಗ ಮನೆಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದೆ. ಮನೆಯಲ್ಲಿ ಲಾಕರ್ ಒಂದು ಸಹ ಸಿಕ್ಕಿತ್ತು. ಅದನ್ನು ತೆರೆದು ನೋಡಿದಾಗ ಇನ್ನಷ್ಟು ಹಣ, ಆಭರಣ ಪತ್ತೆಯಾಗಿದೆ.

ಪೊಲೀಸರು ಮಾಹಿತಿ ಪ್ರಕಾರ ಯಲ್ಲಪ್ಪ ಮಿಸ್ಕಿನ್ ಮನೆಯಲ್ಲಿ ಸಿಕ್ಕ ಹಣ 4,90,98,625 ರೂ.ಗಳು. ಬಂಗಾರ 992 ಗ್ರಾಂ (ಅಂದಾಜು 79 ಲಕ್ಷ ರೂ.), ಬ್ಯಾಂಕ್ ಚೆಕ್‌ಗಳು 600, ಬಾಂಡ್ 650, ಎಟಿಎಂ ಕಾರ್ಡ್‌ 4, ಬ್ಯಾಂಕ್ ಪಾಸ್ ಬುಕ್ 9, ಎಲ್‌ಐಸಿ ಬಾಂಡ್ 2, ಮದ್ಯ 65 ಲೀಟರ್.

ಯಲ್ಲಪ್ಪ ಮಿಸ್ಕಿನ್ ಕಲ್ಲಿನ ಹಳೆಯದಾದ ಮನೆಯಲ್ಲಿ ವಾಸವಾಗಿದ್ದ. ಯಾವುದೇ ನೋಂದಣಿ ಮಾಡಿಕೊಳ್ಳದೇ ಕೋಟಿ ಕೋಟಿ ಬಡ್ಡಿ ವ್ಯವಹಾರ ಮಾಡುತ್ತಿದ್ದ. ಸಾಲ ಮರಳಿ ನೀಡದಿದ್ದರೆ, ಅವರ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡು ಕಿರುಕುಳ ನೀಡುತ್ತಿದ್ದ. ರೌಡಿಗಳನ್ನು ಬಿಟ್ಟು ಧಮ್ಕಿ ಹಾಕಿಸುತ್ತಿದ್ದ ಎಂಬ ಆರೋಪಗಳಿವೆ.

ಮಿಸ್ಕಿನ್‌ಗೆ ಸೇರಿದ 12 ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿದ್ದು ಕಲ್ಲಿನ ಹಳೆಯದಾದ ಮನೆಯಲ್ಲಿ 4 ಕೋಟಿ ರೂ. ದುಡ್ಡು ಇದೆ ಎಂದು ಪೊಲೀಸರು ಸಹ ಅಂದಾಜಿಸಿರಲಿಲ್ಲ. ಮನೆಯ ಲಾಕರ್‌ನಲ್ಲಿ ಪತ್ತೆಯಾದ 500 ರೂ. ನೋಟಿನ ಕಂತೆಯನ್ನು ನೋಡಿ ಪೊಲೀಸರು ಶಾಕ್ ಆಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+