ಸೊರಟೂರು: "ಒಂದು ರೂಪಾಯಿ, ಒಂದು ರೊಟ್ಟಿ" ಅಭಿಯಾನ ಆರಂಭಿಸಿ ಗಮನ ಸೆಳೆದ ಬಿಜೆಪಿ ಟಿಕೆಟ್ ಆಕಾಂಕ್ಷಿ

ಸೊರಟೂರು ಗ್ರಾಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು "ಒಂದು ರೂಪಾಯಿ, ಒಂದು ರೊಟ್ಟಿ" ಎನ್ನುವ ಅಭಿಯಾನವನ್ನು ಆರಂಭಿಸಿ ಗಮನ ಸೆಳೆದಿದ್ದಾರೆ.

ಗದಗ, ಮಾರ್ಚ್‌, 07: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ರಂಗೇರುತ್ತಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ರಾಜಕಾರಣಿಗಳು ಅವರದ್ದೇ ಆದ ಶೈಲಿಯಲ್ಲಿ ಪ್ರಚಾರವನ್ನು ಆರಂಭಿಸಿದ್ದಾರೆ. ಜನರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಶತಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ. ಹಾಗೆಯೇ ಸೊರಟೂರು ಗ್ರಾಮದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯೊಬ್ಬರು "ಒಂದು ರೂಪಾಯಿ, ಒಂದು ರೊಟ್ಟಿ" ಎನ್ನುವ ಅಭಿಯಾನ ಆರಂಭಿಸಿ ಗಮನ ಸೆಳೆದಿದ್ದಾರೆ.

ಬಿಜೆಪಿ ಆಕಾಂಕ್ಷಿ ಅನಿಲ್ ಮೆಣಸಿನಕಾಯಿಯವರು ಮುಂಬರುವ ಚುನಾವಣೆಗಾಗಿ ಭರ್ಜರಿ ಪ್ರಚಾರವನ್ನು ಆರಂಭಿಸಿದ್ದಾರೆ. ತಮ್ಮ ನಾಮಪತ್ರಕ್ಕಾಗಿ ಒಂದು ರೂಪಾಯಿ ಮತ್ತು ಒಂದು ರೊಟ್ಟಿಯನ್ನು ನೀಡುವಂತೆ ಜನರ ಬಳಿ ಕೇಳುತ್ತಿದ್ದಾರೆ. ಗದಗದಿಂದ 14 ಕಿಲೋ ಮೀಟರ್‌ ದೂರದಲ್ಲಿರುವ ಸೊರಟೂರು ಗ್ರಾಮದಲ್ಲಿ ಭಾನುವಾರ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾಯಕರಿರುವುದೇ ಜನರ ಸೇವೆ ಮಾಡಲಿಕ್ಕಾಗಿ ಎಂದು ಎಲ್ಲರಿಗೂ ತಿಳಿಸುವುದು ನಮ್ಮ ಗುರಿಯಾಗಿದೆ ಎಂದರು.

Gadag BJP ticket aspirant starts ‘one rupee, one roti’ campaign

ಒಂದು ರೂಪಾಯಿ, ಒಂದು ರೊಟ್ಟಿ ಅಭಿಯಾನ

ಮೊದಲು ಅವರು ಸೊರ್ತೂರಿನ ನೀಲಪ್ಪ ಸೀತಾರಳ್ಳಿ ಅವರ ಮನೆಗೆ ಭೇಟಿ ನೀಡುವ ಮೂಲಕ ಅಭಿಯಾನವನ್ನು ಪ್ರಾರಂಭಿಸಿದರು. ಹೀಗೆ ಹಲವಾರು ಮನೆಗಳಿಗೆ ಹೋಗಿ ಪ್ರತಿಯೊಬ್ಬರಿಂದ 1 ರೂಪಾಯಿ ನಾಣ್ಯ ಮತ್ತು ಒಂದು ರೊಟ್ಟಿಯನ್ನು ಸಂಗ್ರಹಿಸಿ ಗಮನ ಸೆಳೆದಿದ್ದಾರೆ. ಹಾಗೆಯೇ ಗ್ರಾಮಸ್ಥರು ಕೂಡ ಅನಿಲ್‌ ಅವರನ್ನು ಸಂತೋಷದಿಂದ ಆಹ್ವಾನಿಸಿ ಚಟ್ನಿ ಮತ್ತು ಮೊಸರಿನೊಂದಿಗೆ ರೊಟ್ಟಿಯನ್ನು ನೀಡಿದರು. ಈ ವಿಶಿಷ್ಟ ಅಭಿಯಾನವನ್ನು ನೋಡಲು ಜನಸಾಗರವೇ ನೆರೆದಿತ್ತು.

ಗಮನ ಸೆಳೆದ ಬಿಜೆಪಿ ಟಿಕೆಟ್‌ ಆಕಾಂಕ್ಷಿ

ಬಳಿಕ ಮಾತನಾಡಿದ ಅನಿಲ್, ಜನರಿಂದ ಸಂಗ್ರಹಿಸಿದ ಹಣದಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ನಾನು ಬದಲಾವಣೆಯನ್ನು ತರಲು ಬಯಸುತ್ತೇನೆ. ನಾವು ನಾಯಕರಲ್ಲ, ಜನರ ಸೇವಕರು ಎಂದು ಜನರಿಗೆ ತಿಳಿಸಲು ಬಯಸುತ್ತೇನೆ. ಈ ಅಭಿಯಾನದ ಮೂಲಕ ಕ್ಷೇತ್ರದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಆಶೀರ್ವಾದ ಪಡೆಯುತ್ತೇನೆ ಎಂದರು.

ನಂತರ ಸೊರ್ತೂರು ಗ್ರಾಮಸ್ಥರಾದ ನೀಲಪ್ಪ ಸೀತಾರಳ್ಳಿ ಮಾತನಾಡಿ, ಇದೊಂದು ಸ್ವಾಗತಾರ್ಹವಾದ ಹೆಜ್ಜೆಯಾಗಿದೆ. ಅನಿಲ್‌ಗೆ ರೊಟ್ಟಿ ಹಾಗೂ ಒಂದು ರೂಪಾಯಿಯನ್ನು ನೀಡಿದ್ದೇವೆ. ಗದಗ ತಾಲೂಕಿನಲ್ಲಿ ಹಲವಾರು ಸಮಸ್ಯೆಗಳಿವೆ. ನಮಗೆ ಮೊದಲು ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಸಮಸ್ಯೆಗಳನ್ನು ದೂರ ಮಾಡಬೇಕಾಗಿದೆ. ನಮ್ಮ ಗ್ರಾಮಕ್ಕೆ ಎಲ್ಲಾ ಮೂಲಭೂತ ಸೌಕರ್ಯಗಳು ಸಿಗಬೇಕು ಎಂದು ಆಕಾಂಕ್ಷಿಗಳನ್ನು ಕೋರಿದ್ದೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+