ಕೊರೊನಾ ವೈರಸ್ ಸೀಸನಲ್ ಆಗುವ ಆತಂಕ: ಬೀರುವ ದುಷ್ಪರಿಣಾಮಗಳೇನು?

ದುಬೈ, ಸೆಪ್ಟೆಂಬರ್ 15: ಕೊರೊನಾ ವೈರಸ್ ಸೀಸನಲ್ ಆಗುವ ಆತಂಕವನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ.

ಅಂದರೆ ಪ್ರತಿ ವರ್ಷವೂ ಒಂದು ಸಮಯಕ್ಕೆ ಡೆಂಗ್ಯೂ, ಮಲೇರಿಯಾದಂತೆಯೇ ಇದು ಕೂಡ ಬರುವ ಸಾಧ್ಯತೆ ಇದೆ ಎಂದಿದ್ದಾರೆ.

ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾದರೆ, ಸಮಶೀತೋಷ್ಣ ರಾಷ್ಟ್ರಗಳಲ್ಲಿ ಕೊರೊನಾ ವೈರಸ್, ಋತುಮಾನಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ವೈರಸ್‌ಗಳಾಗಬಹುದು, ಅಲ್ಲಿಯವರೆಗೂ ಅದು ಎಲ್ಲಾ ಕಾಲದಲ್ಲಿ ಸೋಂಕನ್ನು ಹರಡುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

COVID-19 May Become A Seasonal Virus But Not Yet

ಹರ್ಡ್ ಇಮ್ಯುನಿಟಿ ಹೆಚ್ಚಾಗುವವರೆಗೂ ಕೊರೊನಾ ಸೋಂಕು ವರ್ಷ ಪೂರ್ತಿ ಹರಡುತ್ತಿರುತ್ತದೆ. ಹಾಗಾಗಿ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.

ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದನ್ನು ತಪ್ಪಿಸಬೇಕು ಹಾಗೂ ಶುಚಿತ್ವ ಕಾಪಾಡಿಕೊಳ್ಳುವಂತಹ ಕ್ರಮಗಳನ್ನು ಪಾಲಿಸುವ ಮೂಲಕ ಕೊರೊನಾ ಸೋಂಕಿನೊಂದಿಗೆ ಬದುಕುವುದನ್ನು ಕಲಿಯಬೇಕಿದೆ ಎಂದು ಈ ಅಧ್ಯಯನ ಹಿರಿಯ ಲೇಖಕ ಲೆಬನಾನ್ ಬೈರೂತ್ ಹೇಳಿದ್ದಾರೆ.

ವಿಜ್ಞಾನಿಗಳು ಹೇಳುವ ಪ್ರಕಾರ ರೋಗನಿರೋಧಕ ಶಕ್ತಿ ಹೆಚ್ಚಾಗುವ ಹೊತ್ತಿಗೆ ಬಹು ಅಲೆಗಳಲ್ಲಿ ಕೊರೊನಾ ಸೋಂಕು ಬಾಧಿಸುವ ಸಾಧ್ಯತೆ ಇದೆ.

ಈ ಹೊಸ ಅಧ್ಯನ ಪ್ರಬಂಧ ಜರ್ನಲ್ ಫ್ರಂಟಿಯರ್ಸ್ ಇನ್ ಪಬ್ಲಿಕ್ ಹಲ್ತ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಸಮುದಾಯದಲ್ಲಿರುವ ಬಹುಪಾಲು ಜನರಲ್ಲಿ ಕೊರೊನಾ ಸೋಂಕು ಎದುರಿಸುವಂತಹ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾದರೆ , ಸೋಂಕು ಹರಡುವ ಪ್ರಮಾಣವೂ ಕೂಡ ಕ್ಷೀಣಿಸಲು ಆರಂಭವಾಗುತ್ತದೆ.

ಈ ಮೂಲಕ ಕೊರೊನಾ ಸೋಂಕು ವಾತಾವರಣದ ಏರಿಳಿತಗೊಳಿಗೆ ಅನುಗುಣವಾಗಿ ಸೀಸನಲ್ ವೈರಸ್ ಆಗಿ ಉಳಿಯಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+