ಧಾರವಾಡ ಲಾಕ್ ಡೌನ್: ಹುಬ್ಬಳ್ಳಿ ಯಥಾಸ್ಥಿತಿ, ಈ ಭಾಗದಲ್ಲಿ ಮಾತ್ರ ಅಂಗಡಿ ಓಪನ್ ಗೆ ಅನುಮತಿ

ಧಾರವಾಡ, ಏಪ್ರಿಲ್ 29: ಕೆಲವೊಂದು ಜಿಲ್ಲೆಗಳಲ್ಲಿ, ಲಾಕ್ ಡೌನ್ ವೇಳೆ ಯಾವ ಯಾವ ಚಟುವಟಿಕೆಗಳಿಗೆ ಅನುಮತಿ ನೀಡಬೇಕೆನ್ನುವ ಜವಾಬ್ದಾರಿಯನ್ನು ಜಿಲ್ಲಾ ಉಸ್ತುವಾರಿಗಳಿಗೆ ಬಿಡಲಾಗಿದೆ.

ಈ ಸಂಬಂಧ, ಧಾರವಾಡ ಜಿಲ್ಲಾಡಳಿತದ ಜೊತೆ ಸಭೆ ನಡೆಸಿದ ಉಸ್ತುವಾರಿ ಜಗದೀಶ್ ಶೆಟ್ಟರ್, ಮಾಧ್ಯಮವಗಳಿಗೆ ಸಭೆಯ ವಿವರವನ್ನು ನೀಡಿದ್ದಾರೆ. ಅದು ಹೀಗಿದೆ.

What Is Available In Dharwad District? Incharge Jagadish Shettar Briefs Media

> ಜಿಲ್ಲೆ ಆರೆಂಜ್ ಝೋನ್ ನಲ್ಲಿದೆ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಆರಂಭಕ್ಕೆ ಅವಕಾಶ ನೀಡಲಾಗಿದೆ. ಮಹಾನಗರಪಾಲಿಕೆ ವ್ಯಾಪ್ತಿ‌ ಹಾಗೂ ಕಂಟೇನ್ಮೆಂಟ್ ಏರಿಯಾ ಹೊರಗಿರುವ ಪ್ರದೇಶದಲ್ಲಿ ಕೈಗಾರಿಕೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

> ಗ್ರಾಮೀಣ ಭಾಗದಲ್ಲಿ ನೋಂದಾಯಿತ ಅಂಗಡಿಗಳ ಆರಂಭಕ್ಕೆ ಅನುವು.

> ನವಲಗುಂದ, ಅಣ್ಣಿಗೇರಿ, ಕಲಘಟಗಿ, ಅಳ್ನಾವರ, ಕುಂದಗೋಳ, ಧಾರವಾಡ ಗ್ರಾಮೀಣ ಭಾಗದಲ್ಲಿ ಅಂಗಡಿ ಒಪನ್ ಮಾಡಲು ಅನುಮತಿ.

> ಹುಬ್ಬಳ್ಳಿಯಲ್ಲಿ ಕಂಟೇನ್ಮೆಂಟ್ ವಲಯ ಇನ್ನೂ ಇದೆ. ಹಾಗಾಗಿ, ಹುಬ್ಬಳ್ಳಿ ನಗರದಲ್ಲಿ ಯಾವುದಕ್ಕೂ ವಿನಾಯತಿ ಇಲ್ಲ.

> ಧಾರವಾಡದ ಕಂಟೇನ್ಮೆಂಟ್ ವಲಯ ತೆರವು ಆಗಿದೆ. ಧಾರವಾಡ ನಗರದಲ್ಲಿ ಯಾವ ಅಂಗಡಿ ಓಪನ್ ಮಾಡಬಹುದು ಎನ್ನುವುದನ್ನು ಜಿಲ್ಲಾಧಿಕಾರಿಗಳು ತಿಳಿಸುತ್ತಾರೆ.

> ಸೋಮವಾರ, ಮಂಗಳವಾರ, ಬುಧವಾರ ಗುರುವಾರ ಮಾತ್ರ, ಬೆಳಗ್ಗೆ 10ರಿಂದ ಸಂಜೆ 6ರವರೆಗೆ, ಧಾರವಾಡದಲ್ಲಿ ಅಂಗಡಿ ತೆರೆಯಲು ಅವಕಾಶ.

> ಗ್ರಾಮೀಣ ಭಾಗದಲ್ಲಿ ನರೇಗಾ, ಕುಡಿಯುವ ನೀರಿನ ಯೋಜನೆ ಕಾಮಗಾರಿ ಆರಂಭ. ಕಾಮಗಾರಿ ಸ್ಥಳದಲ್ಲೇ ಕ್ಯಾಂಪ್ ಮಾಡಿ ಕಾರ್ಮಿಕರನ್ನು ಇಟ್ಟುಕೊಳ್ಳಬೇಕು.

> ಲಾಕ್‌ಡೌನ್ ಸಡಿಲಿಕೆ ಯಾವುದೇ ಕಾರಣಕ್ಕೂ ದುರುಪಯೋಗ ಆಗಬಾರದು. ವಿನಾಕಾರಣ ಓಡಾಡಬಾರದು. ಜನ ಶಿಸ್ತು ಪಾಲಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+