Rahul Gandhi: "ರಾಹುಲ್ ಗಾಂಧಿ Immature ಮನುಷ್ಯ!"
Rahul Gandhi: ಕಾಂಗ್ರೆಸ್ ಮುಖಂಡ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ Immature ಮನುಷ್ಯ. ರಾಹುಲ್ ಗಾಂಧಿಗೆ ತಿಳುವಳಿಕೆ ತುಂಬಾ ಕಡಿಮೆ ಅವರು ಈ ಬಾರಿ ಲೋಕಸಭೆಯ ಅಧಿವೇಶನಕ್ಕೆ ಸರಿಯಾಗಿ ಬರಲಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಅವರು ವಿವಿಧ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ.
ದೇಶದಲ್ಲಿ ಇನ್ನು ಹಲವು ವರ್ಷಗಳ ಕಾಲ ಬಿಜೆಪಿ ಆಡಳಿತ ಮುಂದುವರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತವೇ ಇದಕ್ಕೆ ಕಾರಣ ಎಂದಿರುವ ಪ್ರಹ್ಲಾದ್ ಜೋಶಿ ಅವರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ವಿರುದ್ಧ ವಾಕ್ಸಮರವನ್ನೇ ನಡೆಸಿದ್ದಾರೆ. ರಾಹುಲ್ ಗಾಂಧಿ ಒಬ್ಬ Immature ಮನುಷ್ಯ ಎಂದು ಪ್ರಹ್ಲಾದ್ ಜೋಶಿ ಅವರು ಹೇಳಿದ್ದಾರೆ. ಮುಂದುವರಿದು ಲೋಕಸಭೆ ಅಧಿವೇಶನದ ಸಮಯದಲ್ಲಿ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಗೆ ಬರಲೇ ಇಲ್ಲ. ಇನ್ನು ರಾಹುಲ್ ಗಾಂಧಿ ಅವರು ವೋಟಿಂಗ್ ಟೈಟ್‌ಗೆ ಬಂದಿದ್ದರು. ರಾಜಕೀಯದಲ್ಲಿ ಇರುವವರಿಗೆ ಸೌಜನ್ಯ ಇರಬೇಕು ಎಂದು ಅವರು ಹೇಳಿದ್ದಾರೆ.

ಕೇರಳದ ವಯನಾಡ್‌ನಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಜನ ಪ್ರತಿಭಟನೆ ಮಾಡುತ್ತಿದ್ದಾರೆ. ವಕ್ಫ್‌ನಲ್ಲಿ ನಾವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದೇವೆ. ಈ ವಿಚಾರವಾಗಿ ಕೇರಳದಲ್ಲಿ ಕ್ರೈಸ್ತರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಒಂದು ಮಸೀದಿ, ಒಂದು ದರ್ಗಾ ಅವರ ಹೆಸರಲ್ಲಿ ಇರೋದು ಹೀಗಾಗಿ ತೊಂದರೆ ಆಗಲ್ಲ ಎಂದಿದ್ದಾರೆ. ಕ್ರೈಸ್ತ ಸಮುದಾಯದ ವೋಟ್ ಕಡಿಮೆ ಇರುವ ಕಾರಣಕ್ಕೆ ಕಾಂಗ್ರೆಸ್ ಅವರನ್ನು ಕೈ ಬಿಟ್ಟಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದಿದ್ದಾರೆ.
ಇನ್ನು ತಮಿಳುನಾಡು ರಾಜಕೀಯ ಹಾಗೂ ಅಣ್ಣಾಮಲೈ ಅವರ ಬಗ್ಗೆ ಮಾತನಾಡಿರುವ ಅವರು, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೆ ಅಣ್ಣಾಮಲೈ ಅವರು ರಾಜೀನಾಮೆ ಕೊಟ್ಟಿರುವ ವಿಷಯ ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ವರದಿಯಾಗಿರುವುದನ್ನು ನೋಡಿದ್ದೇನೆ. ರಾಜೀನಾಮೆ ಕೊಟ್ಟಿರುವವರಿಗೆ ಅವರಿಗೆ ಬೇರೆ ಹುದ್ದೆ ಕೊಡಬಹುದು. ಇತ್ತೀಚಿನ ದಿನಗಳಲ್ಲಿ ನಾನು ಹಾಗೂ ಅಣ್ಣಾಮಲೈ ಭೇಟಿ ಮಾಡಿಲ್ಲ. ಎರಡು ಮೂರು ತಿಂಗಳುಗಳ ಹಿಂದೆ ಸಿಕ್ಕಿದ್ದರು ಎಂದರು.
ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಮಾತನಾಡಿದ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ಪಾರ್ಟಿ ಇರುವ ಭಾಗದಲ್ಲಿ ಎಲ್ಲವೂ ಕಾನೂನುಬಾಹಿರ ಚಟುವಟಿಕೆಗಳು ನಡೆಯುವುದು ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷವೆಂದರೆ ಕ್ರಿಮಿನಲ್‌ಗಳಿಗೆ ಹಾಗೂ ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಸ್ವರ್ಗದ ಬಾಗಿಲು ತೆಗೆದಂತೆ ಎನ್ನುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಾರ್ಟಿಯಲ್ಲಿ ಇರುವ ಸಚಿವರ ಸ್ನೇಹಿತರೇ ಇದರಲ್ಲಿ ಭಾಗಿಯಾಗಿರುತ್ತಾರೆ. ಹೀಗಾಗಿ, ಇಲ್ಲಿ ಏನೂ ಆಗಲ್ಲ ಅಂತ ಹೇಳಿದ್ದಾರೆ.












Click it and Unblock the Notifications