Deepavali Special Train: ದೀಪಾವಳಿ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ, ಇಲ್ಲಿದೆ ವಿವರ

ಹುಬ್ಬಳ್ಳಿ, ಅಕ್ಟೋಬರ್‌ 26: ದೀಪಾವಳಿ ಮತ್ತು ಛತ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ-ಮುಜಾಫರ್ಪುರ ಮತ್ತು ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ದಾನಾಪುರ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳು ಸಂಚರಿಸಲು ಸೂಚನೆ ನೀಡಿದೆ. ಇದರಿಂದ ಹಬ್ಬಕ್ಕಾಗಿ ವಿವಿಧ ಭಾಗಗಳಿಗೆ ತೆರಳುವವರಿಗೆ ಅನುಕೂಲವಾಗಲಿದೆ.

ವಿಶೇಷ ರೈಲಿನ ವಿವರಗಳು ಈ ಕೆಳಗಿನಂತಿವೆ

1. ರೈಲು ಸಂಖ್ಯೆ 07373/07374 ಎಸ್ಎಸ್ಎಸ್ ಹುಬ್ಬಳ್ಳಿ-ಮುಜಾಫರಪುರ್-ಎಸ್ಎಸ್ಎಸ್ ಹುಬ್ಬಳ್ಳಿ ವಿಶೇಷ ಎಕ್ಸ್ ಪ್ರೆಸ್ ರೈಲು (ಒಂದು ಟ್ರಿಪ್)

ಅಕ್ಟೋಬರ್ 27 ರಂದು ರೈಲು ಸಂಖ್ಯೆ 07373 ಹುಬ್ಬಳ್ಳಿಯಿಂದ ಸಂಜೆ 5:20 ಗಂಟೆಗೆ ಹೊರಟು, ಮುಜಫರ್‌ಪುರ ನಿಲ್ದಾಣವನ್ನು ಅಕ್ಟೋಬರ್ 29 ರಂದು ಸಂಜೆ 4 ಗಂಟೆಗೆ ತಲುಪಲಿದೆ.

Special Train For Deepavali 2024 Hubballi- Bengaluru and Danapur Special Train For Deepavali

ಹಿಂದಿರುಗುವ ದಿಕ್ಕಿನಲ್ಲಿ, ಅಕ್ಟೋಬರ್ 30 ರಂದು ರೈಲು ಸಂಖ್ಯೆ 07374 ಮುಜಫರ್‌ಪುರದಿಂದ ಮಧ್ಯಾಹ್ನ 1:15 ಗಂಟೆಗೆ ಹೊರಟು, ಹುಬ್ಬಳ್ಳಿ ನಿಲ್ದಾಣಕ್ಕೆ ನವೆಂಬರ್ 1 ರಂದು ಬೆಳಿಗ್ಗೆ 10:30 ಗಂಟೆಗೆ ಆಗಮಿಸಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಧಾರವಾಡ, ಬೆಳಗಾವಿ, ಘಟಪ್ರಭಾ, ಮೀರಜ್, ಸಾಂಗ್ಲಿ, ಕರಾಡ್, ಸತಾರಾ ಪುಣೆ, ದೌಂಡ್ ಕಾರ್ಡ್ ಲೈನ್, ಅಹ್ಮದ್‌ನಗರ, ಕೋಪರ್‌ಗಾಂವ್, ಮನ್ಮಾಡ್, ಭೂಸಾವಲ್, ಖಾಂಡ್ವಾ, ಇಟಾರ್ಸಿ, ನರಸಿಂಗ್‌ಪುರ, ಜಬಲ್‌ಪುರ, ಕಟ್ನಿ, ಸತ್ನಾ, ಮಾಣಿಕ್‌ಪುರ, ಪ್ರಯಾಗ್‌ರಾಜ್ ಛೋಕಿ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್, ಅರಾ, ದಾನಾಪುರ, ಪಾಟ್ಲಿಪುತ್ರ, ಸೋನ್‌ಪುರ್ ಮತ್ತು ಹಾಜಿಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ರೈಲು 2 ಎಸಿ 2-ಟೈರ್, 10 ಎಸಿ 3-ಟೈರ್, 5 ಸ್ಲೀಪರ್ ಕ್ಲಾಸ್ ಮತ್ತು 2 ಲಗೇಜ್, ಬ್ರೇಕ್ ಕಮ್ ಜನರೇಟರ್ ಕಾರುಗಳು ಸೇರಿದಂತೆ 19 ಬೋಗಿಗಳನ್ನು ಒಳಗೊಂಡಿರುತ್ತದೆ.

2. ರೈಲು ಸಂಖ್ಯೆ 06235/06236 ಎಸ್ಎಂವಿಟಿ ಬೆಂಗಳೂರು-ದಾನಾಪುರ-ಎಸ್ಎಂವಿಟಿ ಬೆಂಗಳೂರು ವಿಶೇಷ ವಿಶೇಷ ಎಕ್ಸ್ ಪ್ರೆಸ್ ರೈಲು (ಒಂದು ಟ್ರಿಪ್)

ನವೆಂಬರ್ 3 ರಂದು ರೈಲು ಸಂಖ್ಯೆ 06235 ಎಸ್ಎಂವಿಟಿ ಬೆಂಗಳೂರಿನಿಂದ ರಾತ್ರಿ 11 ಗಂಟೆಗೆ ಹೊರಟು, ದಾನಾಪುರ ನಿಲ್ದಾಣವನ್ನು ನವೆಂಬರ್ 5 ರಂದು ಸಂಜೆ 4:30 ಗಂಟೆಗೆ ತಲುಪಲಿದೆ.

ಹಿಂದಿರುಗುವ ದಿಕ್ಕಿನಲ್ಲಿ, ನವೆಂಬರ್ 9 ರಂದು ರೈಲು ಸಂಖ್ಯೆ 06236 ದಾನಾಪುರದಿಂದ ಬೆಳಿಗ್ಗೆ 8:05 ಗಂಟೆಗೆ ಹೊರಟು, ಎಸ್ಎಂವಿಟಿ ಬೆಂಗಳೂರು ನಿಲ್ದಾಣಕ್ಕೆ ನವೆಂಬರ್ 11 ರಂದು ಬೆಳಿಗ್ಗೆ 7:30 ಗಂಟೆಗೆ ಆಗಮಿಸಲಿದೆ.

ಈ ರೈಲು ಎರಡೂ ದಿಕ್ಕುಗಳಲ್ಲಿ ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್‌ಪೇಟ್ಟೈ, ಕಟಪಾಡಿ, ರೇಣಿಗುಂಟಾ, ಗುಡೂರು, ನೆಲ್ಲೂರು, ಓಂಗೋಲ್, ವಿಜಯವಾಡ, ಖಮ್ಮಂ, ವಾರಂಗಲ್, ರಾಮಗುಂಡಂ, ಬಲ್ಹರ್ಷಾ, ನಾಗ್ಪುರ, ಇಟಾರ್ಸಿ, ಪಿಪಾರಿಯಾ, ಜಬಲ್‌ಪುರ, ಕಟ್ನಿ, ಸತ್ನಾ, ಪ್ರಯಾಗ್‌ರಾಜ್‌ ಛೋಕಿ, ಮಿರ್ಜಾಪುರ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್, ಬಕ್ಸಾರ್ ಮತ್ತು ಅರಾ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ಈ ರೈಲು 2 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಸೇರಿದಂತೆ 18 ಕೋಚ್‌ಗಳನ್ನು ಒಳಗೊಂಡಿರುತ್ತದೆ.

ಪ್ರಯಾಣಿಕರು www.enquiry.indianrail.gov.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಥವಾ NTES ಅಪ್ಲಿಕೇಶನ್ ಬಳಸಿ ಅಥವಾ 139 ಗೆ ಡಯಲ್ ಮಾಡುವ ಮೂಲಕ ರೈಲುಗಳ ಆಗಮನ/ನಿರ್ಗಮನ ಸಮಯ, ಇತರ ವಿವರಗಳನ್ನು ಪರಿಶೀಲಿಸಬಹುದು ಎಂದು ನೈಋತ್ಯ ರೈಲ್ವೆಯು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+