ರಸ್ತೆಗಿಳಿದ ಮೈಲೇಜ್ ಮಿತ್ರ ಹೋಂಡಾ ಬಿಆರ್‌ವಿ

Subscribe to Oneindia Kannada

ಹುಬ್ಬಳ್ಳಿ, ಮೇ 10: ಸ್ಥಳೀಯ ಲೇಕ್ ವ್ಯೂ ಹೋಂಡಾ ಶೋರೂಮ್ ನಲ್ಲಿ ನೂತನ ಕಾರು ಹೋಂಡಾ ಬಿಆರ್-ವಿ ಯನ್ನು ಸಂಸದ ಪ್ರಹ್ಲಾದ ಜೋಶಿ ಬಿಡುಗಡೆ ಮಾಡಿದರು.

ಎಸ್ ಯುವಿ ಶೈಲಿಯ ಕಾರು ಇದಾಗಿದೆ ಎಂದು ಲೇಕ್ ವ್ಯೂ ಹೋಂಡಾ ಶೋರೂಮ್ ವ್ಯವಸ್ಥಾಪಕ ನಿರ್ದೇಶಕ ಸುಹಾಸ ಜವಳಿ ಹೇಳಿದರು. ರಾಜ್ಯದಲ್ಲಿ ಮೊದಲು ಹುಬ್ಬಳ್ಳಿಯಲ್ಲಿ ಈ ಕಾರು ಬಿಡುಗಡೆ ಮಾಡಲಾಗಿದ್ದು, ಸದ್ಯಕ್ಕೆ 30 ಕಾರುಗಳಿಗೆ ಬೇಡಿಕೆ ಬಂದಿದೆ ಎಂದು ತಿಳಿಸಿದರು.[ಕಡಿಮೆ ದರದ ಟಾಟಾ ಟಿಯಾಗೋದ ವಿಶೇಷತೆಗಳೇನು?]

car

ಈ ಕಾರಿನಲ್ಲಿ ಏಳು ಜನ ಕುಳಿತುಕೊಳ್ಳಬಹುದಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್ ಮಾದರಿಯಲ್ಲಿ ತಲಾ 5 ಕೆಟಗೆರಿಯಲ್ಲಿ ಲಭ್ಯವಿದೆ. ಪೆಟ್ರೋಲ್ ಕಾರಿನ ಎಕ್ಸ್ ಶೋರೂಮ್ ಬೆಲೆ 8,86,100 ರೂ.ನಿಂದ ಆರಂಭವಾಗಿ 12,23,300 ರೂ.ವರೆಗಿದೆ. ಡೀಸೇಲ್ ಕಾರಿನ ಎಕ್ಸ್ ಶೋರೂಮ್ ಬೆಲೆ 9,99,900 ರೂ.ನಿಂದ ಆರಂಭವಾಗಿ 13,17,000 ರೂ.ಗಳ ವರೆಗಿದೆ ಎಂದರು.

ಪೆಟ್ರೋಲ್ ಕಾರು ಲೀಟರ್ ಗೆ 18 ಕಿ.ಮೀ ಮತ್ತು ಡೀಸೇಲ್ ಪ್ರತಿ ಲೀಟರ್ ಗೆ 21 ಕಿ.ಮೀ. ಮೈಲೇಜ್ ನೀಡಲಿದೆ. ಹೋಂಡಾ ಸಂಸ್ಥೆಯು ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡುತ್ತದೆ. ಹೀಗಾಗಿ ಬೇಸಿಕ್ ಮಾದರಿಗಳಿಂದಲೇ ಎಲ್ಲ ಬಿಆರ್-ವಿ ಕಾರುಗಳಲ್ಲಿ ಏರಬ್ಯಾಗ್ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.[ನೋಂದಣಿ ಸಂಖ್ಯೆ ಇದ್ರೆ ಸಾಕು, ಒಂದೆ ಕ್ಲಿಕ್‌ನಲ್ಲಿ ಎಲ್ಲ ಮಾಹಿತಿ]

30 ರಿಂದ 40 ವರ್ಷದ ವಯೋಮಿತಿ ಆಧಾರವಾಗಿ ಇಟ್ಟುಕೊಂಡು ಕಾರನ್ನು ಬಿಡುಗಡೆ ಮಾಡಲಾಗಿದೆ. ಒಂದು ಕುಟುಂಬದ ಸದಸ್ಯರು ಸುಖವಾಗಿ ದೂರದೂರಿಗೆ ಪ್ರಯಾಣಿಸಲು ಈ ಕಾರು ಅತ್ಯಂತ ಸೂಕ್ತ ಆಯ್ಕೆಯಾಗಿದೆ. ಸೀಟ್ ಗಳನ್ನು ಸ್ಲೈಡ್ ಮಾಡಬಹುದಾಗಿದ್ದರಿಂದ ಲಗೇಜ್ ಕೂಡ ಹೆಚ್ಚಿನ ಪ್ರಮಾಣದಲ್ಲಿ ಒಯ್ಯಬಹುದು.

ಈ ಕಾರಿನ ಇನ್ನೊಂದು ವಿಶೇಷತೆಯೆಂದರೆ 210 ಮಿ.ಮೀ. ಗ್ರೌಂಡ್ರ ಕ್ಲಿಯರೆನ್ಸ್ ಇದೆ. ಇದು ತಗ್ಗು ದಿಣ್ಣೆಗಳ ರಸ್ತೆಗಳಲ್ಲೂ ಸುಗಮವಾಗಿ ಸಂಚರಿಸಲು ಅನುಕೂಲವಾಗುತ್ತದೆ. 16 ಇಂಚಿನ ಅಲ್ಲಾಯ್ ವ್ಹೀಲ್ ಗಳನ್ನು ಕಾರು ಹೊಂದಿದ್ದು ಎಂಜಿನ್ ಹಾಗೂ ಗೀಯರ್ ಬಾಕ್ಸ್ ಗಳಿಗೆ ಮೂರು ವರ್ಷದ ವಾರಂಟಿ ನೀಡಲಾಗುತ್ತಿದೆ ಎಂದರು.[ಹೋಂಡಾ ಬಿಆರ್ ವಿ ವಿಶೇಷತೆಗಳೇನು?]

ಸುಜಯ ಜವಳಿ, ವಿನಯ, ಜವಳಿ, ಎನ್.ಪಿ.ಜವಳಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರಮೇಶ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Hubballi: The new Honda BR-V launched at Hubballi by MP Pralhad Joshi. The Honda BR-V looks like a shrunken down version of Honda's premium suv the CR-V. The front features a a large chrome strip connecting the angular headlamps with the Honda badge front and centre.
Please Wait while comments are loading...