ಧಾರವಾಡ ಕಟ್ಟಡ ಕುಸಿತ: ಸಾವಿನ ಸಂಖ್ಯೆ 5ಕ್ಕೆ ಏರಿಕೆ

Recommended Video

      ಧಾರವಾಡ ಕಟ್ಟಡ ಕುಸಿತ | Oneindia Kannada

      ಧಾರವಾಡ, ಮಾರ್ಚ್ 20: ಧಾರವಾಡದಲ್ಲಿ ಏಳು ಅಂತಸ್ತಿನ ಕಟ್ಟಡ ಕುಸಿತದಲ್ಲಿ ಇದುವರೆಗೆ ಐವರು ಮೃತಪಟ್ಟಿದ್ದು, 35ಕ್ಕೂ ಹೆಚ್ಚಿನ ಮಂದಿಯನ್ನು ರಕ್ಷಿಸಲಾಗಿದೆ.ಹಲವರನ್ನು ರಕ್ಷಿಸಲಾಗಿದೆ.

      ಧಾರವಾಡದ ಹೊಸ ಬಸ್ ನಿಲ್ದಾಣದ ಸಮೀಪ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಕುಸಿದುಬಿದ್ದಿದೆ. ಅವಶೇಷಗಳಡಿ 70ಕ್ಕೂ ಅಧಿಕ ಜನರು ಸಿಲುಕಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ.

      Dharwad building collapse 3 dies

      ಕಟ್ಟಡದ ಎರಡು ಮಹಡಿ ಪೂರ್ಣಗೊಂಡಿತ್ತು. ಅದರಲ್ಲಿ ಸುಮಾರು 60 ರಿಂದ 70 ಅಂಗಡಿಗಳನ್ನು ಬಾಡಿಗೆಗೆ ನೀಡಲಾಗಿತ್ತು. ಪಿಲ್ಲರ್ ಮತ್ತು ಗೋಡೆಗಳು ಸಂಪೂರ್ಣವಾಗಿ ಕುಸಿದಿದ್ದು, ಕಟ್ಟಡಗಳ ಅವಶೇಷಗಳಡಿ ಸಿಲುಕಿದವರನ್ನು ರಕ್ಷಿಸುವ ಕಾರ್ಯಾಚರಣೆ ನಿನ್ನೆ ಇಂದ ಇಂದಿನವರೆಗೂ ಮುಂದುವರೆದಿದೆ.

      ಚಿತ್ರಗಳು: ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ, ಭಾರೀ ಅನಾಹುತ

      5 ಮಹಡಿಯ ಕಟ್ಟಡದ ಎರಡು ಮಹಡಿಯ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಅವುಗಳನ್ನು ಬಾಡಿಗೆಗೆ ನೀಡಲಾಗಿತ್ತು. ಹೋಟೆಲ್, ಎಲೆಕ್ಟ್ರಿಕಲ್ ಶಾಪ್, ಕಿರಾಣಿ ಅಂಗಡಿ, ಕಂಪ್ಯೂಟರ್ ತರಬೇತಿ ಕೇಂದ್ರ ಸೇರಿದಂತೆ ಹಲವು ಮಳಿಗೆಗಳು ಇದ್ದವು.

      ಅಗ್ನಿ ಶಾಮಕ ದಳ, ಬಿಎಸ್‌ಎಫ್ ಯೋಧರು, ಸ್ಥಳೀಯ ಪೊಲೀಸರು, ಜನರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. 6 ಜೆಸಿಬಿ, ಮೂರು ಕ್ರೇನ್‌ಗಳ ಸಹಾಯದಿಂದ ಅವಶೇಷಗಳನ್ನು ತೆರವು ಮಾಡಲಾಗುತ್ತಿದೆ. ಎನ್‌ಡಿಆರ್‌ಎಫ್ ತಂಡವೂ ಪುಣೆಯಿಂದ ಧಾರವಾಡಕ್ಕೆ ರಕ್ಷಣಾ ಕಾರ್ಯಾಚರಣೆಗಾಗಿ ಆಗಮಿಸಿದೆ..

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+