ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟಿಕೆಟ್ ಘೋಷಣೆಗೂ ಮೊದಲೇ ಪ್ರಚಾರ ಆರಂಭಿಸಿದ ಬಸವರಾಜ ಹೊರಟ್ಟಿ

By ಧಾರವಾಡ ಪ್ರತಿನಿಧಿ
|
Google Oneindia Kannada News

ಧಾರವಾಡ, ಮೇ 23: ಜೆಡಿಎಸ್ ತೊರೆದು ಬಿಜೆಪಿ ಸೇರಿರುವ ಬಸವರಾಜ ಹೊರಟ್ಟಿ ಅವರಿಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಬಹುತೇಕ ಟಿಕೆಟ್ ಫೈನಲ್ ಆಗಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರಚಾರಕ್ಕೆ ಸಿದ್ಧತೆ ಆರಂಭಿಸಿದ್ದಾರೆ.

ಬಿಜೆಪಿ ಟಿಕಟ್ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ವಿಮಾನಗಳನ್ನು ಹತ್ತಿ ಇಳಿದಿದ್ದಾರೆ. ಈ ಮಧ್ಯೆ ಹೊರಟ್ಟಿಯವರು ತಾವು ಅಭ್ಯರ್ಥಿ ಎಂಬ ನಂಬಿಕೆಯಿಂದ ಪ್ರಚಾರ ಆರಂಭಿಸಿದ್ದಾರೆ. " ಬಿಜೆಪಿ ಎಂಎಲ್‌ಸಿ ಚುನಾವಣೆ ಟಿಕೆಟ್ ನನಗೆ ಅಂತಾ ತಿಳಿದುಕೊಂಡಿದ್ದೇನೆ . ಟಿಕೆಟ್ ಆಗದೇ ಪ್ರಚಾರ ಕಚೇರಿಗೆ ಬರ್ತಿವಾ ? ಬಿಜೆಪಿ ಸದಸ್ಯತ್ವ ಮಾಡಿಕೊಂಡಿದ್ದಾರೆ," ಎಂದು ಬಸವರಾಜ ಹೊರಟ್ಟಿ ಇದನ್ನು ಪ್ರಶ್ನಿಸಿದ ಮಾಧ್ಯಮದವರಿಗೇ ಪ್ರಶ್ನಿಸಿದ್ದಾರೆ.

Breaking: ಬಸವರಾಜ ಹೊರಟ್ಟಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆBreaking: ಬಸವರಾಜ ಹೊರಟ್ಟಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆ

ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ತಮ್ಮ ಚುನಾವಣೆ ಕಛೇರಿ ಉದ್ಘಾಟಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, "ಬಿಜೆಪಿಯ ಅಭ್ಯರ್ಥಿ ನೀವೇ ಅಂತಾನೂ ನನಗೆ ಹೇಳಿದ್ದಾರೆ . ಚುನಾವಣೆ ಫೈಟ್ ಇಲ್ಲ. 2010 ರಲ್ಲಿಯೂ ಹೀಗೆಯೇ ಇತ್ತು . ಚುನಾವಣೆ ಹತ್ತಿರ ಬಂದಾಗ ನಾನು ಟೆನ್ಷನ್‌ನಲ್ಲಿ ಇರುತ್ತೇನೆ ಅಷ್ಟೇ. ಬೇರೆ ಇನ್ನೇನಿಲ್ಲ. ಕಳೆದ ಸಲ 3800ರಿಂದ ಲೀಡ್ ಆಗಿದ್ದೇನೆ. ಈ ಸಲವೂ ಮಾಮೂಲಿ ಇದೆ. ಚುನಾವಣೆ ಬಗ್ಗೆ ನಂಗೆ ಯಾವುದೆ ಭಯ ಇಲ್ಲ , ಶಿಕ್ಷಕರೆಲ್ಲ ನನ್ನ ಪರವಾಗಿದ್ದಾರೆ . ಸುಮಾರು 10 ರಿಂದ 15 ಪ್ರತಿಶತ ಅಷ್ಟೆ ವಿರೋಧ ಇದೆ . ಅದು ಮೊದಲಿನಂದಲೂ ಇದ್ದೇ ಇದೆ ಅದಕ್ಕೆ ಬೇರೆ ಬೇರೆ ಕಾರಣಗಳಿವೆ," ಎಂದರು.

ಮೋಹನ ಲಿಂಬಿಕಾಯಿ ಬಗ್ಗೆ ನನಗೆ ಗೊತ್ತಿಲ್ಲ

ಮೋಹನ ಲಿಂಬಿಕಾಯಿ ಬಗ್ಗೆ ನನಗೆ ಗೊತ್ತಿಲ್ಲ

ಪಶ್ಚಿಮ ಕ್ಷೇತ್ರದಲ್ಲಿ ಮೋಹನ್ ಲಿಂಬಿಕಾಯಿ ಸಹ ಅಭ್ಯರ್ಥಿ ಎಂದು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, "ಅದು ನನಗೆ ಗೊತ್ತಿಲ್ಲ . ನನ್ನ ವಿಚಾರದ ಬಗ್ಗೆ ಮಾತ್ರ ನಾನು ಹೇಳಬಲ್ಲೆ. ಬೇರೆಯವರದ್ದು ಹೇಗೆ ಹೇಳಲಿ? ರಾಜ್ಯಮಟ್ಟದ ನಾಯಕರು ಬಿಜೆಪಿ ಅಭ್ಯರ್ಥಿ ಅಂತಾ ಹೇಳಿ ಪಕ್ಷಕ್ಕೆ ತಂದಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಯಾಗುವೆನೆಂಬ ನಂಬಿಕೆ ನನಗೆ ಇದೆ ಎಂದರು.

ನಾನು ಎಲ್ಲಿದ್ದರೂ ಕಂಫರ್ಟ್ ಇರುತ್ತೇನೆ

ನಾನು ಎಲ್ಲಿದ್ದರೂ ಕಂಫರ್ಟ್ ಇರುತ್ತೇನೆ

ಹೊರಟ್ಟಿವರು ಅಧಿಕಾರಕ್ಕಾಗಿ ಬಿಜೆಪಿ ಸೇರಿದ್ದಾರೆಂಬ ಆರೋಪ ಇದೆಯಲ್ಲಾ ಎಂಬ ವಿಚಾರಕ್ಕೆ, "ಹೆಂಗೆ ನಡೆದರೂ ಒಂದು ಅಂತಾರೆ . ಅಂತಹ ಪ್ರಸಂಗ ಬರುತ್ತವೆ . ಕೆಲವೊಮ್ಮೆ ಡಿಸೆಂಬರ್‌ನಲ್ಲಿ ಮಳೆ ಬರುತ್ತದೆ. ಯಾಕೆ ಆಗುತ್ತೆ ಅಂದ್ರೆ ಏನು ಹೇಳಬೇಕು? ನಾನು ಎಲ್ಲಿ ಇದ್ದರೂ ಕಂಫರ್ಟ್ ಆಗಿಯೇ ಇರುತ್ತೇನೆ . ಈಗಷ್ಟೇ ಪಕ್ಷದೊಳಗೆ ಸೇರುತ್ತಿದ್ದೇನೆ. ಮೇ 23ಕ್ಕೆ ಒಂದು ನಾಮಪತ್ರ ಸಲ್ಲಿಸುತ್ತೇವೆ . ಮೇ 26 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರುತ್ತಾರೆ. ಹೀಗಾಗಿ ಅಂದು ಇನ್ನೊಮ್ಮೆ ನಮಪತ್ರ ಸಲ್ಲಿಸುತ್ತೇವೆ ಎಂದು ಹೊರಟ್ಟಿ ಹೇಳಿದರು.

ಹೊರಟ್ಟಿಗೆ ಟಿಕೆಟ್ ಎಂದು ಶಾಸಕ ಬೆಲ್ಲದ

ಹೊರಟ್ಟಿಗೆ ಟಿಕೆಟ್ ಎಂದು ಶಾಸಕ ಬೆಲ್ಲದ

ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ವಿಚಾರವಾಗಿ ನಮ್ಮ ಪಾರ್ಟಿ ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದೆ. ಟಿಕೆಟ್ ಹೊರಟ್ಟಿ ಅವರಿಗೆ ಫೈನಲ್ ಆಗುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದ್ದಾರೆ .

ಧಾರವಾಡದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಸವರಾಜ ಹೊರಟ್ಟಿ ಅವರಿಗೆ ಟಿಕೆಟ್ ಫೈನಲ್ ಆಗುತ್ತದೆ . ಮೋಹನ್ ಲಿಂಬಿಕಾಯಿ ಮೊದಲಿನಿಂದಲೂ ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿ ಟಿಕೆಟ್‌ಗಾಗಿ ಸಾಕಷ್ಟು ಪ್ರಯತ್ನ ನಡೆಸಿದ್ದಾರೆ . ಆದರೆ ಹೊರಟ್ಟಿ ಅವರಿಗೆ ಟಿಕೆಟ್ ಫೈನಲ್ ಆಗುತ್ತದೆ ಎಂದರು.

ಚುನಾವಣೆ ಕೆಲಸಕ್ಕೆ ಕಚೇರಿ ಆರಂಭ

ಚುನಾವಣೆ ಕೆಲಸಕ್ಕೆ ಕಚೇರಿ ಆರಂಭ

ಟಿಕೆಟ್ ಫೈನಲ್ ಆಗೋದಕ್ಕಿಂತ ಮುಂಚೆ ಬಿಜೆಪಿ ಕಚೇರಿ ಉದ್ಘಾಟನೆ ವಿಚಾರವಾಗಿ ಚುನಾವಣೆ ಕೆಲಸ ಬಹಳ ಇರುತ್ತದೆ. ಹೀಗಾಗಿ ಕಚೇರಿ ಆರಂಭಿಸಿದ್ದಾರೆ. ನಿನ್ನೆ ಪಕ್ಷ ವರಿಷ್ಠರನ್ನು ಭೇಟಿಯಾಗಿದ್ದಾರೆ . ಈ ಹಿನ್ನೆಲೆಯಲ್ಲಿ ತಯಾರಿ ನಡೆಸಿದ್ದಾರೆ. ಟಿಕೆಟ್ ಸಿಗುವ ಭರವಸೆಯ ಅವರಿಗಿದೆ . ಹೀಗಾಗಿ ಸಿದ್ಧತೆ ನಡೆಸಿದ್ದಾರೆ . ಇನ್ನು ಲಿಂಬಿಕಾಯಿ ಪಕ್ಷೇತರರಾಗಿ ಕಣಕ್ಕಿಳಿಯೋ ವಿಚಾರವಾಗಿ , ಅದನ್ನು ನೀವು ಅವರಿಗೆ ಕೇಳಬೇಕು ಅದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಶಾಸಕ ಬೆಲ್ಲದ ಹೇಳಿದರು.

Recommended Video

Rohit Sharma ಹೀಗೆ ಯಾವ IPLನಲ್ಲೂ ಆಡಿಲ್ಲ | #Cricket | Oneindia Kannada

English summary
Basavaraja Horatti who left the JDS and Recently joined BJP. Karnataka West Teachers Constituency BJP Ticket almost final to Basavaraj Horatti. in this backdrop, Horatti started campaign works.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X