SSLC Examination 2025: ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ
SSLC Examination 2025: ಕರ್ನಾಟಕದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಮಾರ್ಚ್ 21ರಿಂದ ಏಪ್ರಿಲ್ 4, 2025ರ ವರೆಗೆ ನಡೆದಿದ್ದವು. ಮೇ 2ರಂದು ಫಲಿತಾಂಶ ಬಿಡುಗಡೆ ಮಾಡಲಾಗಿತ್ತು. ಈ ವೇಳೆ ಅನುತ್ತೀರ್ಣರಾದವರಿಗೆ ಇದೀಗ ಮಹತ್ವದ ಮಾಹಿತಿಯೊಂದನ್ನು ನೀಡಲಾಗಿದೆ. ಸಂಪೂರ್ಣ ವಿವರ ಇಲ್ಲಿದೆ ಗಮನಿಸಿ.
2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ-2 ಗೆ ನೋಂದಣಿ ಮಾಡಿಕೊಳ್ಳಲು ಇಂದೇ ಅಂದರೆ ಮೇ 10 ಕೊನೆಯ ದಿನವಾಗಿದೆ. ಆದ್ದರಿಂದ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಿಲಾಗಿದೆ.

ಮೇ 26, 2025ರಿಂದ ಜೂನ್ 2ರ ವರೆಗೆ ಪರೀಕ್ಷೆ-2 ನ್ನು ನಡೆಸಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಪರೀಕ್ಷೆ-1ರಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೂಡಲೇ ಸಂಬಂಧಿಸಿದ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ನೊಂದಾಣಿ ಮಾಡಿಕೊಳ್ಳುವಂತೆ ದಾವಣಗೆರೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು 2ರಂದು ಫಲಿತಾಂಶ ಬಿಡುಗಡೆ ಪತ್ರಿಕಾಗೋಷ್ಠಿ ಮೂಲಕ ಪ್ರಕಟ ಮಾಡಿದರು. ವಿದ್ಯಾರ್ಥಿಗಳು ಫಲಿತಾಂಶಗಳನ್ನು kseab.karnataka.gov.in ಅಥವಾ karresults.nic.inನಲ್ಲಿ ಪರಿಶೀಲನೆ ಮಾಡಲು ಸೂಚಿಸಲಾಗಿತ್ತು.
ಜಿಲ್ಲಾವರು ಈ ಬಾರಿ ಎಸ್‌ಎಲ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ, ಉಡುಪಿ ದ್ವಿತೀಯ ಸ್ಥಾನ ಅಲಂಕರಿಸಿದರೆ, ಕಲಬುರಗಿ ಕೊನೇ ಸ್ಥಾನದಲ್ಲಿ ಶೇಕಡಾ 91.12ರಷ್ಟು ಫಲಿತಾಂಶ ಪಡೆದು ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆಕೊಂಡಿದೆ. ಉಡುಪಿ ಜಿಲ್ಲೆ 89.96% ಪಡೆಯುವ ಮೂಲಕ ದ್ವಿತೀಯ ಸ್ಥಾನದಲ್ಲಿದೆ. ಕಲಬುರಗಿ ಜಿಲ್ಲೆ ಶೇಕಡಾ 66.14 ಫಲಿತಾಂಶ ಪಡೆದುಕೊಂಡು ಕೊನೇ ಸ್ಥಾನ ಅಲಂಕರಿಸಿದೆ.
ಉತ್ತೀರ್ಣ ಫಲಿತಾಂಶ; ಟಾಪ್ 10 ಜಿಲ್ಲೆಗಳು
* ದಕ್ಷಿಣ ಕನ್ನಡ - ಶೇಕಡ 91.12
* ಉಡುಪಿ - ಶೇಕಡ 89.96
* ಉತ್ತರ ಕನ್ನಡ - ಶೇಕಡ 83.19
* ಶಿವಮೊಗ್ಗ - ಶೇಕಡ 82.29
* ಕೊಡಗು - ಶೇಕಡ 82.21
* ಹಾಸನ - ಶೇಕಡ 82.12
* ಶಿರಸಿ - ಶೇಕಡ 80.21
* ಚಿಕ್ಕಮಗಳೂರು - ಶೇಕಡ 77.9
* ಬೆಂಗಳೂರು ಗ್ರಾಮಾಂತರ - ಶೇಕಡ 74.02
* ಬೆಂಗಳೂರು ದಕ್ಷಿಣ - ಶೇಕಡ 72.3












Click it and Unblock the Notifications