ದಾವಣಗೆರೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹೈಕಮಾಂಡ್ ಸಿಎಂ ಯಾರೆಂದು ಆಯ್ಕೆ ಮಾಡುತ್ತೆ: ಹೆಚ್‌ಸಿ ಮಹದೇವಪ್ಪ

By ದಾವಣಗೆರೆ ಪ್ರತಿನಿಧಿ
|
Google Oneindia Kannada News

ದಾವಣಗೆರೆ, ಜುಲೈ 28: ಆಗಸ್ಟ್ 3ರಂದು ನಡೆಯುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮದಿನದ ಅಮೃತ ಮಹೋತ್ಸವ ಆಚರಣೆಗೆ ಸಿದ್ಧತೆ ಬರದಿಂದ ಸಾಗುತ್ತಿದೆ. ದಾವಣಗೆರೆ- ಹರಿಹರ ರಾಷ್ಟ್ರೀಯ ಹೆದ್ದಾರಿ ಮಾರ್ಗ ಮಧ್ಯೆಬರುವ ಶಾಮನೂರು ಶಿವಶಂಕರಪ್ಪರ ಒಡೆತನದ ಅರಮನೆ ಮೈದಾನದಲ್ಲಿ ವೇದಿಕೆ ಸೇರಿದಂತೆ ಸಿದ್ಧತಾ ಕಾರ್ಯಗಳು ವೇಗವಾಗಿ ನಡೆಯುತ್ತಿವೆ.

ಮಾಜಿ ಸಚಿವರಾದ ಹೆಚ್. ಸಿ. ಮಹಾದೇವಪ್ಪ, ಶಾಸಕ ಭೈರತಿ ಸುರೇಶ್, ಹೆಚ್. ಎಂ. ರೇವಣ್ಣ ಹಾಗೂ ಬಿಎಲ್ ಶಂಕರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ವೇದಿಕೆ‌‌ ನಿರ್ಮಾಣ ಕಾರ್ಯ ಪರಿಶೀಲಿಸಿದರು. ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 50 ಎಕರೆ ಜಾಗದಲ್ಲಿ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ವೇದಿಕೆಯ ಶೇ.50 ರಷ್ಟು ನಿರ್ಮಾಣ ಪೂರ್ಣ ಆಗಿದ್ದು, ಸ್ಥಳೀಯರಿಂದ ಕಾಂಗ್ರೆಸ್ ಮುಖಂಡರು ಮಾಹಿತಿ ಪಡೆದುಕೊಂಡರು.

ಅಧಿಕಾರ ಶಾಶ್ವತವಲ್ಲ, ಅವಶ್ಯಕತೆ ಬಿದ್ದರೆ ರಾಜೀನಾಮೆಗೂ ಸಿದ್ಧ: ಶಾಸಕ ಪರಣ್ಣ ಮುನವಳ್ಳಿಅಧಿಕಾರ ಶಾಶ್ವತವಲ್ಲ, ಅವಶ್ಯಕತೆ ಬಿದ್ದರೆ ರಾಜೀನಾಮೆಗೂ ಸಿದ್ಧ: ಶಾಸಕ ಪರಣ್ಣ ಮುನವಳ್ಳಿ

ಮಹೋತ್ಸವಲ್ಲಿ 8 ರಿಂದ 10 ಲಕ್ಷ ಜನ ಸೇರುವ ನಿರೀಕ್ಷೆ ಇದ್ದು, ಪಾರ್ಕಿಂಗ್ ವ್ಯವಸ್ಥೆ, ವಾಹನಗಳು ಹಾಗೂ ಜನರ ಸಂಚಾರ, ಮುಖ್ಯ ವೇದಿಕೆ, ಆಸನಗಳು ಸೇರಿದಂತೆ ಪ್ರಮುಖ ಸಿದ್ಧತೆಗಳ ಪರಿಶೀಲನೆ ಕೂಡ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಜೊತೆ ಭದ್ರತೆ ಕುರಿತು ಚರ್ಚೆ ನಡೆಸಿದರಲ್ಲದೇ, ಸೂಕ್ತ ಬಂದೋಬಸ್ತ್ ಒದಗಿಸುವಂತೆ ಮನವಿ ಮಾಡಿದರು‌. ಎಸ್ಪಿ ಅವರು ಕಾರ್ಯಕ್ರಮದ ಬ್ಲೂ ಪ್ರಿಂಟ್ ಪರಿಶೀಲನೆ ನಡೆಸಿದರು.

ಅಮೃತ ಮಹೋತ್ಸವದ ಲೋಗೋ ಅನಾವಣ

ಅಮೃತ ಮಹೋತ್ಸವದ ಲೋಗೋ ಅನಾವಣ

ಸಿದ್ದರಾಮಯ್ಯ ಅಮೃತ ಮಹೋತ್ಸವದ ಲೋಗೋ ಅನಾವರಣಗೊಳಿಸಲಾಯಿತು‌. ಹೆಚ್. ಸಿ. ಮಹದೇವಪ್ಪ, ಬಿ ಎಲ್ ಶಂಕರ್, ಎಚ್ ಎಂ ರೇವಣ್ಣ ಅವರು ಕಾರ್ಯಕ್ರಮ ನಡೆಯುವ ಸ್ಥಳದಲ್ಲೇ ಲೋಗೋ ಅನಾವರಣ ಮಾಡಿದರು. ಲೋಗೋದಲ್ಲಿ ಸಿದ್ದರಾಮಯ್ಯ ದೊಡ್ಡ ಪೋಟೋ, 2022 ಹಾಗೂ ಸಿದ್ದರಾಮಯ್ಯ ಹೆಸರು ಹೈಲೈಟ್ ಆಗಿದ್ದು, ಎಲ್ಲರ ಗಮನ ಸೆಳೆಯುವಂತಿದೆ.

'ಕ್ರಿಯೆಗೆ ಪ್ರತಿಕ್ರಿಯೆ' ಎಂದಿದ್ದ ಬಸವರಾಜ ಬೊಮ್ಮಾಯಿ, ಮಧ್ಯರಾತ್ರಿ ಮನಸಾಕ್ಷಿ ಬಗ್ಗೆ ಮರುಕ!'ಕ್ರಿಯೆಗೆ ಪ್ರತಿಕ್ರಿಯೆ' ಎಂದಿದ್ದ ಬಸವರಾಜ ಬೊಮ್ಮಾಯಿ, ಮಧ್ಯರಾತ್ರಿ ಮನಸಾಕ್ಷಿ ಬಗ್ಗೆ ಮರುಕ!

ಮಹಾನ್ ನಾಯಕನ ಜೀವನ ಚರಿತ್ರೆ ತಿಳಿಸುವ ಉದ್ದೇಶ

ಮಹಾನ್ ನಾಯಕನ ಜೀವನ ಚರಿತ್ರೆ ತಿಳಿಸುವ ಉದ್ದೇಶ

ಕೋಮುವಾದ ನಿರ್ನಾಮವಾಗಿ, ಒಳ್ಳೆಯ ಆಡಳಿತಕ್ಕಾಗಿ ಅಮೃತ ಮಹೋತ್ಸವ ಆಯೋಜಿಸಲಾಗಿದೆ. ಶ್ರೀರಾಮನ ಮಜ್ಜಿಗೆ ಮೇಲೆ ಇವರು ಜಿಎಸ್ ಟಿ ಹಾಕಿದ್ದಾರೆ. ಇವರು ಹೇಗೆ ಶ್ರೀರಾಮನ ಭಕ್ತರಾಗುತ್ತಾರೆ. ಇಂತಹ ಅಡಳಿತವನ್ನು ಕೊನೆಗೊಳಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಅಮೃತ ಮಹೋತ್ಸವ ವ್ಯಕ್ತಿ ಪೂಜೆ ಅಲ್ಲ. ಒಬ್ಬ ಮಹಾನ್ ನಾಯಕನ 40 ವರ್ಷ ಸಾರ್ವಜನಿಕ ಜೀವನದ ಬಗ್ಗೆ ಜನರಿಗೆ ತಿಳಿಸುವುದೇ ನಮ್ಮ ಉದ್ದೇಶ. ಇದು ಪಕ್ಷದ ಕಾರ್ಯಕ್ರಮ ಅಲ್ಲ. ಪಕ್ಷದಲ್ಲಿನ ಜನರು ಸೇರಿ ಮಾಡುತ್ತಿರುವ ಕಾರ್ಯಕ್ರಮ ಎಂದು ಪುನರುಚ್ಚರಿಸಿದರು‌.

ಬಲವಂತವಾಗಿ ಸಿದ್ದರಾಮಯ್ಯರನ್ನು ಒಪ್ಪಿಸಲಾಗಿದೆ

ಬಲವಂತವಾಗಿ ಸಿದ್ದರಾಮಯ್ಯರನ್ನು ಒಪ್ಪಿಸಲಾಗಿದೆ

ಕಾಂಗ್ರೆಸ್ ಪಕ್ಷದಲ್ಲಿ ಯಾವೊಬ್ಬ ನಾಯಕನ ಹುಟ್ಟುಹಬ್ಬ ನಡೆದಿಲ್ಲ, ಇದು ಕಾಂಗ್ರೆಸ್ ಪಕ್ಷದ ಚಿಹ್ನೆಯ ಕೆಳಗೆ ಮಾಡುತ್ತಿಲ್ಲ. ಸಂಘ ಸಂಸ್ಥೆಗಳು, ಸಿದ್ದರಾಮಯ್ಯ ಹಿತೈಸಿಗಳು, ಪಕ್ಷದ ಅನೇಕ ಮುಖಂಡರು ಸೇರಿ ಈ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಲ್ಲದೆ ಜಿಲ್ಲೆ ಜಿಲ್ಲೆಯ ಅಭಿಮಾನಿಗಳು ಬಂದು ಇಂತಹ ಸ್ಮರಣೆ ಅಗತ್ಯವಿದೆ ಎಂದು ಕೇಳಿಕೊಂಡರೂ ಒಪ್ಪಿರಲಿಲ್ಲ, ಆದರೆ ನಮ್ಮನ್ನು ಭೇಟಿ ಮಾಡಿ ಬಲವಂತಾಗಿ ಸಿದ್ದರಾಮಯ್ಯರನ್ನು ಒಪ್ಪಿಸಿದ್ದಾರೆ. ಸಂಘ ಸಂಸ್ಥೆಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದಕ್ಕೆ ಒತ್ತಾಯ ಭೇಡಿಕೆಗಳನ್ನು ಅವರ ಗಮನಕ್ಕೆ ತಂದು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಪಕ್ಷದ ಚಿಹ್ನೆಯ ಕೆಳಗೆ ಈ ಕಾರ್ಯಕ್ರಮ ನಡೆಯುತ್ತಿಲ್ಲ, ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಸಿಎಂ ಯಾರೆಂದು ಹೈಕಮಾಂಡ್ ತೀರ್ಮಾನಿಸಲಿದೆ

ಸಿಎಂ ಯಾರೆಂದು ಹೈಕಮಾಂಡ್ ತೀರ್ಮಾನಿಸಲಿದೆ

ಕಾಂಗ್ರೆಸ್‌ನಲ್ಲಿ 2 ಬಣವಾಗುತ್ತಿದೆಯೇ ಎಂಬ ಅನುಮಾನ ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಮಹದೇವಪ್ಪ, ಮುಖ್ಯಮಂತ್ರಿ ಸ್ಥಾನ ಖಾಲಿಯಿಲ್ಲ, ಎಲ್ಲಾ ಒಟ್ಟಾಗಿ ಹೋರಾಟ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದು ನಂತರ ಶಾಸಕರು ಅಭಿಪ್ರಾಯವನ್ನು ಕ್ರೂಢೀಕರಿಸಿ ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುತ್ತದೆ, ಹೈಕಮಾಂಡ್‌ ತೆಗೆದುಕೊಳ್ಳುವ ತೀರ್ಮಾನ ಅಂತಿಮವಾಗಲಿದೆ. ಯಾರೋ ಒಬ್ಬರ ಅನಿಸಿಕೆ, ಅಭಿಪ್ರಾಯ ಪಕ್ಷದ ಅಭಿಪ್ರಾಯವಿಲ್ಲ ಎಂದು ತಿಳಿಸಿದರು.

ರಾಹುಲ್ ಗಾಂಧಿ, ಸುರ್ಜಿವಾಲಾ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಸೇರಿದಂತೆ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಆದ್ದರಿಂದ ಬೇರೆ ಪಕ್ಷದ ಮುಖಂಡರನ್ನು ಆಹ್ವಾನ ಮಾಡಿಲ್ಲ ಎಂದು ಮಾಹಿತಿ ನೀಡಿದರು.‌

Recommended Video

ಪ್ರವೀಣ್ ಹತ್ಯೆ ಬಗ್ಗೆ ಮಾತಾಡುವಾಗ ತೇಜಸ್ವಿ ಸೂರ್ಯ ಆಡಿದ ಮಾತು ಈಗ ಫುಲ್ ವೈರಲ್ | OneIndia Kannada

English summary
CM Post not empty now, after 2023 Assembly election, All congress MLAs and Congress high command will decide on Chief Minister, said former minister HC Mahadevappa in Davanagere.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X