ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದಾವಣಗೆರೆಗೆ ಬಂದಿದ್ದೇಕೆ?

Posted By:
Subscribe to Oneindia Kannada

ದಾವಣಗೆರೆ, ಅಕ್ಟೋಬರ್ 11: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದಾವಣಗೆರೆಗೆ ಬಂದಿದ್ದರಂತೆ. ಸುದ್ದಿಯೇ ಇಲ್ಲದೆ ಅವರು ದಾವಣಗೆರೆಯ ಜಗಲೂರು ತಾಲೂಕಿಗೆ ಬಂದು ಹೋಗಿದ್ದೇಕೆ ಅಂದ್ರೆ, ಅವರ ಎನ್ ಜಿಒ ಕಾರ್ಯ ಹೇಗೆ ನಡೆಯುತ್ತಿದೆ ಎಂಬುದನ್ನು ಅವಲೋಕಿಸುವುದಕ್ಕೆ.

ಅಪ್ಪ ಪ್ರಕಾಶ್ ಪತ್ರ ನೋಡಿ ಕಣ್ಣೀರಿಟ್ಟ ದೀಪಿಕಾ: ಅಂಚೆ ದಿನದ ವಿಶೇಷ

ಖಿನ್ನತೆಯಿಂದ ಬಳಲುತ್ತಿರುವವರನ್ನು ಈ ಮಾನಸಿಕ ಅಸ್ವಸ್ಥತೆಯಿಂದ ಹೊರತರುವುದಕ್ಕಾಗಿ ಕಳೆದ ವರ್ಷ(2016) ದೀಪಿಕಾ ಪಡುಕೋಣೆಯವರು ಆರಂಭಿಸಿದ ಎನ್ ಜಿಒ 'ದಿ ಲಿವ್ ಲವ್ ಲಾಫ್ ಫೌಂಡೇಷನ್' (The Live Love Laugh Foundation). ವಿಶ್ವ ಮಾನಸಿಕ ಆರೋಗ್ಯ ದಿನ(ಅಕ್ಟೋಬರ್ 10)ದ ನಿಮಿತ್ತ ನಿನ್ನೆ(ಅ.10) ಜಗಳೂರಿನ ಹಳ್ಳಿಯೊಂದಕ್ಕೆ ಭೇಟಿ ನೀಡಿದ ದೀಪಿಕಾ ಪಡುಕೋಣೆ, ತಮ್ಮ ಎನ್ ಜಿಒನಿಂದ ಉಪಯೋಗ ಪಡೆಯುತ್ತಿರುವವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

Bollywood actress Deepika comes to Davanagere for her NGO works

ಇಂದಿನ ಯಾಂತ್ರಿಕ ಯುಗದಲ್ಲಿ ಒಂಟಿತನ ಅನುಭವಿಸುತ್ತಿರುವ ಹಲವು ಯುವಕರು ಖಿನ್ನತೆಯ ಸಮಸ್ಯೆಯಿಂದ ಬಳಲುತ್ತಿರುವುದು ಸ್ವತಃ ಮನಶ್ಶಾಸ್ತ್ರಜ್ಞರನ್ನೇ ಅಚ್ಚರಿಗೆ ಸಿಕ್ಕಿಸಿದೆ.

ಖಿನ್ನತೆಗೆ ಉತ್ತಮ ಭರವಸೆಯೇ ಮದ್ದು: ದೀಪಿಕಾ

ಖಿನ್ನತೆಯಿಂದ ಹೊರಬರುವುದು ಒಂದೇ ಸವಾಲೇ ಆಗಿರುವ ಹೊತ್ತಲ್ಲಿ, ಬಾಲಿವುಡ್ ನ ಮೋಹಕ ತಾರೆ, ಕನ್ನಡದವರೇ ಆದ ದೀಪಿಕಾ ಪಡುಕೋಣೆ ಖಿನ್ನತೆಯ ವಿರುದ್ಧ ಹೋರಾಡುವುದಕ್ಕಾಗಿ ದಿ ಲಿವ್ ಲವ್ ಲಾಫ್ ಫೌಂಡೇಷನ್ ಶುರುಮಾಡಿದ್ದರು.

ದೀಪಿಕಾಳಿಂದ ದಿ ಲಿವ್ ಲವ್ ಲಾಫ್ ಫೌಂಡೇಷನ್

ಬಾಲಿವುಡ್ ಚಿತ್ರರಂಗ ಮಾತ್ರವಲ್ಲದೆ ಸದ್ಯಕ್ಕೆ ಹಾಲಿವುಡ್ ಅಂಗಳದಲ್ಲೂ ಮಿಂಚುತ್ತಿರುವ ದೀಪಿಕಾ ಒಂದು ಕಾಲದಲ್ಲಿ ತಾವೇ ಖಿನ್ನತೆಯಿಂದ ಬಳಲುತ್ತಿದ್ದರು. ಆದರೆ ಮನೋಬಲದಿಂದಾಗಿ ಖಿನ್ನತೆಯಿಂದ ಹೊರಬಂದ ದೀಪಿಕಾ ಪಡುಕೋಣೆ, ಈಗ ಖಿನ್ನತೆಗೊಳಗಾಗಿರುವ ಎಷ್ಟೋ ಮಹಿಳೆಯರಿಗೆ ಸ್ವತಃ ಮಾರ್ಗದರ್ಶಿಯಾಗಿದ್ದಾರೆ. ಒಟ್ಟಿನಲ್ಲಿ ತಮ್ಮ ನೂರಾರು ಕೆಲಸಗಳ ನಡುವೆಯೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕನ್ನಡತಿ ದೀಪಿಕಾರ ನಡೆ ಶ್ಲಾಘನೀಯವೇ ಸರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bollywood star, also becoming famous in Hollywood, Bengaluru's Deepika Padukone travelled to Jagalur taluk near Davangere for her TLLLFoundation(The Live Love Laugh) NGO work to meet villagers yesterday(Oct 10th). The NGO is working for depressed people.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ