Arecanut price: ಕ್ವಿಂಟಾಲ್ ಅಡಿಕೆ ಧಾರಣೆ ಭಜರಿಗೆ ಏರಿಕೆ: ಜುಲೈ 31ರ ದರಪಟ್ಟಿ ಇಲ್ಲಿದೆ
Arecanut Price: ರಾಜ್ಯದಲ್ಲಿ ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲಿಯೂ ಏರಿಳಿತ ಆಗುತ್ತಿರುತ್ತಲಿರುತ್ತದೆ. ಅದರಲ್ಲೂ ಚನ್ನಗಿರಿ, ಹೊನ್ನಾಳಿ, ದಾವಣಗೆರೆ ತಾಲೂಕು ಸೇರಿದಂತೆ ಹಲವೆಡೆಯೂ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಹಾಗಾದ್ರೆ ಜಿಲ್ಲೆಯಲ್ಲಿ ಇಂದು (ಜುಲೈ 31) ಅಡಿಕೆ ಧಾರಣೆ ಎಷ್ಟಿದೆ ಹಾಗೂ ಮುಂದಿನ ದಿನಗಳಲ್ಲಿ ಎಷ್ಟು ಏರಿಕೆ ಆಗುಬ ನಿರೀಕ್ಷೆಯಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದಾವಣಗೆರೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ ಆಗಿದೆ. ಇದೀಗ ಜಿಲ್ಲೆಯಲ್ಲಿ ಅಡಿಕೆ ಧಾರಣೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ಇದೀಗ ಸದ್ಯ ಕ್ವಿಂಟಾಲ್ ಅಡಿಕೆ ಗರಿಷ್ಠ ದರ 57,500 ರೂಪಾಯಿ ಆಗಿದೆ. ಇಳಿಕೆಯತ್ತ ಸಾಗಿದ್ದ ದರ ಮತ್ತೆ ಇದೀಗ ಏರಿಕೆಯತ್ತ ಹೊರಟಿದ್ದು, ರೈತರ ಮುಖದಲ್ಲಿ ಮಂದಹಾಸ ಮನೆ ಮಾಡುವಂತೆ ಮಾಡಿದೆ.

ಚನ್ನಗಿರಿ ರಾಶಿ ಅಡಿಕೆ ಧಾರಣೆ (ಕ್ವಿಂಟಾಲ್‌ಗಳಲ್ಲಿ) ಗರಿಷ್ಠ ದರ 57,500 ರೂಪಾಯಿ, ಕನಿಷ್ಠ ದರ 53,679 ರೂಪಾಯಿ ಇದ್ದು, ಸರಾಸರಿ ಬೆಲೆ 56,368 ರೂಪಾಯಿ ಇದೆ. ಕಳೆದ ಕೆಲ ದಿನಗಳ ಹಿಂದೆ 55,000 ರೂಪಾಯಿಗಿಂತ ಕೆಳಗಿಳಿದಿತ್ತು. ಇದೀಹ ಮತ್ತೆ ಏರಿಕೆಯತ್ತ ಸಾಗಿದೆ.
ನ್ನಗಿರಿ, ಹೊನ್ನಾಳಿ, ದಾವಣಗೆರೆ ಭಾಗದಲ್ಲಿ ಇದೇ ವರ್ಷದ ಅಂದರೆ 2025ರ ಜನವರಿ ಕೊನೆಯಲ್ಲಿ 52,000 ರೂಪಾಯಿ ಒಳಗಿದ್ದ ಕ್ವಿಂಟಾಲ್ ಅಡಿಕೆ ದರ, ಫೆಬ್ರವರಿಯಲ್ಲಿ ಮತ್ತೆ 53,000 ರೂಪಾಯಿ ಗಡಿ ದಾಟಿತ್ತು. ಆಗಿನಿಂದಲೂ ಸತತ ಏರಿಕೆಯಾಗುತ್ತಾ ಬಂದಿತ್ತು. ಏಪ್ರಿಲ್ ಅಂತ್ಯದಲ್ಲಿ 60,000 ರೂಪಾಯಿ ಗಡಿ ದಾಟಿತ್ತು. ಇದೀಗ ಮತ್ತೆ 2025ರ ಆಗಸ್ಟ್ ಆರಂಭದಲ್ಲೇ ಮತ್ತೆ 65,000 ರೂಪಾಯಿ ಮುಟ್ಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಯಾಕಂದ್ರೆ ಕಳೆದ ತಿಂಗಳಿಗೆ ಹೋಲಿಕೆ ಮಾಡಿದ್ರೆ ಈ ತಿಂಗಳು ನಿಧಾನಗತಿಯಲ್ಲಿ ಏರಿಕೆಯತ್ತ ಸಾಗಿದೆ.
ಮೇ ಆರಂಭದಿಂದಲೂ ಜೂನ್ ಕೆಲವು ವಾರಗಳವರೆಗೆ ಇಳಿಕೆಯಾಗಿ ಮತ್ತೆ ಏರಿಕೆಯತ್ತ ಸಾಗಿತ್ತು. ಬಳಿಕ ಜೂನ್ ತಿಂಗಳ ಮಧ್ಯದಿಂದಲೂ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯಾಗುತ್ತಲೇ ಬಂದಿದೆ. ಆದರೆ, ಇದೀಗ ಮತ್ತೆ ಏರಿಕೆ ಆಗಿದೆ. 2023ರ ಜುಲೈ ತಿಂಗಳಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಕಳೆದ ವರ್ಷ 2024ರ ಮೇ ತಿಂಗಳಿನಲ್ಲಿ ಗರಿಷ್ಠ 55,000 ರೂಪಾಯಿಗೆ ಬಂದು ತಲುಪಿತ್ತು.
2025ರ ಜುಲೈ ಮೊದಲ ವಾರದ ಮಧ್ಯದವರೆಗೂ ಇಳಿಕೆಯತ್ತ ಸಾಗುತ್ತಾ ಬಂದಿತ್ತು. ಬಳಿಕ ಏರಿಕೆ ಆಗುತ್ತಲಿದ್ದು, ಮುಂದಿನ ದಿನಗಳಲ್ಲಿ ಕ್ವಿಂಟಾಲ್ ಅಡಿಕೆ ದರ ಮತ್ತೆ 65,000 ರೂಪಾಯಿ ದಾಟುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈಗಾಗಲೇ ಧಾರಣೆಯಲ್ಲಿ ಸುಧಾರಣೆ ಆಗಿದ್ದು, ಇದರಿಂದ ರೈತರು ಮುಖದಲ್ಲಿ ಸಂತಸ ಮನೆ ಮಾಡಿದೆ.
ಕಳೆದ ಬಾರಿ ಮುಂಗಾರು ಮಳೆ ಆರ್ಭಟದಿಂದ ಉತ್ತಮ ಫಸಲು ಏನೋ ಬಂದಿತ್ತು. ಇನ್ನೂ ಈ ಬಾರಿ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟಿದೆ. ಈ ಹಿನ್ನೆಲೆ ಉತ್ತಮ ಫಸಲಿನ ಜೊತೆ, ಮತ್ತೆ ಬೆಲೆ ಏರಿಕೆ ಆಗುವ ಭರವಸೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ. ಮತ್ತೊಂದೆಡೆ ಮಳೆಗಾಲದಲ್ಲಿ ಅಡಿಕೆಯನ್ನು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಎಂಬ ಆತಂಕವೂ ಸಹ ಬೆಳೆಗಾರರನ್ನ ಕಾಡತೊಡಗಿದೆ.












Click it and Unblock the Notifications