ದಾವಣಗೆರೆ: ಆಗಸ್ಟ್ 16ರಂದು ಕ್ವಿಂಟಾಲ್ ಧಾರಣೆ ಎಷ್ಟಿದೆ?-ತಾಲ್ಲೂಕುವಾರು ಅಂಕಿಅಂಶಗಳು ಹೀಗಿವೆ
Arecanut Price on August 16th: ಬೆಳ್ಳಿ, ಬಂಗಾರದಂತೆ ಅಡಿಕೆ ದರದಲ್ಲೂ ಏರಿಳಿತ ಆಗುತ್ತಲೇ ಇರುತ್ತದೆ. ಇನ್ನು ದಾವಣಗೆರೆ ಜಿಲ್ಲೆಯಲ್ಲಿ ಇಂದು (ಆಗಸ್ಟ್ 16) ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ತಾಲ್ಲೂಕುವಾರು ಸಂಪೂರ್ಣ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಿಕೆ ದರದಲ್ಲಿ ಭಾರೀ ಕುಸಿತವಾಗಿದೆ. ಇಂದು (ಆಗಸ್ಟ್ 16) ರಾಶಿ ಅಡಿಕೆ ಧಾರಣೆಯಲ್ಲಿ ಗರಿಷ್ಠ ದರ ಕ್ವಿಂಟಾಲ್‌ಗೆ ಹಳೆಯದು 49,180 ರೂಪಾಯಿಗೆ ಕುಸಿದಿದ್ದರೆ, ಕನಿಷ್ಠ ಬೆಲೆ 37,299 ರೂಪಾಯಿಗೆ ಇಳಿದಿದೆ. ಮತ್ತೊಂದೆಡೆ ಹೊಸ ಅಡಿಕೆ ದರ ಮತ್ತಷ್ಟು ಇಳಿಕೆಯಾಗಿದ್ದು, ಗರಿಷ್ಠ 43,025 ರೂಪಾಯಿ ಇದ್ದರೆ, ಕನಿಷ್ಠ 36,299 ರೂಪಾಯಿಗೆ ಇಳಿಕೆಯಾಗಿದೆ.

ಇನ್ನು ಇದೇ 2024ರ ಜೂನ್ ಮೊದಲ ವಾರ 54,000 ರೂಪಾಯಿ ಗಡಿ ದಾಟಿದ್ದ ದರ, ಜೂನ್ 20ರಿಂದ ಅದೇ ಆಡಿದ್ದೇ ಆಟ ಎಂಬಂತೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಬಂದಿತ್ತು. ಇನ್ನು ಈ ಬಾರಿ ಮುಂಗಾರು ಮಳೆ ಕೈಹಿಡಿದ ಹಿನ್ನೆಲೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿದೆ. ಇದತಿಂದ ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರು ಸಿಗುವ ಭರವಸೆ ಸಿಕ್ಕಂತಾಗಿದೆ.
2023ರ ಜುಲೈನಲ್ಲಿ ಗರಿಷ್ಠ ದರ 57,000 ರೂಪಾಯಿ ಮುಟ್ಟಿತ್ತು. ಇನ್ನು ಈ ವರ್ಷ ಅಂದರೆ 2024ರ ಮೇ ತಿಂಗಳಲ್ಲಿ ಗರಿಷ್ಠ 55,000 ರೂಪಾಯಿ ಮುಟ್ಟಿತ್ತು. ಇನ್ನು ಇದೀಗ ಮಾರುಕಟ್ಟೆಗೆ ಹೊಸ ಅಡಿಕೆ ಬಂದಿದ್ದು, ಇದರಿಂದ ಉತ್ತಮ ದರ ಸಿಗುವ ನಿರೀಕ್ಷೆಯಲ್ಲಿ ಅಡಿಕೆ ಬೆಳೆಗಾರರಿದ್ದಾರೆ.
2023ರಲ್ಲಿ ಮುಂಗಾರು ಕೈಕೊಟ್ಟ ಹಿನ್ನೆಲೆ ಜಿಲ್ಲೆಯ ಹಲವೆಡೆ ತೀವ್ರ ಬರದಿಂದ ಬೋರ್ ವೆಲ್‌ಗಳಲ್ಲಿ ನೀರೇ ಇಲ್ಲದಂತಾಗಿತ್ತು. ಇದರಿಂದ ಬೆಳೆಗಳೆಲ್ಲ ಸೂರ್ಯನ ಶಾಖಕ್ಕೆ ತುತ್ತಾಗಿ ರೈತರು ಬೇಸತ್ತು ಹೋಗಿದ್ದರು. ಇದೀಗ ಈ ಬಾರಿ 2024 ಜೂನ್ ಆರಂಭವಾಗುತ್ತಿದ್ದಂತೆ ಮುಂಗಾರು ಮಳೆ ಮುಂದುವರೆದ ಕಾರಣ ಬೋರ್ ವೆಲ್‌ಗಳೆಲ್ಲ ಚೇತರಿಕೆ ಕಂಡವು. ಮತ್ತೊಂದೆಡೆ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಹೆಚ್ಚಿದಂತಾಗಿದೆ.
2024ರ ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿದ್ದು, ಫೆಬ್ರವರಿಯಲ್ಲಿ ದಿಢೀರ್ 48,000 ರೂಪಾಯಿಗೆ ಇಳಿಕೆಯಾಗಿತ್ತು. ಮಾರ್ಚ್‌ನಲ್ಲಿ ತುಸು ಚೇತರಿಕೆ ಕಂಡು 50,000 ರೂಪಾಯಿ ತಲುಪಿತ್ತು. ಏಪ್ರಿಲ್‌ನಲ್ಲಿ ಗರಿಷ್ಠ 54,000 ರೂಪಾಯಿ ಗಡಿ ತಲುಪಿತ್ತು. ಮೇನಲ್ಲಿ ಗರಿಷ್ಠ 55,000 ರೂಪಾಯಿ ತಲುಪಿ, ಮತ್ತೆ ಕುಸಿತ ಕಂಡಿತ್ತು. ಜೂನ್ ಎರಡನೇ ವಾರದಿಂದ ಮತ್ತೆ ಕುಸಿತ ಕಂಡು, ಜುಲೈನಲ್ಲಿ 51,000 ರೂಪಾಯಿ ಇತ್ತು. ಇದೀಗ ಆಗಸ್ಟ್‌ನಲ್ಲಿ 43,000 ರೂಪಾಯಿಗೆ ಕುಸಿತ ಕಂಡಿದೆ.
ಅದರಲ್ಲೂ ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಆಗಸ್ಟ್ 16ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ದರ (ಹೊಸದು) 37,299 ರೂಪಾಯಿ, ಗರಿಷ್ಠ ಬೆಲೆ 49,180 ರೂಪಾಯಿ ಹಾಗೂ ಸರಾಸರಿ ಬೆಲೆ 45,519 ರೂಪಾಯಿಗೆ ಮಾರಾಟ ಆಗಿದೆ. ಹೊಸ ಅಡಿಕೆ ಗರಿಷ್ಠ 43,025 ರೂಪಾಯಿ, ಕನಿಷ್ಠ 36,299 ರೂಪಾಯಿ ಹಾಗೂ ಸರಾಸರಿ ಬೆಲೆ 41,074 ರೂಪಾಯಿ ಇದೆ.
ಒಟ್ಟಿನಲ್ಲಿ ಹವಾಮಾನ ಇಲಾಖೆ ಪ್ರಕಾರನ ಜಿಲ್ಲೆಯಲ್ಲಿ ಮಳೆ ಮುಂದುವರೆಯುವ ಮುನ್ಸೂಚನೆ ಇದ್ದು, ಇದರಿಂದ ಅನ್ನದಾತರ ಮುಖದಲ್ಲಿ ಮಂದಹಾಸ ಹೆಚ್ಚಿದಂತಾಗಿದೆ.












Click it and Unblock the Notifications