• search
  • Live TV
ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಓಡೋಡಿ ಬಂದು ಕುರಿಹಟ್ಟಿಯಲ್ಲಿ ಪ್ರೇಮಿಗಳ ಮದುವೆ"; ವೀಡಿಯೋ ವೈರಲ್

By ಚಿತ್ರದುರ್ಗ ಪ್ರತಿನಿಧಿ
|

ಚಿತ್ರದುರ್ಗ, ನವೆಂಬರ್ 9: ಮನೆ ಬಿಟ್ಟು ಹೋಗಿ ಮದುವೆಯಾದ ಪ್ರೇಮಿಗಳ ಕುರಿತು ಹೇಳುವಾಗ "ಓಡಿ ಹೋಗಿ ಮದುವೆಯಾದರು" ಎನ್ನುವುದನ್ನು ನೋಡಿದ್ದೇವೆ. ಆದರೆ ಈ ಪ್ರೇಮಿಗಳು ನಿಜವಾಗಿಯೂ ಓಡಿಬಂದೇ ಮದುವೆಯಾಗಿದ್ದಾರೆ. ಸಿನಿಮಾದಲ್ಲಿ ತೋರಿದಂತೆ ಓಡೋಡಿ ಬಂದು ತಾಳಿ ಕಟ್ಟಿಸಿಕೊಳ್ಳುವ ವೀಡಿಯೋವೊಂದು ಈಗ ಟಿಕ್ ಟಾಕ್ ನಲ್ಲಿ ವೈರಲ್ ಆಗುತ್ತಿದೆ.

ಈ ಪ್ರೇಮಿಗಳು ಚಿತ್ರದುರ್ಗ ಮೂಲದವರು. ನಾಲ್ಕು ವರ್ಷದಿಂದಲೂ ಪ್ರೀತಿಸುತ್ತಿದ್ದ ಈ ಜೋಡಿ ವಿಷಯ ಮನೆಯಲ್ಲಿ ನಾಲ್ಕು ತಿಂಗಳ ಹಿಂದಷ್ಟೇ ಗೊತ್ತಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪ್ರೇಮಿಗಳ ಮದುವೆಗೆ ವಿರೋಧವೂ ವ್ಯಕ್ತವಾಗಿದೆ. ಹುಡುಗಿ ಮನೆಯವರು ಹುಡುಗನಿಗೆ ಬುದ್ಧಿವಾದ ಹೇಳಿ ಸುಮ್ಮನಾಗಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಜೊತೆಗೆ ಈ ಹುಡುಗಿಯನ್ನು ಸಂಬಂಧಿಯೊಬ್ಬರಿಗೆ ಕೊಟ್ಟು ಮದುವೆ ಮಾಡುವ ಸಿದ್ಧತೆಯಲ್ಲಿಯೂ ಇದ್ದರು.

'ಟಿಕ್ ಟಾಕ್' ಪ್ರೇಮಿ ಪತ್ನಿಯನ್ನು ಹೊಡೆದು ಕೊಂದ ಪತಿ 'ಸಾಹಿಬ್'

ಆದರೆ ಮೊನ್ನೆ ಮಾರಿ ಹಬ್ಬಕ್ಕೆಂದು ಹುಡುಗಿ ತುಮಕೂರಿನಿಂದ ಊರಿಗೆ ಬಂದಿದ್ದಾಳೆ. ಬಹಿರ್ದೆಸೆಗೆ ಹೋಗುತ್ತೇನೆಂದು ಹೇಳಿ ಹುಡುಗನ ಹತ್ತಿರ ಓಡೋಡಿ ಬಂದು ತಾಳಿ ಕಟ್ಟಿಸಿಕೊಂಡಿದ್ದಾಳೆ. ಸಿನಿಮಾ ಶೈಲಿಯಲ್ಲಿ ಓಡೋಡಿ ಬಂದು ತಾಳಿ ಕಟ್ಟಿಸಿಕೊಂಡ ವೀಡಿಯೋ ಇದೀಗ ವೈರಲ್ ಆಗಿದೆ. ಕುರಿಹಟ್ಟಿ ಎದುರೇ ಈ ಪ್ರೇಮಿಗಳು ಮದುವೆ ಆಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಸೀಗೆಹಟ್ಟಿ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಈ ಮದುವೆ ನಡೆದಿದೆ. ಹುಡುಗ ಕುರಿ ಕಾಯುವವನಾಗಿದ್ದರೆ, ಹುಡುಗಿ ತುಮಕೂರಿನಲ್ಲಿ ಎಂ.ಎ ಪದವಿ ಓದುತಿದ್ದಾಳೆ.

ವೈರಲ್ ಆದ ಈ ಫೋಟೊ ಹಿಂದಿನ ಸತ್ಯಾಂಶ ಫ್ಯಾಕ್ಟ್ ಚೆಕ್ ನಲ್ಲಿ ಹೊರಬಿತ್ತು

ಇಬ್ಬರ ಕುಟುಂಬದ ಮಧ್ಯೆ ಇವರ ಪ್ರೀತಿ ವಿಚಾರವಾಗಿ ಜಗಳವಾಗಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವಿಚಾರ ರಾಜಿ ಪಂಚಾಯ್ತಿವರೆಗೂ ಹೋಗಿದ್ದು, ರಾಜಿ ಪಂಚಾಯ್ತಿ ವಿಫಲವಾದಾಗ ಹುಡುಗಿಯ ಮನೆಯವರು ಹುಡುಗನ ಮನೆಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The video of chitradurga lovers getting married went viral in tiktok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more