Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಗೆ ಕ್ಷಣಗಣನೆ ಬಾಕಿ.. ಪ್ರಸ್ತುತ ನೀರಿನ ಮಟ್ಟ ಎಷ್ಟಿದೆ?
Vani Vilasa Sagara Dam: ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ತಾಲೂಕಿನ ವಾಣಿ ವಿಲಾಸ ಸಾಗರ ಡ್ಯಾಂ ರಾಜ್ಯದ ಹಳೇ ಅಣೆಕಟ್ಟುಗಳಲ್ಲಿ ಒಂದಾಗಿದೆ. ಇದು ಇದೀಗ ಭರ್ತಿಯಾಗುವ ಸನಿಹದಲ್ಲಿದೆ. ಹಾಗಾದ್ರೆ ಇಂದು (ಅಕ್ಟೋಬರ್ 17) ನೀರಿನ ಮಟ್ಟ ಎಷ್ಟಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೋಟೆನಾಡು ಅಂತಲೆ ಪ್ರಸಿದ್ಧಿಯಾಗಿರುವ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನಲ್ಲಿರುವ ಈ ಜಲಾಶಯ ಈಗಾಗಲೇ 2025ರ ಜನವರಿಯಲ್ಲಿ ಮೊದಲ ಬಾರಿಗೆ ಭರ್ತಿಯಾಗಿತ್ತು. ಇದೀಗ ಇದೇ ವರ್ಷದಲ್ಲಿ ಎರಡನೇ ಬಾರಿ ಭರ್ತಿಯಾಗುವ ಸನಿಹದಲ್ಲಿದೆ.

ಇದೀಗ ಭರ್ತಿಯಾದ್ರೆ, ವರ್ಷದದಲ್ಲಿ ಎರಡನೇ ಬಾರಿ ತುಂಬಿದಂತಾಗಲಿದ್ದು, ಹೊಸ ದಾಖಲೆ ಆಗಲಿದೆ. ಯಾಕಂದ್ರೆ ಇದುವರೆಗೂ ವರ್ಷದಲ್ಲಿ ಎರಡು ಬಾರಿ ತುಂಬಿದ ಇತಿಹಾಸವಿಲ್ಲ. ಇದೀಗ ವಾಣಿ ವಿಲಾಸ ಸಾಗರ (ಮಾರಿಕಣಿವೆ) ಜಲಾಶಯ ಭರ್ತಿಯಾಗುವ ಹಂತದಲ್ಲಿದೆ. ಮತ್ತೊಂದೆಡೆ, ಇದುವರೆಗೂ ನಾಲ್ಕನೇ ಬಾರಿಗೆ ಕೋಡಿ ಬಿದ್ದ ಹೆಗ್ಗಳಿಕೆಗೆ ಪಾತ್ರವಾಗುವ ಸಾಧ್ಯತೆ ಹೆಚ್ಚಿದೆ.
ರಾಜ್ಯದ ಅತ್ಯಂತ ಹಳೆಯ ಅಣೆಕಟ್ಟುಗಳಲ್ಲಿ ಒಂದಾಗಿರುವ ವಾಣಿ ವಿಲಾಸ ಸಾಗರ ಜಲಾಶಯವನ್ನು 'ಮಾರಿಕಣಿವೆ' ಅಂತಲೂ ಕರೆಯಲಾಗುತ್ತದೆ. ಇದನ್ನು ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿದೆ. ಇದೀಗ ಈ ಜಲಾಶಯ ಇದುವರೆಗೂ ನಾಲ್ಕನೇ ಬಾರಿಗೆ ಭರ್ತಿಯಾಗಿ ದಾಖಲೆ ಸೃಷ್ಟಿಸಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ.
2025ರ ಆರಂಭದಲ್ಲಿ ಅಂದರೆ ಜನವರಿಯಲ್ಲಿ ವಾಣಿ ವಿಲಾಸ ಜಲಾಶಯ ಕೋಡಿ ಬಿದ್ದಿತ್ತು. ಅದು ಮಳೆ ನೀರಿನಿಂದಲ್ಲ, ಭದ್ರ ಡ್ಯಾಂನಿಂದ ಬಿಟ್ಟ ನೀರಿನಿಂದ. ಇನ್ನೂ ಇದೀಗ ಪ್ರಸ್ತುತ ಅಕ್ಟೋಬರ್ 17ರ ಶುಕ್ರವಾರ ನೀರಿನ ಮಟ್ಟ 129.75 ಅಡಿ ತಲುಪಿದೆ. ಇನ್ನೂ ಇದು 130 ಅಡಿಗೆ ಬಂದರೆ ಕೋಡಿ ಬೀಳಲಿದೆ. ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯ 130 ಅಡಿ (30 ಟಿಎಂಸಿ) ಆಗಿದ್ದು, ಇದೀಗ ನೀರಿನ ಮಟ್ಟ 129.75 ಅಡಿ ಇದ್ದರೆ, 1,455 ಕ್ಯೂಸೆಕ್ ಒಳಹರಿವು ಇದೆ. ಆದರೆ, ಹೊರಹರಿವಿಲ್ಲ.
ಯಾವ್ಯಾವಾಗ ಡ್ಯಾಂ ಭರ್ತಿ?: 1933ರಲ್ಲಿ ಜಲಾಶಯಕ್ಕೆ 135.25 ಅಡಿ ನೀರು ಸಂಗ್ರಹ ಆಗುವ ಮೂಲಕ ಮೊದಲ ಬಾರಿಗೆ ಕೋಡಿ ಬಿದ್ದು, ಇತಿಹಾಸ ಸೃಷ್ಟಿಸಿತ್ತು. ಬಳಿಕ 2022ರಲ್ಲಿ 135, 2025ರ ಜನವರಿ ತಿಂಗಳಲ್ಲಿ 130 ಅಡಿ ನೀರು ಬಂದಿದ್ದು, ಈ ವೇಳೆ ಕೋಡಿ ಬಿದ್ದು ಮೂರನೇ ಬಾರಿ ದಾಖಲೆ ಸೃಷ್ಟಿಸಿತ್ತು. ಇದೀಗ ಮತ್ತೆ ಭರ್ತಿಯಾದ್ರೆ, ನಾಲ್ಕನೇ ಬಾರಿ ಆದಂತಾಗಲಿದೆ.
ಯಾವ್ಯಾವ ವರ್ಷ ನೀರಿನ ಮಟ್ಟ ಎಷ್ಟು?: 1917ರಲ್ಲಿ 120.60 ಅಡಿ, 1918 - 121.30, 1919 - 128.30, 1920 - 125.50, 1932 - 125.50, ಅಡಿ, 1933 - 135.25 ಅಡಿ, 1934 - 130.24 ಅಡಿ, 1935 - 123.22 ಅಡಿ, 1956 - 125 ಅಡಿ, 1957 - 125.05 ಅಡಿ, 1958 - 124.50 ಅಡಿ, 2000 - 122.50 ಅಡಿ, 2021 - 125.50 ಅಡಿ, 2022 - 135 ಅಡಿ, 2024ರಲ್ಲಿ 128.40 ಅಡಿ, 2025 ಜನವರಿಯಲ್ಲಿ 130 ಅಡಿ ನೀರು ಸಂಗ್ರ ಆಗಿತ್ತು.
1907ರಲ್ಲಿ ನಿರ್ಮಾಣ ಆಗಿರುವ ಈ ಡ್ಯಾಂಗೆ ಸುಮಾರು 117 ವರ್ಷಗಳ ಕಾಲ ಇತಿಹಾಸ ಇದೆ. ಚಿಕ್ಕಮಗಳೂರು ಜಿಲ್ಲೆಯ ಬಾಬು ಬುಡನ್ ಗಿರಿ ಕಂದಕಗಳಲ್ಲಿ ಜನಿಸುವ "ವೇದಾ" ನದಿ ಕಡೂರಿನ ಬಳಿ "ಅವತಿ" ಎಂಬ ನದಿಯನ್ನು ಸೇರಿ ಮುಂದೆ 'ವೇದಾವತಿ' ನದಿಯಾಗಿ ಹರಿಯುತ್ತದೆ. ಇದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಜೀನವಾಡಿ ಆಗಿದೆ.
ಪ್ರಸ್ತುತ ನೀರಿನ ಮಟ್ಟ
* ನೀರಿನ ಸಂಗ್ರಹಣ ಸಾಮರ್ಥ್ಯ: 130 ಅಡಿ
* ಇಂದಿನ ನೀರಿನ ಮಟ್ಟ: 129.75 ಅಡಿ
* ಒಳಹರಿವು: 575 ಕ್ಯೂಸೆಕ್
-
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications