ಚಿತ್ರದುರ್ಗ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸದುರ್ಗದಲ್ಲಿ ಬಿಜೆಪಿ ಟಿಕೆಟ್‌ಗೆ ಪೈಪೋಟಿ: ಆಡಿಯೋ, ವಿಡಿಯೋ ಬಿಡುತ್ತಿರುವ ನಾಯಕರು

By ಚಿತ್ರದುರ್ಗ ಪ್ರತಿನಿಧಿ
|
Google Oneindia Kannada News

ಚಿತ್ರದುರ್ಗ : 2023 ರ ವಿಧಾನಸಭಾ ಚುನಾವಣೆಗೆ ಸುಮಾರು 15 ತಿಂಗಳು ಬಾಕಿ ಇದ್ದು ಈಗಾಗಲೇ ಬಿಜೆಪಿ ಪಕ್ಷದಲ್ಲಿ ಈಗಲೇ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದೆ.

ಹಾಲಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮತ್ತು ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ಮಧ್ಯೆ ಪೈಪೋಟಿ ಆರಂಭವಾಗಿದ್ದು, ಸಂಕ್ರಾಂತಿಯ ಸಂಭ್ರಮದ ಮಧ್ಯೆಯೇ ಆಡಿಯೋ, ವಿಡಿಯೋಗಳನ್ನು ಹರಿಬಿಡುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಮಧ್ಯೆ ಸಂಕ್ರಾಂತಿ ಹಬ್ಬದಂದೇ ಟಿಕೆಟ್ ಕ್ರಾಂತಿ ಶುರುವಾಗಿದೆ. 2023 ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾನೇ ಎಂದು ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿ ನಿನ್ನೆ ದೂರವಾಣಿ ಮೂಲಕ ಹೇಳಿಕೆ ನೀಡಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹೇಳಿಕೆ ಹೊಸದುರ್ಗ ಕ್ಷೇತ್ರದ ಮತದಾರರನ್ನು ನಿದ್ದೆಗೆಡಿಸಿತ್ತು.

Karnataka 2023 Assembly election: leaders fight for bjp ticket

ಈ ಹೇಳಿಕೆ ಕುರಿತು ವೀಡಿಯೋ ಮೂಲಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಗೂಳಿಹಟ್ಟಿ ಡಿ ಶೇಖರ್ ಅವರು 2023 ರಲ್ಲಿ ಬಿಜೆಪಿ ಅಭ್ಯರ್ಥಿ ನಾನೇ ಎಂದು ಖನಿಜ ನಿಗಮದ ಅಧ್ಯಕ್ಷ ಎಸ್. ಲಿಂಗಮೂರ್ತಿಗೆ ಗೂಳಿ ತಿವಿದಿದೆ.

ಶಾಸಕ ಗೂಳಿಹಟ್ಟಿ ಹೇಳಿದ್ದೇನು?:

'ಸಾಮಾನ್ಯ ಕ್ಷೇತ್ರವಾಗಿರುವ ಹೊಸದುರ್ಗ ಜನತೆ ನನ್ನನ್ನು 2008ರ ವಿಧಾನಸಭೆ ಚುನಾವಣೆ ಯಿಂದ ನನ್ನನ್ನು 2018 ರವರೆಗೂ ಮತದಾರರು ಕೈ ಹಿಡಿದಿದ್ದಾರೆ. ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ನನಗೆ 92 ಸಾವಿರ ಮತಗಳನ್ನು ನೀಡಿ ಆಯ್ಕೆ ಮಾಡಿದ್ದೀರಾ, ನಿಮ್ಮ ಋಣ ತೀರಿಸಲು ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಹೆಚ್ಚು ಹೆಚ್ಚು ಕೆಲಸ ಮಾಡಿಕೊಂಡು ಬಂದಿದ್ದೇನೆ. ಬರುವ ಮುಂದಿನ 2023ರ ಚುನಾವಣೆಯಲ್ಲೂ ಕೂಡ ನನ್ನ ಕೈ ಹಿಡಿಯಬೇಕು' ಎಂದು ಕ್ಷೇತ್ರದ ಜನತೆಗೆ ಶಾಸಕ ಗೂಳಿಹಟ್ಟಿ ಮನವಿ ಮಾಡಿಕೊಳ್ಳುವ ಮೂಲಕ ಕಾರ್ಯಕರ್ತರ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಲಿಂಗಮೂರ್ತಿ ಹೇಳಿಕೆಯಿಂದ ಇದೀಗ ಕ್ಷೇತ್ರದಲ್ಲಿ ಗೊಂದಲಗಳು ಸೃಷ್ಟಿಯಾಗಿದ್ದು, ಈ ಗೊಂದಲಗಳ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ನಾನು ನೀಡುತ್ತಿದ್ದೇನೆ ಎಂದು ಗೂಳಿ ಹಟ್ಟಿ ಸ್ಪಷ್ಟಪಡಿಸಿದರು. ಜಿಲ್ಲೆ ಹಾಗೂ ಹೊಸದುರ್ಗ ಕ್ಷೇತ್ರದಲ್ಲಿ ಸಂಕ್ರಾಂತಿ ಹಬ್ಬದಂದೆ ದಿನವೇ ಟಿಕೆಟ್ ಕ್ರಾಂತಿ ಪೈಟ್ ಶುರುವಾಗಿದೆ.

2008 ರಲ್ಲಿ ಗೂಳಿಹಟ್ಟಿ ಪಕ್ಷೇತರ ಅಭ್ಯರ್ಥಿ:

ಹಾಲಿ ಖನಿಜ ನಿಗಮದ ಅಧ್ಯಕ್ಷ ಎಸ್ ಲಿಂಗಮೂರ್ತಿ 2008 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈಗಿರುವ ಶಾಸಕ ಗೂಳಿಹಟ್ಟಿ ಡಿ ಶೇಖರ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿ ದಕ್ಷಿಣ ಭಾರತದ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಗೂಳಿಹಟ್ಟಿ ಕೂಡ ಕಾರಣಕರ್ತರಾಗಿ, ಮಾಜಿ ಮುಖ್ಯಮಂತ್ರಿ ಬಿಎಸ್ವೈ ಸರ್ಕಾರದಲ್ಲಿ ಸಚಿವರಾಗಿದ್ದರು. ಮತ್ತೆ 2013 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಎರಡನೇ ಬಾರಿಗೆ ಸ್ಪರ್ಧಿಸಿ ಬಿಜಿ.ಗೋವಿಂದಪ್ಪ ವಿರುದ್ಧ ಸೋಲು ಅನುಭವಿಸಿದ್ದರು.

ಇತ್ತ 2013ರಲ್ಲಿ ಎಸ್. ಲಿಂಗಮೂರ್ತಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಇಬ್ಬರ ಮಧ್ಯೆ ಗೋವಿಂದಪ್ಪ ಗೆಲುವು ಪಡೆದಿದ್ದರು. ಗೂಳಿಹಟ್ಟಿ ನಂತರ ಜೆಡಿಎಸ್ ಪಕ್ಷ ಸೇರಿ 2017 ರ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ತದನಂತರ 2018 ರಲ್ಲಿ ಗೂಳಿಹಟ್ಟಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಿದ್ದರು. ಸುಮಾರು 92 ಮತಗಳಿಂದ ಗೆಲುವು ಜಯ ಸಾಧಿಸಿದ್ದರು. ಇದೀಗ ಕ್ಷೇತ್ರದಲ್ಲಿ ಇಬ್ಬರು ನಾಯಕರ ನಡುವೆ ಟಿಕೆಟ್ ವಾರ್ ಶುರುವಾಗಿದ್ದು, ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೆ ಕುತೂಹಲ ಕೆರಳಿಸಿದೆ.

English summary
With nearly 15 months to go before the 2023 assembly elections, the BJP leaders are already started fighting for the ticket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X