Jet plane crash: ಹಿರಿಯೂರಿನ ವದ್ದಿಕೆರೆ ಬಳಿ ಡಿಆರ್‌ಡಿಓ ತರಬೇತಿ ಜೆಟ್ ವಿಮಾನ ಪತನ
ಚಿತ್ರದುರ್ಗ, ಆಗಸ್ಟ್, 20: ಡಿಆರ್‌ಡಿಓ ತರಬೇತಿ ಜೆಟ್ ವಿಮಾನ ಪತನವಾದ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ವದ್ದಿಕೆರೆ ಬಳಿ ಇಂದು (ಆಗಸ್ಟ್ 20) ಬೆಳಗ್ಗೆ ನಡೆದಿದೆ. ಸದ್ಯ ಈ ವೇಳೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೆಟ್ ವಿಮಾನ ಪತನವಾದ ಸ್ಥಳಕ್ಕೆ ಆಗಮಿಸಿದ ಡಿಆರ್‌ಡಿಓ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಘಟನೆ ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ವಾಯು ಸೇನೆಯ ಲಘು ವಿಮಾನ ಪತನ
ಇನ್ನು ಕೆಲವು ತಿಂಗಳ ಹಿಂದೆಯಷ್ಟೇ ಚಾಮರಾಜನಗರ ಜಿಲ್ಲೆಯ ಭೋಗಪುರದ ಬಳಿ ಭಾರತದ ವಾಯು ಸೇನೆಯ ಲಘು ವಿಮಾನ ಪತನವಾಗಿದ್ದು, ಈ ಘಟನೆಯಲ್ಲಿ ಪೈಲಟ್‌ಗಳಿಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಚಾಮರಾಜನಗರ ಜಿಲ್ಲೆಯ ಭೋಗಪುರದ ಬಳಿ ಜಮೀನುವೊಂದರಲ್ಲಿ ಲಘು ವಿಮಾಣ ಪತನವಾಗಿದ್ದು, ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸರು ದೌಡಾಯಿಸಿದ್ದರು. ಈ ವೇಳೆ ಘಟನಾ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ವಿಮಾನದಲ್ಲಿದ್ದ ಪೈಲಟ್‌ಗಳಿಬ್ಬರೂ ಪ್ಯಾರಾಚೋಟ್ ಮೂಲಕ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿತ್ತು.
ಪೈಲಟ್‌ಗಳು ಪಾರಾಗಿದ್ದು ಹೀಗೆ
ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿತ್ತು. ಇದೊಂದು ತರಬೇತಿ ವಿಮಾನ ಆಗಿದ್ದು, ಭೂಮಿಕಾ ಹಾಗೂ ತೇಜ್ ಪಾಲ್ ಎಂಬವರು ಈ ವಿಮಾನವನ್ನು ಚಲಾಯಿಸುತ್ತಿದ್ದರು.
ಪ್ಯಾರಚೂಟ್ ಮೂಲಕ ಇಬ್ಬರೂ ತಮ್ಮನ್ನು ಬಚಾವ್ ಮಾಡಿಕೊಂಡಿದ್ದು, ವಿಮಾನ ಪತನಗೊಂಡ 2 ಕಿಲೋ ಮಿಟರ್ ದೂರದಲ್ಲಿ ಇಬ್ಬರು ಬಿದ್ದಿದ್ದರು. ಸದ್ಯ, ಇಬ್ಬರನ್ನು ವಾಯುಸೇನೆಯವರು ಪತ್ತೆಹಚ್ಚಿ ರಕ್ಷಣೆ ಮಾಡಿದ್ದು, ಅವರನ್ನು ಬೆಂಗಳೂರಿಗೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಕರೆದೊಯ್ದಿದ್ದಾರೆ. ಇನ್ನು ಇಬ್ಬರಿಗೂ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿತ್ತು.












Click it and Unblock the Notifications