ಚಿತ್ರದುರ್ಗ: ಸೆಲ್ಫೀ ವಿಡಿಯೋ ಮಾಡಿಟ್ಟು ಸರ್ಕಾರಿ ನೌಕರ ಆತ್ಮಹತ್ಯೆ
ಚಿತ್ರದುರ್ಗ, ಮೇ 18: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ನೌಕರನೊಬ್ಬ ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.
ಚಿತ್ರದುರ್ಗ ನಗರಸಭೆಯ ದ್ವಿತೀಯ ದರ್ಜೆಯ ನೌಕರ ಶಶಿ(25) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ. ಈತ ಮೂಲತಃ ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನವನಾಗಿದ್ದು, ಚಿತ್ರದುರ್ಗ ನಗರಸಭೆಯಲ್ಲಿ ಎಸ್.ಡಿ.ಎ ನೌಕರನಾಗಿ ಕಾರ್ಯ ನಿರ್ವಹಿಸುತ್ತಿದ್ದ.
""ಕೊರೊನಾದಿಂದಾಗಿ ಜಾರಿಯಾಗಿದ್ದ ಲಾಕ್ ಡೌನ್ ಗೆ ಸಿಲುಕಿ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ನನಗೆ ಹಾಜರಾತಿ ಕೊಡದೆ ಸಂಬಳಕ್ಕೆ ಕತ್ತರಿ ಹಾಕಿದ್ದಾರೆ'' ಎಂದು ಸೆಲ್ಫೀ ವಿಡಿಯೋದಲ್ಲಿ ಹೇಳಿದ್ದಾನೆ.

ನನ್ನನ್ನು ಅಮಾನತು ಮಾಡಲು ಲೆಟರ್ ರೆಡಿ ಮಾಡಿದ್ದಾರೆ. ಹೀಗಾದರೆ ನನ್ನ ತಂದೆ-ತಾಯಿಗಳನ್ನು ಸಾಕುವುದು ಹೇಗೆ? ಬೇಕಂತಲೇ ಮೇಲಿನ ಅಧಿಕಾರಿಗಳು ನನಗೆ ತೊಂದರೆ ಕೊಡುತ್ತಿದ್ದಾರೆಂದು ಸೆಲ್ಫೀ ವೀಡಿಯೋ ಮಾಡಿ ಅಳಲು ತೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.












Click it and Unblock the Notifications