ಮಳೆಗೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಮನೆ ಕುಸಿತ, ತಾಯಿ ಸೇಫ್

ಚಿತ್ರದುರ್ಗ, ಅಕ್ಟೋಬರ್ 25: ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಸುರಿದ ಮಳೆಗೆ ಗುರುವಾರ ರಾತ್ರಿ ಶಾಸಕ ಗೂಳಿಹಟ್ಟಿ ಡಿ.ಶೇಖರ್ ಮನೆ ಕುಸಿದು ಬಿದ್ದಿದ್ದು, ತಾಯಿ ಪುಟ್ಟಮ್ಮ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಹೊಸದುರ್ಗ ತಾಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿರುವ ಈ ಮನೆ ಸರ್ಕಾರದಿಂದ ಮಂಜೂರಾಗಿದ್ದ ಜನತಾ ಮನೆಯಾಗಿದೆ. ಗೂಳಿಹಟ್ಟಿ ಶೇಖರ್ ಶಾಸಕರಾಗುವ ಮೊದಲೇ ಮಂಜೂರಾಗಿದ್ದ ಈ ಮನೆಯಲ್ಲಿ ಸದ್ಯಕ್ಕೆ ಅವರ ತಾಯಿ ಪುಟ್ಟಮ್ಮ ಒಬ್ಬರೇ ವಾಸವಾಗಿದ್ದರು.

ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ತಮಗೆ ಜನತಾ ಮನೆ ಒಂದೇ ಇರುವುದು ಎಂದು ಶಾಸಕರು ಘೋಷಿಸಿಕೊಂಡಿದ್ದರು.

Goolihatti Shekhar House Collapsed By Rain In Chitradurga

ತಮ್ಮ ಮಗ ಸಚಿವರಾಗಿದ್ದಾಗಲೂ ವೈಭೋಗದ ಜೀವನ ನಡೆಸದೆ ಜನತಾ ಮನೆಯಲ್ಲೇ ತಾಯಿ ವಾಸವಿದ್ದರು. ಮನೆ ಕುಸಿದ ನಂತರ ಮನೆಯ ಅವಶೇಷಗಳನ್ನು ತೆರವುಗೊಳಿಸಲಾಗಿದೆ. ಮನೆ ಕಳೆದುಕೊಂಡ ತಾಯಿ ಪುಟ್ಟಮ್ಮ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+