ದರ್ಶನ್‌ ಬಂಧನ: ಪ್ರತಿಭಟನೆ ನಡೆಸಿದ್ದಕ್ಕೆ ಮಾಜಿ ಶಾಸಕರಿಗೆ ಬೆದರಿಕೆ ಕರೆ ಮಾಡಿದ್ಯಾರು & ಹೇಳಿದ್ದೇನು?

ಚಿತ್ರದುರ್ಗ, ಜೂನ್‌, 13: ರೇಣುಕಾಸ್ವಾಮಿ ಕೊಲೆ ಪ್ರಕರಣ ಖಂಡಿಸಿಸಿ ನಟ ದರ್ಶನ್ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಮಾಜಿ ಶಾಸಕ ಜಿ.ಎಸ್.ತಿಪ್ಪಾರೆಡ್ಡಿ ಅವರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಚಿತ್ರದುರ್ಗದಲ್ಲಿ ಬುಧವಾರ (ಜೂನ್‌ 12) ನಟ ದರ್ಶನ್ ವಿರುದ್ಧ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆಯಲ್ಲಿ ಮಾಜಿ ಶಾಸಕ ತಿಪ್ಪಾರೆಡ್ಡಿ ಭಾಗಿಯಾಗಿ ನಟ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯೊಬ್ಬರು ಮಾಜಿ ಶಾಸಕ ತಿಪ್ಪಾರೆಡ್ಡಿ ಅವರಿಗೆ ಕರೆ ಮಾಡಿ, ನೀವು ದರ್ಶನ್ ವಿರುದ್ಧ ಏಕೆ ಪ್ರತಿಪಟಿಸುತ್ತಿದ್ದೀರಿ? ದರ್ಶನ್ ಕೊಲೆ ಮಾಡಿರುವುದಕ್ಕೆ ನಿಮಗೆ ಏನಾದರೂ ಸಾಕ್ಷಿಗಳು ಇದಾವಾ ಹೇಗೆ ಎಂದು ಪ್ರಶ್ನಿಸಿದ್ದಾರೆಂತೆ.

Darshan Arrest Case Who did threatening call to former MLA

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ. ಕೆರೆ ಮಾಡಿದ ವ್ಯಕ್ತಿ ಯಾರು, ಯಾಕೆ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ.

ಚಿತ್ರದುರ್ಗದಿಂದ ರೇಣುಕಾ ಸ್ವಾಮಿ ಅವರನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿರುವ ಆರೋಪಿಗಳಿಂದ ಸ್ಥಳ ಮಹಜರು ನಡೆಯಲಿದೆ. ನಾಲ್ವರು ಆರೋಪಿಗಳನ್ನು ಬೆಂಗಳೂರಿನಿಂದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಚಿತ್ರದುರ್ಗಕ್ಕೆ ಕರೆದುಕೊಂಡು ಬಂದು ಸ್ಪಾಟ್ ವೆರಿಫಿಕೇಷನ್ ಮಾಡಿಸಲಿದ್ದಾರೆ. ಎ3 ಆರೋಪಿಯ ಸಲಹೆ ಮೇರೆಗೆ ಕಿಡ್ನಾಪ್ ಮಾಡಿದ್ದ ರಾಘವೇಂದ್ರ, ಕಾರ್ತಿಕ್ , ನಂದಿಶ್, ಪವನ್‌ನಿಂದ ಕಾಮಾಕ್ಷಿ ಪಾಳ್ಯ ಪೊಲೀಸರು ಕಿಡ್ನಾಪ್ ಸ್ಥಳದಲ್ಲಿ ಮಹಜರು ಮಾಡಿಸಲಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ತಂದೆ ಹೇಳಿದ್ದೇನು?: ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಅವರ ತಂದೆ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಮನುಷ್ಯತ್ವ ಹಾಗೂ ಮಾನವೀಯತೆ ಇಲ್ಲ, ಇವರೆಲ್ಲ ಕೊಲೆಗಡಕರು ಎಂದು ಮೃತನ ತಂದೆ ಕಾಶಿನಾಥ ಶಿವನಗೌಡ ಕಣ್ಣೀರಿಡುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗನ ಅಂತ್ಯಕ್ರಿಯೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವರೆಲ್ಲ ದೊಡ್ಡ ದೊಡ್ಡ ಮನುಷ್ಯರು, ದೊಡ್ಡ ದೊಡ್ಡ ಸ್ಟಾರ್‌ಗಳು ಏನ್ರೀ? ಇದು ವ್ಯವಸ್ಥೆ ಎಂದು ಕಣ್ಣೀರಿಡುವ ಮೂಲಕ ಅಸಮಾಧನ ಹೊರಹಾಕಿದರು.

ಏನು ಮಾತಾಡೋದು, ಹೋದ ಮಗ ಬರ್ತಾನಾ? ಅವನ್ಯಾರೋ ಜೀವನ ಕೊಡ್ತಾನಾ? ಎಂದು ಪ್ರಶ್ನಿಸಿದರು. ಮಗನಿಗೆ ಎದೆ, ಮಾರ್ಮಾಂಗ, ಮುಖ, ಕಾಲು, ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಹೋಡೆದು ಸಾಯಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+