ಮುಳ್ಳಯ್ಯನಗಿರಿಯಲ್ಲಿ ಮೋಡಗಳ ಮಧ್ಯೆದಿಂದ ಧರೆಗೆ ಇಳಿದ ಇಂದ್ರಲೋಕ
ಚಿಕ್ಕಮಗಳೂರು, ಡಿಸೆಂಬರ್.25: ಇಂದು ಆ ಗಿರಿಯಲ್ಲಿ ತೆರೆದುಕೊಂಡ ಪ್ರಕೃತಿ ಸೌಂದರ್ಯ ಸ್ವರ್ಗವನ್ನೇ ನಾಚಿಸುವಂತಿತ್ತು. ಪ್ರವಾಸಿಗರ ಪಾಲಿಗೆ ಧರೆಯೇ ಇಂದ್ರಲೋಕದಂತೆ ಭಾಸವಾಗುತ್ತಿತ್ತು.
ಹಾಲಿನ ಕೆನೆಯಂತಿದ್ದ ಮೋಡಗಳು ಭೂಮಿಗೆ ಇಳಿದಂತೆ ಕಾಣುತ್ತಿತ್ತು.
ಇಂಥದೊಂದು ಲೋಕ ಸೃಷ್ಟಿಯಾಗಿದ್ದು ಯಾವುದೋ ವಿದೇಶದಲ್ಲಿಯಲ್ಲ. ಬದಲಿಗೆ ನಿಸರ್ಗ ಸೌಂದರ್ಯದ ಕಣಜವಾಗಿರುವ ಕಾಫಿನಾಡು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿಯಲ್ಲಿ. ಬೆಟ್ಟದ ಮೇಲೆ ಹಾಲನ್ನು ಚೆಲ್ಲಿದಂತೆ ಮೋಡಗಳು ಕೈಗೆ ಎಟಕುವಂತೆ ಕಾಣಿಸುತ್ತಿದ್ದವು.
ಬೆಳ್ಳಂಬೆಳಗ್ಗೆ ಕಾಫಿನಾಡಿನಲ್ಲಿ ಕಾಲ್ಕೆರೆದು ಕಾದಾಟಕ್ಕೆ ನಿಂತ ಗೂಳಿಗಳು
ಡಿಸೆಂಬರ್.25ರ ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಹಬ್ಬದ ಆಚರಣೆಗೆಂದು ಪ್ರವಾಸಕ್ಕೆ ಆಗಮಿಸಿದ್ದ ಪ್ರವಾಸಿಗರ ಪಾಲಿಗೆ ಇಂದು ಆ ಸ್ವರ್ಗವೇ ಎದುರಿಗೆ ಬಂದು ನಿಂತ ಹಾಗೆ ಗೋಚರಿಸುತ್ತಿತ್ತು.

ಇಡೀ ಮುಳ್ಳಯ್ಯನಗಿರಿ ಸುತ್ತಲೂ ಮಂಜು ಆವರಸಿಕೊಂಡು ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತಿತ್ತು. ಬಿಳಿಯ ಮೋಡಗಳೇ ಬೆಟ್ಟಗುಡ್ಡಗಳ ಮೇಲೆ ಚೆಲ್ಲಿದಂತೆ ಗೋಚರಿಸುತ್ತಿದ್ದು, ಪ್ರಕೃತಿ ಸೌಂದರ್ಯವನ್ನು ನೋಡುತ್ತಾ ನಿಂತ ಪ್ರವಾಸಿಗರು ನಿಬ್ಬೆರಗಾಗಿ ಹೋದರು.













Click it and Unblock the Notifications