ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ಳಂಬೆಳಗ್ಗೆ ಕಾಫಿನಾಡಿನಲ್ಲಿ ಕಾಲ್ಕೆರೆದು ಕಾದಾಟಕ್ಕೆ ನಿಂತ ಗೂಳಿಗಳು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್.25: ಬೆಳ್ಳಂಬೆಳಿಗ್ಗೆ ಚಿಕ್ಕಮಗಳೂರಿನ ನಡುರಸ್ತೆಯಲ್ಲೇ ಭರ್ಜರಿ ಗೂಳಿ ಕಾಳಗ ನಡೆಯಿತು. ಎರಡು ಗೂಳಿಗಳ ಕಾದಾಟ ಜನರನ್ನು ಆತಂಕಗೊಳಿಸುವ ಜೊತೆಗೆ ಮನರಂಜನೆಯನ್ನು ಸಹ ನೀಡಿದೆ.

ನಗರದ ಬಸವನಹಳ್ಳಿ ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಎದುರು ಎರಡು ಗೂಳಿಗಳು ಭರ್ಜರಿಯಾಗಿ ಕಾದಾಟ ನಡೆಸಿದವು. ನಿರಂತರ ಒಂದು ಗಂಟೆಗೂ ಹೆಚ್ಚು ಹೊತ್ತು ಗೂಳಿಗಳು ತಾ ಮೇಲು ನಾ ಮೇಲು ಎಂಬ ರೀತಿಯಲ್ಲಿ ಕಾಳಗ ನಡೆಸಿದವು.

ಮೂಡಿಗೆರೆಯಲ್ಲಿ ಜಾಲಿ ರೈಡ್ ತಂದ ಆಪತ್ತು; ವಿದ್ಯಾರ್ಥಿಗಳಿಬ್ಬರ ಸಾವುಮೂಡಿಗೆರೆಯಲ್ಲಿ ಜಾಲಿ ರೈಡ್ ತಂದ ಆಪತ್ತು; ವಿದ್ಯಾರ್ಥಿಗಳಿಬ್ಬರ ಸಾವು

ಬೆಳಿಗ್ಗೆ 7 ಗಂಟೆಗೆ ನಡುರಸ್ತೆಯಲ್ಲಿ ಪ್ರಾರಂಭವಾದ ಗೂಳಿಗಳ ಕಾಳಗ ಎಂಟು ಗಂಟೆಯಾದ್ರು ಮುಗಿದಿರಲಿಲ್ಲ. ಈ ಗೂಳಿ ಕಾಳಗದಿಂದ ನಗರದ ಬಸವನಹಳ್ಳಿ ಮುಖ್ಯರಸ್ತೆಯಲ್ಲಿ ನೆರೆದ ಜನರಿಗೆ ಒಂದು ಗಂಟೆಗಳ ಕಾಲ ಪುಗಸಟ್ಟೆ ಮನರಂಜನೆ ಸಿಕ್ಕಿತು.

Two Bulls Street Fight In The Chikkamagalur

ಸ್ಥಳೀಯರ ಬೆದರಿಕೆಗೂ ಅಂಜದೇ ಕಾದಾಟ:

ಬೆಳ್ಳಂಬೆಳಗ್ಗೆ ಕೋಡಿಗೆ ಕೋಡಿ ಹಾಯಿಸುತ್ತಾ ಕಾದಾಡುತ್ತಿದ್ದ ಗೂಳಿಗಳ ಕಾಳಗ ಕೆಲವರಿಗೆ ಮನರಂಜನೆಯಾದರೆ, ಇನ್ನು ಕೆಲವರಲ್ಲಿ ಆತಂಕವನ್ನು ಹುಟ್ಟಿಸುವಂತಿತ್ತು. ಇದರಿಂದ ಅಲ್ಲಿಯೇ ನೆರೆದಿದ್ದ ಜನರು ಗೂಳಿ ಕಾಳಗವನ್ನು ಬಿಡಿಸಲು ಅವುಗಳನ್ನು ಬೆದರಿಸಲು ಮುಂದಾದರು. ಆದರೆ, ಅದಕ್ಕ ಅಂಜದೇ ಬಿಟ್ಟು ಬಿಟ್ಟು ಗೂಳಿಗಳು ಕಾದಾಟಕ್ಕೆ ನಿಲ್ಲುತ್ತಿದ್ದವು. ಇನ್ನು, ನಡುರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಗೂಳಿ ಕಾಳಗದಿಂದ ಪರಿತಪಿಸುವಂತಾಯಿತು. ಕೊನೆಗೆ ಒಂದು ಗಂಟೆಗಳ ಕಾಲ ಕಾಳಗ ನಡೆಸಿದ ಗೂಳಿಗಳು ಸುಸ್ತಾಗಿ ಅಲ್ಲಿಂದ ವಾಪಸ್ ತೆರಳಿದವು.

English summary
Two Bulls Street Fight In The Chikkamagalur. Free Entertainment For City Peoples.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X