ಮೂಡಿಗೆರೆ ವಸತಿ ಶಾಲೆಯಲ್ಲಿ ಹಾಸಿಗೆಯೊಳಗಿಂದ ಬುಸುಗುಟ್ಟಿತು ಹಾವು

ಚಿಕ್ಕಮಗಳೂರು, ಡಿಸೆಂಬರ್ 13: ಚಿಕ್ಕಮಗಳೂರಿನ ವಸತಿ ಶಾಲೆಯೊಂದರಲ್ಲಿ ವಿದ್ಯಾರ್ಥಿ ಮಲಗುತ್ತಿದ್ದ ಹಾಸಿಗೆಯಲ್ಲಿ ಹಾವೊಂದು ಕಾಣಿಸಿಕೊಂಡು ಇಂದು ಶಾಲೆಯಲ್ಲಿ ಆತಂಕ ಸೃಷ್ಟಿಯಾಗಿತ್ತು.

ಇಂದು ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ತರುವೆಯಲ್ಲಿರುವ ಏಕಲವ್ಯ ವಸತಿ ಶಾಲೆಯಲ್ಲಿ ಇದ್ದಕ್ಕಿದ್ದಂತೆ ಹಾವೊಂದು ಕಾಣಿಸಿಕೊಂಡಿದೆ. ವಸತಿ ಶಾಲೆಯ ವಿದ್ಯಾರ್ಥಿಗಳ ಕೊಠಡಿಯಲ್ಲಿ, ಅದೂ ಹಾಸಿಗೆಯೊಳಗೆ ಸೇರಿಕೊಂಡಿದ್ದ ಹಾವು ಕಂಡು ಕ್ಷಣ ಕಾಲ ವಿದ್ಯಾರ್ಥಿಗಳು ಭಯಗೊಂಡಿದ್ದರು.

Snake Found In Bed In Residential School In Mudigere

ಅದು ಕೇರೆ ಹಾವಾಗಿದ್ದು, ಹಾವು ಹಿಡಿಯಲು ಆರಿಫ್ ಎಂಬುವರನ್ನು ಕರೆಸಲಾಯಿತು. ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳನ್ನು ಹೊರಗೆ ಕಳುಹಿಸಿ ಹಾವನ್ನು ಸೆರೆ ಹಿಡಿದರು. ಕೊನೆಗೂ ಹಾವು ಸೆರೆ ಸಿಕ್ಕಿದ್ದನ್ನು ಕಂಡು ವಿದ್ಯಾರ್ಥಿಗಳೂ ನಿಟ್ಟುಸಿರುಬಿಟ್ಟರು. ನಂತರ ಆ ಹಾವನ್ನು ಚಾರ್ಮಾಡಿ ಘಾಟ್ ಗೆ ಬಿಡಲಾಯಿತು.

ಚಾರ್ಮಾಡಿ ಘಾಟ್ ನ ಸಮೀಪದಲ್ಲೇ ಏಕಲವ್ಯ ವಸತಿ ಶಾಲೆ ಇರುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+