ಕೊಪ್ಪದಲ್ಲಿ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಗಮನ ಸೆಳೆದ ಕುರಿ

ಚಿಕ್ಕಮಗಳೂರು, ಅಕ್ಟೋಬರ್ 19: ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಯಲ್ಲಿ ಕುರಿಯೊಂದು ಪಾಲ್ಗೊಂಡು ಸ್ಥಳೀಯರನ್ನು ಅಚ್ಚರಿಗೊಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿ ನಡೆದಿದೆ.

ಕೊಪ್ಪ ಪಟ್ಟಣದ ಕುವೆಂಪು ನಗರದ ಮೀನು ವ್ಯಾಪಾರಿ ಹುಸೇನಬ್ಬ ಮೊನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅವರು ತೀರಿಕೊಂಡ ಕ್ಷಣದಿಂದ ಅವರ ಮೃತದೇಹದ ಬಳಿಯೇ ಇದ್ದ ಕುರಿ ಇಡೀ ರಾತ್ರಿ ಅಲ್ಲೇ ಕಳೆದು, ಮರುದಿನ ಮೃತದೇಹವನ್ನು ಸ್ಮಶಾನಕ್ಕೆ ಕರೆದೊಯ್ಯುವ ಮಾರ್ಗದಲ್ಲೂ ಜನಸಾಮಾನ್ಯರಂತೆ ಜೊತೆಯಲ್ಲೇ ನಡೆದುಕೊಂಡುಬಂದಿದೆ.

Sheep Participated In Funeral Of Man In Koppa

ಅಷ್ಟೆ ಅಲ್ಲದೇ, ಹುಸೇನ್ ಅವರ ಅಂತ್ಯ ಸಂಸ್ಕಾರ ಮಾಡುವುದನ್ನು ಇಣುಕಿ ಇಣುಕಿ ನೋಡಿ, ಆತ್ಮೀಯ ಗೆಳೆಯನಿಗೆ ಕಂಬನಿ ಮಿಡಿದಿದೆ. ಅಷ್ಟಕ್ಕೂ ಈ ಕುರಿ ಹುಸೇನಬ್ಬ ಅವರದ್ದಲ್ಲ. ಅವರ ಪಕ್ಕದ ಮನೆಯವರು ದೇವರಿಗೆಂದು ಹರಕೆಗೆ ಬಿಟ್ಟಿದ್ದ ಕುರಿ. ದಿನದ ಹೆಚ್ಚಿನ ಸಮಯವನ್ನು ಹುಸೇನ್ ಜೊತೆಯೇ ಕಳೆಯುತ್ತಿದ್ದ ಕುರಿ ಅವರ ಸಾವಿನ ಬಳಿಕ ಅಂತಿಮ ವಿದಾಯದವರೆಗೂ ಜೊತೆಗಿದ್ದು ಸಂತಾಪ ಸೂಚಿಸಿದೆ.

Sheep Participated In Funeral Of Man In Koppa

ಸತ್ತ ಮೇಲೂ ದ್ವೇಷ ಸಾಧಿಸುವ ಜನರ ಮಧ್ಯೆ ನಾಲ್ಕು ದಿನದ ಸ್ನೇಹವನ್ನು ನೆನೆದ ಈ ಕುರಿಯ ಪ್ರೀತಿ ಕಣ್ಣು ತೆರೆಸುವಂತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+