ವಿಡಿಯೋ; ಚಿಕ್ಕಮಗಳೂರಿನಲ್ಲಿ ಏಕಾಏಕಿ ಐಷಾರಾಮಿ ಕಾರುಗಳು ಕಾಣಿಸಿಕೊಂಡಿದ್ದೇಕೆ?

Recommended Video

      Chikkamagaluru Cops were seen providing security to these Super cars

      ಚಿಕ್ಕಮಗಳೂರು, ಫೆಬ್ರವರಿ 17: ಖಾಸಗಿ ರೆಸಾರ್ಟ್ ಗೆಂದು ಕೋಟಿ ಕೋಟಿ ಬೆಲೆ ಬಾಳುವ ಕಾರುಗಳಲ್ಲಿ ಬಂದ ಧನವಂತರಿಗೆ ಪೊಲೀಸರು ಭದ್ರತೆ ನೀಡಿ ಅವರನ್ನು ರೆಸಾರ್ಟ್ ವರೆಗೆ ಬಿಟ್ಟು ಬಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

      ನಿನ್ನೆ ಚಿಕ್ಕಮಗಳೂರಿನ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ, ದತ್ತಪೀಠ ಭಾಗದಲ್ಲಿ ಪ್ರವಾಸ ಮಾಡಿ ಜಾವರಿನ್ ರೆಸಾರ್ಟ್ ಗೆ ಹೋಗಲು ಸುಮಾರು 30ಕ್ಕೂ ಹೆಚ್ಚು ಕೋಟಿ ಕೋಟಿ ಬೆಲೆಬಾಳುವ ತರಹೇವಾರಿ ಐಷಾರಾಮಿ ಕಾರುಗಳು ರಸ್ತೆಯಲ್ಲಿ ಸಾಗುತ್ತಿದ್ದಂತೆ ಜನರು ಬೆರಗಾಗಿ ನೋಡುತ್ತಿದ್ದರು. ಆದರೆ ಈ ಕಾರುಗಳ ಹಿಂದೆ ಹಾಗೂ ಮುಂದೆ ಪೊಲೀಸರು ಬಂದು ರಕ್ಷಣೆ ಕೊಡುತ್ತಾ ಸಾಗಿದ್ದು ಏಕೆ ಎಂಬ ಅನುಮಾನ ಜನಸಾಮಾನ್ಯರಲ್ಲಿ ಮೂಡಿದೆ. "ಫೆರಾರಿ ಓನರ್ಸ್ ಕ್ಲಬ್" ಸದಸ್ಯರು ಚೆನ್ನೈನಿಂದ ಪುಣೆಗೆ ಚಿಕ್ಕಮಗಳೂರಿನ ಮಾರ್ಗವಾಗಿ ಈ ಕಾರುಗಳಲ್ಲಿ ಬಂದಿರುವುದಾಗಿ ತಿಳಿದುಬಂದಿದೆ. ಇದೇ ಸಂದರ್ಭ ಜಾವಾ ರೇನ್ ರೆಸಾರ್ಟ್ ನಲ್ಲಿ ತಂಗಿದ್ದಾರೆ.

      Police Gave Protection To Luxury Cars In Chikkamagaluru

      ಇನ್ನು ಈ ಬಗ್ಗೆ ಪೊಲೀಸರನ್ನು ಪ್ರಶ್ನಿಸಿದರೆ ನಾವು ಯಾವುದೇ ಸೆಕ್ಯೂರಿಟಿ ನೀಡಿಲ್ಲ. ಜನರು ಕಾರುಗಳನ್ನು ನೋಡಲು ಮುಗಿ ಬಿಳ್ತಾ ಇದ್ರು ಹಾಗಾಗಿ ಟ್ರಾಫಿಕ್ ನಿಯಂತ್ರಿಸಲು ಮುಂದಾಗಿದ್ದೆವು ಅಷ್ಟೇ ಎಂಬ ಸಮಜಾಯಿಷಿ ನೀಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+