ಕರ್ಫ್ಯೂ ಪಾಸನ್ನೂ ನಕಲಿ ಮಾಡಿದರು, ಪೊಲೀಸರಿಗೆ ಸಿಕ್ಕಿಬಿದ್ದರು
ಚಿಕ್ಕಮಗಳೂರು, ಏಪ್ರಿಲ್ 11: ಕೊರೊನಾ ವೈರಸ್ ಹರಡಿ ಆತಂಕ ಸೃಷ್ಟಿಯಾಗಿರುವ ಈ ಸಮಯವನ್ನೇ ಲಾಭಕ್ಕೆ ಬಳಸಿಕೊಂಡು, ಕರ್ಫ್ಯೂ ಪಾಸ್ ಅನ್ನೂ ನಕಲಿ ಮಾಡಿ ಮಾರಾಟ ಮಾಡುತ್ತಿದ್ದ ಸಂಗತಿ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಸೊಪ್ಪು, ತರಕಾರಿ ಮಾರಿದಂತೆ ಸರ್ಕಾರಿ ಪಾಸ್ ಗಳನ್ನು ನಕಲಿಸಿ ಮಾರುತ್ತಿದ್ದವರನ್ನು ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಇವರು ಕರ್ಫ್ಯೂ ಪಾಸ್, ವಾಹನಗಳ ಪಾಸ್ ಗಳನ್ನೇ ನಕಲಿ ಮಾಡಿ ಮಾರುತ್ತಿದ್ದುದು ತಿಳಿದುಬಂದಿದೆ.

ಪಾಸ್ ಗಳ ಪ್ರಿಂಟ್ ತೆಗೆದು ಅದನ್ನು 500, 1000 ರೂಳಿಗೆ ತಾಯಿ, ಮಗ ಸೇರಿಕೊಂಡು ಮಾರಾಟ ಮಾಡಿದ್ದಾರೆ. ಲಾಕ್ ಡೌನ್ ನಡುವೆ ಸರ್ಕಾರಿ ಪಾಸ್ ಮಾರುವುದನ್ನೇ ಬಿಸಿನೆಸ್ ಮಾಡಿಕೊಂಡಿದ್ದ ಇವರು ಇದುವರೆಗೂ 500 ರಿಂದ 600 ಪಾಸ್ ಗಳನ್ನು ಮಾರಿ ಲಾಭ ಮಾಡಿಕೊಂಡಿದ್ದಾರೆ. ಪೊಲೀಸರಿಗೆ ಈ ವಿಷಯ ಗಮನಕ್ಕೆ ಬಂದಿದ್ದು, ಅಮ್ಮ, ಮಗ ಇಬ್ಬರನ್ನೂ ಬಂಧಿಸಿದ್ದಾರೆ.












Click it and Unblock the Notifications